Bail for Sanjay Raut: ಶಿವಸೇನಾ ನಾಯಕ ಹಾಗೂ ರಾಜ್ಯಸಭಾ ಸಂಸದ ಸಂಜಯ್ ರಾವತ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಸೆಷನ್ಸ್ ಕೋರ್ಟ್ ನಿಂದ ಜಾಮೀನು ಮಂಜೂರು ಮಾಡಿದೆ. ಮುಂಬೈನ ಪಿಎಂಎಲ್‌ಎ ನ್ಯಾಯಾಲಯ ಜಾಮೀನು ಅರ್ಜಿಯನ್ನು ಅಂಗೀಕರಿಸಿದೆ. ಪತ್ರಾ ಚಾಲ್ ಹಗರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಸಂಜಯ್ ರಾವತ್ ಪ್ರಸ್ತುತ ಆರ್ಥರ್ ರೋಡ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸಂಜಯ್ ರಾವತ್ ಅವರ ಆಪ್ತ ಸಹಾಯಕ ಪ್ರವೀಣ್ ರಾವತ್ ಕೂಡ ಪಿಎಂಎಲ್‌ಎ ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: “EWS Reservation ಕಾನೂನು ಬಾಹಿರವಲ್ಲ”: Supreme ಐತಿಹಾಸಿಕ ತೀರ್ಪು


102 ದಿನಗಳ ನಂತರ ಜೈಲಿನಿಂದ ಹೊರಬರುತ್ತಾರಾ ಸಂಜಯ್ ರಾವತ್?


ಪತ್ರಾ ಚಾಲ್ ಹಗರಣಕ್ಕೆ ಸಂಬಂಧಿಸಿದಂತೆ ಶಿವಸೇನಾ ಸಂಸದ ಸಂಜಯ್ ರಾವುತ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಈ ವರ್ಷ ಜುಲೈನಲ್ಲಿ ಬಂಧಿಸಿತ್ತು. ಇದಾದ ಬಳಿಕ ನ್ಯಾಯಾಲಯ ಸಂಜಯ್ ರಾವುತ್ ಅವರ ಜಾಮೀನು ಅರ್ಜಿಯನ್ನು ಹಲವು ಬಾರಿ ತಿರಸ್ಕರಿಸಿತ್ತು. ಇದೀಗ ಅವರು ನಿರಾಳವಾಗಿದ್ದು, 102 ದಿನಗಳ ಬಳಿಕ ಜೈಲಿನಿಂದ ಹೊರಬರಲಿದ್ದಾರೆ.


ಇದನ್ನೂ ಓದಿ: Honda City: ಹೋಂಡಾ ಸಿಟಿಗೆ 60 ಸಾವಿರ ಡಿಸ್ಕೌಂಟ್, ಈ 4 ಕಾರುಗಳ ಮೇಲೂ ಭರ್ಜರಿ ರಿಯಾಯಿತಿ!


ಏನಿದು ಪತ್ರಾ ಚಾಲ್ ಹಗರಣ?


ಪತ್ರಾ ಚಾಲ್ ಹಗರಣ ಪ್ರಕರಣವು 2007 ರಿಂದ ಪ್ರಾರಂಭವಾಯಿತು. ಪತ್ರಾ ಚಾಲ್ ಮುಂಬೈನ ಗೋರೆಗಾಂವ್ ಪ್ರದೇಶದಲ್ಲಿದೆ ಮತ್ತು ಈ ಸ್ಥಳವು 47 ಎಕರೆಗಳಷ್ಟು ವಿಸ್ತಾರವಾಗಿದೆ. ಆರಂಭದಲ್ಲಿ ಗುರು ಕನ್‌ಸ್ಟ್ರಕ್ಚರ್ ಕಂಪನಿಯು ಅದನ್ನು ಪುನರಾಭಿವೃದ್ಧಿ ಮಾಡಲು ಒಪ್ಪಂದವನ್ನು ತೆಗೆದುಕೊಂಡಿತು ಮತ್ತು ನಂತರ ಅದನ್ನು ಹೌಸಿಂಗ್ ಡೆವಲಪ್‌ಮೆಂಟ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (HDIL) ಸೇರಿದಂತೆ ಹಲವಾರು ಕಂಪನಿಗಳಿಗೆ ಮಾರಾಟ ಮಾಡಲಾಯಿತು. ಇಲ್ಲಿ 600ಕ್ಕೂ ಹೆಚ್ಚು ಮಂದಿಗೆ ಮನೆ ನೀಡಬೇಕಿದ್ದು, 15 ವರ್ಷ ಕಳೆದರೂ ಕಂಪನಿ ಜನರಿಗೆ ಫ್ಲ್ಯಾಟ್ ನೀಡಿಲ್ಲ. ಈ ಪ್ರಕರಣದಲ್ಲಿ, ಮಹಾರಾಷ್ಟ್ರ ವಸತಿ ಮತ್ತು ಅಭಿವೃದ್ಧಿ ಪ್ರಾಧಿಕಾರ (MHADA), ಪ್ರವೀಣ್ ರಾವುತ್, ಗುರು ಆಶಿಶ್ ಕನ್ಸ್ಟ್ರಕ್ಷನ್ ಮತ್ತು ಹೌಸಿಂಗ್ ಡೆವಲಪ್‌ಮೆಂಟ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (HDIL) ಕೈವಾಡವಿದೆ ಎಂದು ಆರೋಪಿಸಲಾಗಿತ್ತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.