ನವದೆಹಲಿ: ಕರ್ನಾಟಕದ ರಾಯಚೂರು ಜಿಲ್ಲೆಯ ಜನರು ಟಿಆರ್‌ಎಸ್ ಸರ್ಕಾರದ ಕಲ್ಯಾಣ ಯೋಜನೆಗಳಿಂದ ಆಕರ್ಷಿತರಾಗಿ ತಮ್ಮ ಪ್ರದೇಶವನ್ನು ತೆಲಂಗಾಣಕ್ಕೆ ವಿಲೀನಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

2014ರಲ್ಲಿ ರಚಿಸಲಾದ ಹೊಸ ರಾಜ್ಯದಲ್ಲಿ ಟಿಆರ್‌ಎಸ್ ಅಧಿಕಾರಕ್ಕೆ ಬಂದ ನಂತರ 2016ರಲ್ಲಿ ರಚನೆಯಾದ ನೈರುತ್ಯ ತೆಲಂಗಾಣದ ಹೊಸ ಜಿಲ್ಲೆ ವಿಕಾರಾಬಾದ್‌ನಲ್ಲಿ ಹೊಸ ಕಲೆಕ್ಟರೇಟ್ ಸಂಕೀರ್ಣವನ್ನು ಉದ್ಘಾಟಿಸಿ ಕೆಸಿಆರ್ ಮಾತನಾಡಿದ್ದಾರೆ.


ಈ ಸಂದರ್ಭದಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕೆಸಿಆರ್, ‘ತೆಲಂಗಾಣ ಮತದಾರರು ‘ಬಿಜೆಪಿ ಧ್ವಜಗಳಿಗೆ ಮೋಸ ಹೋಗಬೇಡಿ’ ಎಂದು ತೆಲಂಗಾಣ ಮತದಾರರನ್ನು ಕೇಳಿಕೊಂಡರು. ರಾಜ್ಯವು ಪಶ್ಚಿಮ ತೆಲಂಗಾಣದ ಮುನುಗೋಡೆಯಲ್ಲಿ ಮತ್ತೊಂದು ಉಪಚುನಾವಣೆಗೆ ತಯಾರಿ ನಡೆಸುತ್ತಿದ್ದು, ಹಾಲಿ ಕಾಂಗ್ರೆಸ್ ಶಾಸಕ ರಾಜಗೋಪಾಲ್ ರೆಡ್ಡಿ ಈ ಸ್ಪರ್ಧಾಕಣದಲ್ಲಿದ್ದಾರೆ. ಪ್ರಸ್ತುತ ಅವರು ಟಿಆರ್‌ಎಸ್‍ಗೆ ರಾಜೀನಾಮೆ ನೀಡಿದ್ದು, ಬಿಜೆಪಿ ಕಡೆಯಿಂದ ಸ್ಪರ್ಧಿಸುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ.


ಇದನ್ನೂ ಓದಿ: Super Vasuki: ಭಾರತದ ಅತಿ ಉದ್ದದ ರೈಲಿನ ಬಗ್ಗೆ ನಿಮಗೆಷ್ಟು ಗೊತ್ತು..?


‘ಕರ್ನಾಟಕದೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ಗಡಿ ಪ್ರದೇಶವಾದ ತಾಂಡೂರಿಗೆ ನೀವು ಹತ್ತಿರದಲ್ಲಿದ್ದೀರಿ. ರಾಯಚೂರಿನ ಕೆಲವು ಗಡಿ ಭಾಗದ ಜನರು ತಮ್ಮನ್ನು ತೆಲಂಗಾಣದೊಂದಿಗೆ ವಿಲೀನಗೊಳಿಸಬೇಕು ಅಥವಾ ನಮ್ಮ ರಾಜ್ಯದಲ್ಲಿ ಜಾರಿಗೆ ತಂದಿರುವ ಕಲ್ಯಾಣ ಕಾರ್ಯಕ್ರಮಗಳನ್ನು ಕರ್ನಾಟಕದಲ್ಲಿಯೂ ಒದಗಿಸಬೇಕೆಂದು ಒತ್ತಾಯಿಸುತ್ತಿದ್ದಾರೆ’ ಎಂದು ಕೆಸಿಅರ್ ಹೇಳಿದ್ದಾರೆ.


ಇದೇ ವೇಳೆ ತಮ್ಮ ಉಚಿತ ಕುಡಿಯುವ ನೀರು ‘ಮಿಷನ್ ಭಗೀರಥ’, ಗರ್ಭಿಣಿಯರಿಗೆ ಕೆಸಿಆರ್ ಕಿಟ್‌ಗಳಂತಹ ಉಪಕ್ರಮಗಳ ಬಗ್ಗೆ ಪ್ರಸ್ತಾಪಿಸಿದರು. ಹಾಲುಣಿಸುವ ತಾಯಂದಿರು, ಉಚಿತ ವಿದ್ಯುತ್, ಎಕರೆಗೆ ವಾರ್ಷಿಕ 10 ಸಾವಿರ ರೂ. ನೀಡುವ ಯೋಜನೆಗಳ ಬಗ್ಗೆ ಇದೇ ವೇಳೆ ಅವರು ಖುಷಿ ವ್ಯಕ್ತಪಡಿಸಿದರು.


