ನವದೆಹಲಿ: ದೇಶದ ಪ್ರತಿಷ್ಟಿತ ಡಿಜಿಟಲ್ ವಾಲೆಟ್ ಪ್ಲಾಟ್ ಫಾರ್ಮ್ Paytm ತನ್ನ ಬಳಕೆದಾರರ ವಾಲೆಟ್ ಟ್ರಾನ್ಸಾಕ್ಷನ್ ಮೇಲೆ ಶುಲ್ಕ ವಿಧಿಸುತ್ತಿದೆ ಎಂಬ ವದಂತಿಯನ್ನು ಕಂಪನಿ ನಿರಾಕರಿಸಿದೆ. 


COMMERCIAL BREAK
SCROLL TO CONTINUE READING

ಒನ್ 97 ಕಮ್ಯುನಿಕೇಷನ್ಸ್ ಲಿಮಿಟೆಡ್ ಅನ್ನು ಸ್ವಾಧೀನಪಡಿಸಿಕೊಂಡ ಪೇಟಿಎಂ ಆಪ್ / ಪೇಮೆಂಟ್ ಗೇಟ್ವೆ ತನ್ನ ಗ್ರಾಹಕರಿಗೆ ಕಾರ್ಡ್‌ಗಳು, ಯುಪಿಐ, ನೆಟ್ ಬ್ಯಾಂಕಿಂಗ್ ಮತ್ತು ವ್ಯಾಲೆಟ್ ಮುಂತಾದ ಯಾವುದೇ ರೀತಿಯ ವಹಿವಾಟಿನ ಮೇಲೆ ಯಾವುದೇ ಶುಲ್ಕದ ಹೆಸರಿನಲ್ಲಿ ಹಣವನ್ನು ವಿಧಿಸುತ್ತಿಲ್ಲ ಎಂದು ನೋಯ್ಡಾ ಮೂಲದ ಕಂಪನಿ ಸ್ಪಷ್ಟಪಡಿಸಿದೆ. 


ಕೆಲವು ಮಾಧ್ಯಮ ವರದಿಗಳು ಪ್ರಕಟ
'ಪೇಟಿಎಂ ಬಳಕೆದಾರರು ಯಾವುದೇ ಶುಲ್ಕವಿಲ್ಲದೆ ಈ ಪ್ಲಾಟ್‌ಫಾರ್ಮ್‌ನಲ್ಲಿರುವ ಎಲ್ಲಾ ಸೌಲಭ್ಯಗಳನ್ನು ಬಳಸಬಹುದು" ಎಂದು ಕಂಪನಿ ಹೇಳಿದೆ. ಎಕನಾಮಿಕ್ ಟೈಮ್ಸ್ನ ಭಾನುವಾರದ ವರದಿಯ ಪ್ರಕಾರ, ಪೇಟಿಎಂ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಪಾವತಿಗೆ ಶೇ.1, ಡೆಬಿಟ್ ಕಾರ್ಡ್‌ಗಳ ಮೂಲಕ ಪಾವತಿ ಮಾಡಲು ಶೇ.0.9 ಮತ್ತು ನೆಟ್‌ಬ್ಯಾಂಕಿಂಗ್, ಯುಪಿಐ ಆಧಾರಿತ ವಿಧಾನಗಳ ಮೂಲಕ ಪಾವತಿಗೆ 12-15 ರೂ. ಸುಲಕ ವಸೂಲಿ ಮಾಡುತ್ತದೆ ಎಂದು ತಿಳಿಸಿತ್ತು.


ಭವಿಷ್ಯದಲ್ಲಿಯೂ ಯಾವುದೇ ಶುಲ್ಕ ವಿಧಿಸುವ ಯೋಜನೆಯಿಲ್ಲ
ಕಂಪನಿಯ ಪ್ರಕಾರ, ಶೈಕ್ಷಣಿಕ ಸೇವೆಗಳು ಅಥವಾ ಬೆನಿಫಿಟ್ ಸೇವಾ ಪೂರೈಕೆದಾರರಂತಹ ಕೆಲವು ವ್ಯಾಪಾರ ಸಂಸ್ಥೆಗಳು ವಿಧಿಸುವ ಕ್ರೆಡಿಟ್ ಕಾರ್ಡ್ ಶುಲ್ಕವನ್ನು ಕಡಿತಗೊಳಿಸಲು ಸಾಧ್ಯವಿಲ್ಲ. ಇದರಿಂದ ಹೊರಬರಲು ನಾವು ಗ್ರಾಮಕರಿಗೆ ಯುಪಿಐ ಅಥವಾ ಡೆಬಿಟ್ ಕಾರ್ಡ್ ಮೂಲಕ ಹಣ ಪಾವತಿ ಮಾಡಲು ತಿಳಿಸಿದ್ದೇವೆ. ಇದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಭವಿಷ್ಯದಲ್ಲಿಯೂ ಸಹ ಇಂತಹ ಶುಲ್ಕ ವಿಧಿಸುವ ಯೋಜನೆ ಇಲ್ಲ ಎಂದು ಕಂಪನಿ ತಿಳಿಸಿದೆ.