ನವದೆಹಲಿ: ಮೊಬೈಲ್ ಚಾರ್ಜ್ ಮಾಡಲೆಂದು ವಿಮಾನದ ಕಾಕ್ ಪಿಟ್ ಒಳಗೆ ಪ್ರವೇಶಿಸಿದ ಪ್ರಯಾಣಿಕನನ್ನು ಪೊಲೀಸರು ಬಂಧಿಸಿದ ಘಟನೆ ಇಂಡಿಗೋದ ಕೋಲ್ಕತ್ತಾ ಬೌಂಡ್ ವಿಮಾನದಲ್ಲಿ ಸೋಮವಾರ ನಡೆದಿದೆ. 


COMMERCIAL BREAK
SCROLL TO CONTINUE READING

ವಿಮಾನ ಇನ್ನೇನು ಟೆಕ್ ಆಫ್ ಆಗಬೇಕು ಎನ್ನುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಆತ ಮದ್ಯಪಾನ ಮಾಡಿದ್ದ ಎಂದು ತಿಳಿದುಬಂದಿದೆ. ಆ ಕೂಡಲೇ ಆತನನ್ನು ವಿಮಾನದಿಂದ ಹೊರಗೆ ಕಳುಹಿಸಲಾಗಿದೆ. ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ವಿಚಾರಣೆ ನಂತರ ಆತನನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ. 


ಈ ಬಗ್ಗೆ ಹೇಳಿಕೆ ನೀಡಿರುವ ಇಂಡಿಗೋ ವಕ್ತಾರ, "ಭದ್ರತಾ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಮುಂಬೈನಿಂದ ಕೊಲ್ಕತ್ತಾಗೆ ತೆರಳುತ್ತಿದ್ದ 6E-395 ವಿಮಾನದ ಕ್ಯಾಪ್ಟನ್ ಆ ಪ್ರಯಾಣಿಕನನ್ನು ವಿಮಾನದಿಂದ ಕೆಳಗಿಳಿಸಿದ್ದಾರೆ" ಎಂದಿದ್ದಾರೆ.