RSS Chief On Lynching: ಲಿಂಚಿಂಗ್ ಮಾಡುವವರು ಹಿಂದುತ್ವದ ವಿರೋಧಿಗಳು, ರಾಜಕೀಯದಿಂದ ಐಕ್ಯತೆಗೆ ಧಕ್ಕೆ: RSS ಮುಖ್ಯಸ್ಥ ಮೋಹನ್ ಭಾಗವತ್
RSS Chief On Lynching - ಲಿಂಚಿಂಗ್ (Lynching) ಹಿಂದೂ ಧರ್ಮ ವಿರೋಧಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ರಾಜಕೀಯವನ್ನು ಏಕತೆಯನ್ನು ನಾಶಮಾಡುವ ಅಸ್ತ್ರವೆಂದು ಅವರು ಬಣ್ಣಿಸಿದ್ದಾರೆ.
ನವದೆಹಲಿ: RSS Chief On Lynching - ಲಿಂಚಿಂಗ್ (Lynching) ಹಿಂದೂ ಧರ್ಮ ವಿರೋಧಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ರಾಜಕೀಯವನ್ನು ಏಕತೆಯನ್ನು ನಾಶಮಾಡುವ ಅಸ್ತ್ರವೆಂದು ಅವರು ಬಣ್ಣಿಸಿದ್ದಾರೆ. ಭಾರತದಲ್ಲಿ ವಾಸಿಸುವ ಎಲ್ಲ ಜನರು ಯಾವುದೇ ಧರ್ಮಕ್ಕೆ ಸೇರಿದವರಾಗಿದ್ದರು ಕೂಡ ಅವರ ಡಿಎನ್‌ಎ ಒಂದೇ ಆಗಿರುತ್ತದೆ. ಮುಸ್ಲಿಂ ರಾಷ್ಟ್ರೀಯ ಮಂಚ್ (Muslim Rashtriya Manch) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್, ಹಿಂದೂ-ಮುಸ್ಲಿಂ ಐಕ್ಯತೆ (Hindu-Muslim Unity) ಒಂದು ಭ್ರಾಂತಿಯಾಗಿದೆ. ಏಕೆಂದರೆ ಅವು ಬೇರೆ ಬೇರೆ ಬೇರೆಯಾಗಿರದೆ ಒಂದೆಯಾಗಿವೆ. ಜನರು ಪೂಜಿಸುವ ವಿಧಾನದ ಆಧಾರದ ಮೇಲೆ ತಾರತಮ್ಯ ಮಾಡಲಾಗುವುದಿಲ್ಲ.
ಇದನ್ನೂ ಓದಿ-New Uttarakhand CM : ಉತ್ತರಾಖಂಡದ 11ನೇ ಸಿಎಂ ಆಗಿ ಪುಷ್ಕರ್ ಸಿಂಗ್ ಧಮಿ ಅಧಿಕಾರ ಸ್ವೀಕಾರ!
"ರಾಜಕೀಯದಿಂದ ಸಾಧ್ಯವಾಗದ ಹಲವು ವಿಷಯಗಳಿವೆ. ರಾಜಕೀಯವು ಜನರನ್ನು ಒಂದುಗೂಡಿಸಲು ಸಾಧ್ಯವಿಲ್ಲ, ರಾಜಕೀಯವು ಜನರನ್ನು ಒಂದುಗೂಡಿಸುವ ಸಾಧನವಾಗಲು ಸಾಧ್ಯವಿಲ್ಲ, ಆದರೆ ಅದು ಏಕತೆಯನ್ನು ನಾಶಮಾಡುವ ಸಾಧನವಾಗಿ ಪರಿಣಮಿಸಬಹುದು. ಏಕತೆಯ ಆಧಾರವು ರಾಷ್ಟ್ರೀಯತೆ ಮತ್ತು ಪೂರ್ವಜರ ವೈಭವವಾಗಿರಬೇಕು" ಎಂದು ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ.
ಇದನ್ನೂ ಓದಿ-Provident Fund - ನೌಕರಿ ಬದಲಾಯಿಸಿದಾಗ ತಕ್ಷಣ PF ಹಣ ಹಿಂಪಡೆಯಬೇಡಿ, ದೊಡ್ಡ ಹಾನಿ ಸಂಭವಿಸುತ್ತದೆ
ನಾವು ಪ್ರಜಾಪ್ರಭುತ್ವ ದೇಶದಲ್ಲಿ (Democratic Country) ವಾಸಿಸುತ್ತಿದ್ದೇವೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥರು ಹೇಳಿದ್ದಾರೆ. ಅದು ಹಿಂದೂಗಳ ಅಥವಾ ಮುಸ್ಲಿಮರ ಪ್ರಾಬಲ್ಯವಲ್ಲ. ಭಾರತೀಯರು ಮಾತ್ರ ಪ್ರಾಬಲ್ಯ ಸಾಧಿಸಬಹುದು. ಜನಸಮೂಹದಿಂದ ಲಿಂಚಿಂಗ್ ಮಾಡುವವರು ಹಿಂದುತ್ವಕ್ಕೆ ವಿರುದ್ಧರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-ಮಾಡಿದ್ದುಣ್ಣೋ ಮಹರಾಯ! ಪಾಕ್ ಬಿಟ್ಟರೆ ಚೀನಾ ಬಳಿಯಿಂದ ಯಾರು ಶಸ್ತ್ರಾಸ್ತ್ರ ಖರೀದಿಸುತ್ತಿಲ್ಲವಂತೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.