ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು; ಅಂಗಿ ಹರಿದುಕೊಂಡು ಪಿಡಿಪಿ ಸಂಸದರಿಂದ ಪ್ರತಿಭಟನೆ
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿದ ಪಿಡಿಪಿಯ ರಾಜ್ಯಸಭೆ ಸಂಸದರಾದ ನಾಜಿರ್ ಅಹ್ಮದ್ ಲವಾಯ್ ಮತ್ತು ಎಂ.ಎಂ.ಫಯಾಜ್ ತಾವು ಧರಿಸಿದ್ದ ಅಂಗಿಯನ್ನು ಹರಿದುಕೊಂಡು ಪ್ರತಿಭಟನೆ ನಡೆಸಿದರು.
ನವದೆಹಲಿ: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ರದ್ದುಗೊಳಿಸುವುದಾಗಿ ಗೃಹ ಸಚಿವ ಅಮಿತ್ ಶಾ ಮಹತ್ವದ ಘೋಷಣೆ ಮಾಡಿದ ಬೆನ್ನಲ್ಲೇ ರಾಜ್ಯಸಭೆಯಲ್ಲಿ ಕೋಲಾಹಲ ಉಂಟಾಗಿದೆ.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿದ ಪಿಡಿಪಿಯ ರಾಜ್ಯಸಭೆ ಸಂಸದರಾದ ನಾಜಿರ್ ಅಹ್ಮದ್ ಲವಾಯ್ ಮತ್ತು ಎಂ.ಎಂ.ಫಯಾಜ್ ತಾವು ಧರಿಸಿದ್ದ ಅಂಗಿಯನ್ನು ಹರಿದುಕೊಂಡು ಪ್ರತಿಭಟನೆ ನಡೆಸಿದರು. ಅಷ್ಟೇ ಅಲ್ಲದೆ, ಎಂ.ಎಂ.ಫಯಾಜ್ ತೋಳಿಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿದರು.
ಅಷ್ಟೇ ಅಲ್ಲದೆ, ರಾಜ್ಯಸಭೆಯಲ್ಲಿ ಸಂವಿಧಾನದ ಪ್ರತಿಯನ್ನು ಹರಿದು ಪ್ರತಿಭಟಿಸಲು ಮುಂದಾದ ಸಂಸದ ಎಂ.ಎಂ.ಫಾಯಾಜ್ ಹಾಗೂ ಮತ್ತೋರ್ವ ಸಂಸದ ನಾಜಿರ್ ಅಹ್ಮದ್ ಇಬ್ಬರನ್ನೂ ಸದನದಿಂದ ಹೊರ ಹೋಗುವಂತೆ ಸಭಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಸೂಚಿಸಿದರು.