ನವದೆಹಲಿ: ಕಳೆದ 16 ಗಂಟೆಗಳಲ್ಲಿ ದಕ್ಷಿಣ ಕಾಶ್ಮೀರದ ಕುಲ್ಗಾಮ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ನಡೆದ ಎರಡು ಪ್ರತ್ಯೇಕ ಮುಖಾಮುಖಿಯಲ್ಲಿ, ಭದ್ರತಾ ಪಡೆಗಳು ಕನಿಷ್ಠ ನಾಲ್ಕು ಭಯೋತ್ಪಾದಕರನ್ನು ಹತ್ಯೆಗೈದಿದ್ದು, ಒಂದು ಎಂ 4 ಗನ್ ಸೇರಿದಂತೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.


ಬಿಹಾರ ಚುನಾವಣೆ:ಸೀಟು ಹಂಚಿಕೆ ಕುರಿತು NDA ನಲ್ಲಿ ಮೂಡಿದ ಒಮ್ಮತ, LJP ನಿರ್ಣಯದ ಬಳಿಕ ನಿರ್ಧಾರ


COMMERCIAL BREAK
SCROLL TO CONTINUE READING

ಇದಕ್ಕೂ ಮುನ್ನ ಕುಲ್ಗಾಮ್‌ನ ಚಿಂಗಂ ಪ್ರದೇಶದಲ್ಲಿ ಪ್ರಾರಂಭವಾದ ತಡರಾತ್ರಿ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಜೆ & ಕೆ ಪೊಲೀಸರೊಂದಿಗೆ ಇಬ್ಬರು ಜೈಶ್-ಎ-ಮೊಹಮ್ಮದ್ (ಜೆಎಂ) ಭಯೋತ್ಪಾದಕರನ್ನು ಕೊಂದು ಎಂ 4 ಗನ್‌ನಂತಹ ಅತ್ಯಾಧುನಿಕ ಶಸ್ತ್ರಾಸ್ತ್ರವನ್ನು ವಶಪಡಿಸಿಕೊಂಡವು.ಇಂದು ಬೆಳಿಗ್ಗೆ 8 ಗಂಟೆಗೆ ಎನ್‌ಕೌಂಟರ್ ಮುಕ್ತಾಯಗೊಂಡಿದೆ.


ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಾದ್ಯಂತ ಪಾಕ್ ನಿಂದ ದಾಳಿ


ಜೆ& ಕೆ ಪೊಲೀಸರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, 'ಎನ್‌ಕೌಂಟರ್‌ನಲ್ಲಿ 2  ಭಯೋತ್ಪಾದಕರು ಕೊಲ್ಲಲ್ಪಟ್ಟರು ಮತ್ತು ಅವರ ಶವಗಳನ್ನು ಎನ್‌ಕೌಂಟರ್ ಸ್ಥಳದಿಂದ ಹಿಂಪಡೆಯಲಾಗಿದೆ. ಅವರನ್ನು ಅಬ್ದುಲ್ ರಹಮಾನ್ ಮಿರ್ ಅವರ ಪುತ್ರ ತಾರಿಕ್ ಅಹ್ಮದ್ ಮಿರ್, ಜಂಗಲ್ಪೋರಾ ದಿವ್ಸರ್ ಕುಲ್ಗಾಮ್ ನಿವಾಸಿ ಮತ್ತು ಪಾಕಿಸ್ತಾನದ ಪ್ರಜೆಯಾಗಿ ಸಮೀರ್ ಭಾಯ್ ಎಂದು ಗುರುತಿಸಲಾಗಿದೆ ಪಾಕಿಸ್ತಾನದ ಪಂಜಾಬ್  ಉಸ್ಮಾನ್ ನಿವಾಸಿ ('ಎ' ವರ್ಗದ ಭಯೋತ್ಪಾದಕ), ಎನ್ನಲಾಗಿದೆ, ಇಬ್ಬರೂ ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಜೆಎಂ ಜೊತೆ ಸಂಬಂಧ ಹೊಂದಿದ್ದಾರೆ' ಎಂದು ತಿಳಿಸಿದ್ದಾರೆ.