ನವದೆಹಲಿ: ಇಲ್ಲಿಯವರೆಗೆ ನಾವು ಹೆಚ್ಚಾಗಿ ಇ-ಕಾಮರ್ಸ್(Ecommerce) ಕಂಪನಿಗಳಲ್ಲಿ ಅಂತರರಾಷ್ಟ್ರೀಯ ಬ್ರಾಂಡ್‌ಗಳನ್ನು ನೋಡುತ್ತೇವೆ. ನಮ್ಮ ದೇಶದಲ್ಲಿ ತಯಾರಿಸಿದ ಉತ್ಪನ್ನಗಳಿಗೆ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಅಗತ್ಯವಿರುವಷ್ಟು ಸ್ಥಳ ಅಥವಾ ಪ್ರಚಾರ ಸಿಗುವುದಿಲ್ಲ. ಆದರೆ, ಸ್ಥಳೀಯ ಸರಕುಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗೆ ತರಲು ಕೇಂದ್ರ ಸರ್ಕಾರ ತನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದೆ.


COMMERCIAL BREAK
SCROLL TO CONTINUE READING

ಈ ಸಂಚಿಕೆಯಲ್ಲಿ, ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಪೇಟಿಎಂ(Paytm) ಭಾರತೀಯ ಸರಕುಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗೆ ತರುವ ಭರವಸೆ ನೀಡಿದೆ.


ಆಗ್ನೇಯ ಏಷ್ಯಾ, ಪಶ್ಚಿಮ ಏಷ್ಯಾ, ಆಫ್ರಿಕಾ ಮತ್ತು ಯುಎಸ್ ನಂತಹ ಮಾರುಕಟ್ಟೆಗಳಿಗೆ ಭಾರತೀಯ ಉತ್ಪನ್ನಗಳನ್ನು ಸಾಗಿಸಲು ಅದರ ಅಂಗಸಂಸ್ಥೆ ಪೇಟಿಎಂ(Paytm) ಸಗಟು ವಾಣಿಜ್ಯ (ಪಿಡಬ್ಲ್ಯೂಸಿ) ಹಲವಾರು ಸಂಸ್ಥೆಗಳೊಂದಿಗೆ ಸಹಭಾಗಿತ್ವವನ್ನು ಹೊಂದಿದೆ ಎಂದು ಪೇಟಿಎಂ ಮಾಲ್ ಹೇಳಿದೆ.


ಪೇಟಿಎಂ ಮಾಲ್ (ಪೇಟಿಎಂ ಇಕಾಮರ್ಸ್ ಪ್ರೈವೇಟ್ ಲಿಮಿಟೆಡ್) ನ ಅಂಗಸಂಸ್ಥೆಯಾದ ಪಿಡಬ್ಲ್ಯೂಸಿ ಒಂದು 'ಟ್ರೇಡಿಂಗ್ ಹೌಸ್' ಆಗಿದ್ದು, ಕೆಲವು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಪೇಟಿಎಂ ತಿಳಿಸಿದೆ.


ಮಧ್ಯವರ್ತಿಗಳು ಮತ್ತು ವ್ಯಾಪಾರ ಪ್ರದರ್ಶನಗಳ ಮೂಲಕ ಖರೀದಿದಾರರನ್ನು ಹುಡುಕುತ್ತಿದೆ ಎಂದು ಪೇಟಿಎಂ ಹೇಳಿದೆ.


ಪೇಟಿಎಂ ಮಾಲ್‌ನ ಹಿರಿಯ ಉಪಾಧ್ಯಕ್ಷ ಸಂಜೀವ್ ಮಿಶ್ರಾ, ಸಾಗರೋತ್ತರ ಮಾರುಕಟ್ಟೆಗಳಲ್ಲಿ ಹಲವಾರು ಶ್ರೇಣಿಯ ಭಾರತೀಯ ಉತ್ಪನ್ನಗಳನ್ನು ನೀಡಲು ಸಂಪೂರ್ಣ ಸಾಮರ್ಥ್ಯದೊಂದಿಗೆ ರಫ್ತು ವ್ಯವಹಾರಕ್ಕೆ ಪ್ರವೇಶಿಸಿದ್ದೇವೆ. ಮೇಡ್ ಇನ್ ಇಂಡಿಯಾ ಉತ್ಪನ್ನಗಳನ್ನು ಖರೀದಿಸಲು ಜಾಗತಿಕ ಗ್ರಾಹಕರಿಗೆ ಅತಿದೊಡ್ಡ ಮಾಧ್ಯಮವಾಗುವುದು ಇದರ ಪ್ರಯತ್ನ ಎಂದು ಹೇಳಿದರು.


ಪೇಟಿಎಂ ಮಾಲ್ ವಿದೇಶಿ ಮಾರುಕಟ್ಟೆಗೆ ತರುವ ಭಾರತೀಯ ಸರಕುಗಳಲ್ಲಿ ಅಕ್ಕಿ, ಮಸಾಲೆಗಳು, ಚಹಾ, ಒಣಗಿದ ಹಣ್ಣುಗಳು (ಒಣ ಹಣ್ಣುಗಳು), ತಾಜಾ ಹಣ್ಣುಗಳು ಮತ್ತು ತರಕಾರಿಗಳು, ರಾಗಿ, ಎಣ್ಣೆ, ಸಾವಯವ ಆಹಾರ, ದ್ವಿದಳ ಧಾನ್ಯಗಳು ಸೇರಿವೆ ಎಂದವರು ಮಾಹಿತಿ ನೀಡಿದರು.