ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈಲು ಮಾರ್ಗದಲ್ಲಿ ನಿರ್ವಹಣಾ ಕಾರ್ಯದಿಂದಾಗಿ ಯೆಲ್ಲೋ ಲೈನ್ ಮೆಟ್ರೋ ಸೇವೆ ಇಂದು ಮತ್ತು ನಾಳೆ ಪರಿಣಾಮ ಬೀರಲಿದೆ. ದೆಹಲಿ ಮೆಟ್ರೋ ರೈಲು ನಿಗಮ ತನ್ನ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ.


COMMERCIAL BREAK
SCROLL TO CONTINUE READING

ನಿಗಮವು ಟ್ವೀಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಫೆಬ್ರವರಿ 22 ಮತ್ತು 23 ರಂದು ವಿಶ್ವವಿದ್ಯಾಲಯ ಮತ್ತು ಕಾಶ್ಮೀರಿ ಗೇಟ್ ನಡುವಿನ ಮೆಟ್ರೋದ ಹಳದಿ ಲೈನ್ ನಲ್ಲಿ ಸೇವೆಯ ಮೇಲೆ ಪರಿಣಾಮ ಬೀರುತ್ತದೆ. ರೈಲು ಮಾರ್ಗದಲ್ಲಿ ನಿರ್ವಹಣಾ ಕಾರ್ಯದಿಂದಾಗಿ ಈ ಸೇವೆ ಎರಡು ದಿನಗಳವರೆಗೆ ಅಡಚಣೆಯಾಗುತ್ತದೆ ಎಂದು ತಿಳಿಸಿದೆ.


ಈ ಸಮಯದಲ್ಲಿ, ಒಂದು ಸಣ್ಣ ಲೂಪ್ ರೈಲು ಮೆಟ್ರೊದಿಂದ ಚಲಿಸುತ್ತದೆ. ಈ ಕಾರಣದಿಂದಾಗಿ, ಶಾರ್ಟ್‌ ಲೂಪ್‌ ರೈಲು ವಿಶ್ವವಿದ್ಯಾಲಯದಿಂದ ಸಮೈಪುರ್‌ ಬದ್ಲಿ ಮತ್ತು ಕಾಶ್ಮೀರಿ ಗೇಟ್‌ನಿಂದ ಹುಡಾ ಸಿಟಿ ಸೆಂಟರ್‌ವರೆಗೆ ಚಲಿಸಲಿದೆ. ಫೆಬ್ರವರಿ 22 ರಂದು ರಾತ್ರಿ 9: 30 ರ ನಂತರ ಪ್ರಯಾಣಿಕರಿಗೆ ಸಿಂಗಲ್ ಲೈನ್ ಮೆಟ್ರೋ ಸೇವೆ ಸಿಗಲಿದೆ. ಈ ಸೌಲಭ್ಯ ಫೆಬ್ರವರಿ 23 ರಂದು ಬೆಳಿಗ್ಗೆ 7:30 ರವರೆಗೆ ಇರುತ್ತದೆ.


ರೈಲಿನ ಸಮಯ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಮೆಟ್ರೋ ರೈಲು ನಿಗಮ ತಿಳಿಸಿದೆ. ಮೊದಲಿನಂತೆ ಪ್ರತಿ 15 ನಿಮಿಷಗಳಿಗೊಮ್ಮೆ ವಿಶ್ವವಿದ್ಯಾಲಯ ಮತ್ತು ಕಾಶ್ಮೀರಿ ಗೇಟ್ ನಡುವೆ ಮೆಟ್ರೋ ಚಲಿಸಲಿದೆ ಎಂದು ಮೆಟ್ರೋ ನಿಗಮ ಸ್ಪಷ್ಟಪಡಿಸಿದೆ.