ಈ ಹಿಂದೆಯೂ ಕೆಸಿಆರ್ ಇಂತಹ ಅನೇಕ ಹೇಳಿಕೆ ನೀಡಿದ್ದರು, ನಾಂದೇಡ್‍ನಂತಹ ಮಹಾರಾಷ್ಟ್ರದ ಕೆಲ ಗಡಿ ಪ್ರದೇಶಗಳನ್ನು ಉಲ್ಲೇಖಿಸಿ, ಮತದಾರರು ಬುದ್ಧಿವಂತಿಕೆಯಿಂದ ಯೋಚಿಸುವಂತೆ ಕರೆ ನೀಡಿದರು. ‘ಹೊಸ ರಾಜ್ಯ ಅಸ್ತಿತ್ವಕ್ಕೆ ಬಂದ ನಂತರ ಅಖಂಡ ಆಂಧ್ರಪ್ರದೇಶದಡಿ ಹಿನ್ನಡೆ ಅನುಭವಿಸಿದ ಪ್ರದೇಶವು ಅಭಿವೃದ್ಧಿ ಹೊಂದಲು ಪ್ರಾರಂಭಿಸಿದೆ. ಬೇರೆ ಯಾವುದೇ ರಾಜ್ಯಗಳು ನಮ್ಮ ಯೋಜನೆಗಳನ್ನು ಹೊಂದಿಲ್ಲ. ಹಿಂದಿನ ರೈತರು ನಗರಗಳಲ್ಲಿ ಆಟೋ-ರಿಕ್ಷಾ ನಡೆಸುತ್ತಿದ್ದರು. ಆದರೆ ಈಗ ಗ್ರಾಮಾಂತರವು ಸಹ ಅಭಿವೃದ್ಧಿ ಹೊಂದುತ್ತಿದೆ. ತೆಲಂಗಾಣದಲ್ಲಿ 1 ಎಕರೆ ಜಮೀನು ನೆರೆಯ ರಾಜ್ಯಗಳಲ್ಲಿ 3 ಎಕರೆಯ ಮೌಲ್ಯ ಹೊಂದಿದೆ’ ಎಂದು ಕೆಸಿಆರ್ ಹೇಳಿದರು.


ಇದನ್ನೂ ಓದಿ: Breaking News : ಬಿಜೆಪಿ ಸಂಸದೀಯ ಮಂಡಳಿಯನ್ನು ಘೋಷಿಸಿದ ನಡ್ಡಾ : ಸಚಿವ ಗಡ್ಕರಿ ಔಟ್


ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೆಸಿಆರ್, ‘ತೆಲಂಗಾಣ ರಾಜ್ಯಕ್ಕೆ ಹೆಚ್ಚಿನ ಕೃಷ್ಣಾ ನೀರು ಹಂಚಿಕೆಗೆ ಬೇಡಿಕೆ ಇಟ್ಟಿರುವ ಪ್ರಧಾನಿ ಮೋದಿ ತೆಲಂಗಾಣಕ್ಕೆ ಶತ್ರುವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ಕಳೆದ 8 ವರ್ಷಗಳಲ್ಲಿ ಬಿಜೆಪಿ ಮಾಡಿದ ಒಂದೇ ಒಂದು ಒಳ್ಳೆಯ ಕೆಲಸವನ್ನು ನನಗೆ ತೋರಿಸಿ. ಅವರು ನಮ್ಮ ಕಲ್ಯಾಣ ಯೋಜನೆಗಳನ್ನು ಉಚಿತ ಎಂದು ಕರೆಯುತ್ತಾರೆ. ರಾಜ್ಯದಲ್ಲಿ ಉತ್ತಮ ಸರ್ಕಾರ ಬಂದರೆ ಸಾಕಾಗುವುದಿಲ್ಲ. ದೇಶದಲ್ಲಿನ ನಿರುದ್ಯೋಗ, ನಮ್ಮ ರೂಪಾಯಿ ಮೌಲ್ಯ ನೋಡಿ ಎಲ್ಲಿದೆ? ಬಿಜೆಪಿ ಸರ್ಕಾರ ದೊಡ್ಡ ಉದ್ಯಮಿಗಳ ಲಾಭಕ್ಕಾಗಿ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಅವರನ್ನು ಮನೆಗೆ ಕಳುಹಿಸಿ ಉತ್ತಮ ಸರ್ಕಾರವನ್ನು ತರಬೇಕು’ ಎಂದು ಹೇಳಿದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.