ನವದೆಹಲಿ: ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಈಗ ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

2014 ರಲ್ಲಿ ವಯಸ್ಸಿನ ಕಾರಣದಿಂದಾಗಿ ಹಾರ್ದಿಕ್ ಪಟೇಲ್ ಗೆ ಸ್ಪರ್ಧಿಸಲು ಸಾಧ್ಯವಾಗಿರಲಿಲ್ಲ.ಈಗ ಅರ್ಹರಾಗಿವುದರಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ಕೈಗೊಂಡಿದ್ದಾರೆ. 2017 ರಲ್ಲಿ ತಾವು ಚುನಾವಣೆಗೆ ಸ್ಪರ್ಧಿಸುವ ವಿಚಾರವಾಗಿ ತಿಳಿಸಿದ್ದರು.ಈಗ ಯಾವ ಕ್ಷೇತ್ರದಿಂದ ಅವರು ಸ್ಪರ್ಧಿಸಲಿದ್ದಾರೆ ಎನ್ನುವ ವಿಚಾರವನ್ನು ತಿಳಿಸಿಲ್ಲ. ಆದರೆ ಮೂಲಗಳು ಹೇಳುವಂತೆ ಅಮ್ರೇಲಿ ಅಥವಾ ಮೆಹಸಾಣ ಇಲ್ಲವೇ ಎರಡು ಕ್ಷೇತ್ರಗಳಿಂದ ಚುನಾವಣಾ ಕಣಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


ಆದರೆ ಈಗ  ಮೆಹ್ಸಾನಕ್ಕೆ ಅವರ ಪ್ರವೇಶವನ್ನು ನಿಷೇಧ ಮಾಡಿರುವುದರಿಂದ ಅಮ್ರೇಲಿಯಿಂದ ಚುನಾವಣಾ ಕಣಕ್ಕೆ ಇಳಿಯುವ ಸಾಧ್ಯತೆ ಅಧಿಕವೆಂದು ಹೇಳಲಾಗುತ್ತಿದೆ.ಇನ್ನೊಂದೆಡೆಗೆ ಹಾರ್ದಿಕ್ ಪಟೇಲ್ ಗೆ ಕಾಂಗ್ರೆಸ್ ಕೂಡ ಬೆಂಬಲ ನೀಡಲಿದೆ ಎನ್ನಲಾಗುತ್ತಿದೆ.ಏಕೆಂದರೆ ಈ ಹಿಂದೆ ಒಂದು ವೇಳೆ ಹಾರ್ದಿಕ್ ಪಟೇಲ್ ಚುನಾವಣೆಗೆ ಸ್ಪರ್ಧಿಸುವುದಾದಲ್ಲಿ ತಮ್ಮ ಬೆಂಬಲವಿದೆ ಎಂದು ಕಾಂಗ್ರೆಸ್ ತಿಳಿಸಿತ್ತು.


ರಾಜಕೀಯ ವಿಶ್ಲೇಷಕರು ಹೇಳುವಂತೆ ಅಮ್ರೇಲಿ ಹಾರ್ದಿಕ್ ಪಟೇಲ್ ಅವರಿಗೆ ಸೇಫ್ ಕ್ಷೇತ್ರ ಎನ್ನಲಾಗುತ್ತಿದೆ, ಏಕೆಂದರೆ ಇಲ್ಲಿ ಈಗಾಗಲೇ ಕಳೆದ 2017 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಎಲ್ಲ ಐದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.ಇನ್ನೊಂದೆಡೆ ಕೊನೆಯ ಹಂತದಲ್ಲಿ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದರೂ ಅಚ್ಚರಿಪಡಬೇಕಿಲ್ಲ ಎನ್ನುವ ಅಭಿಪ್ರಾಯವನ್ನು ರಾಜಕೀಯ ವಿಶ್ಲೇಷಕರು ವ್ಯಕ್ತಪಡಿಸುತ್ತಿದ್ದಾರೆ.