ಮುಂಬೈ: ವೀರ್ ಸಾವರ್ಕರ್ ಅವರ ಸಿದ್ಧಾಂತವನ್ನು ನಂಬದ ಜನರನ್ನು ಸಾರ್ವಜನಿಕವಾಗಿ ಥಳಿಸಬೇಕು ಎಂದು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಶುಕ್ರವಾರ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ವೀರ್ ಸಾವರ್ಕರ್ ಅವರನ್ನು ನಂಬದ ಜನರನ್ನು ಸಾರ್ವಜನಿಕವಾಗಿ ಥಳಿಸಬೇಕು. ಏಕೆಂದರೆ ಅವರು ಭಾರತದ ಸ್ವಾತಂತ್ರ್ಯದಲ್ಲಿ ವೀರ್ ಸಾವರ್ಕರ್ ಅವರ ಹೋರಾಟ ಮತ್ತು ಮಹತ್ವವನ್ನು ಅರಿತುಕೊಳ್ಳುವುದಿಲ್ಲ. ರಾಹುಲ್ ಗಾಂಧಿ ಕೂಡ ಈ ಹಿಂದೆ ವೀರ್ ಸಾವರ್ಕರ್ ಅವರನ್ನು ಅವಮಾನಿಸಿದ್ದಾರೆ ಎಂದು ಅವರು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.


ದೆಹಲಿ ವಿಶ್ವವಿದ್ಯಾನಿಲಯದ ಉತ್ತರ ಕ್ಯಾಂಪಸ್‌ನಲ್ಲಿರುವ ಕಲಾ ವಿಭಾಗದ ಹೊರಗೆ ಅಖಿಲ ಭಾರತೀಯ ವಿದ್ಯಾ ಪರಿಷತ್ (ಎಬಿವಿಪಿ) ಮಂಗಳವಾರ ಸಾವರ್ಕರ್‌ ಪ್ರತಿಕೃತಿ ಸ್ಥಾಪಿಸಿದ ನಂತರ ಇದಕ್ಕೆ ರಾಷ್ಟ್ರೀಯ ವಿದ್ಯಾರ್ಥಿ ಸಂಘ (ಎನ್‌ಎಸ್‌ಯುಐ) ಕಪ್ಪು ಮಸಿ ಬಳಿಯಿತು. ಇದಾದ ನಂತರ ಠಾಕ್ರೆ ಅವರ ಹೇಳಿಕೆಗಳು ಬಂದಿವೆ.ಎಬಿವಿಪಿ ಸಾವರ್ಕರ್ ಮೂರ್ತಿ ಜೊತೆಗೆ ನೇತಾಜಿ ಸುಭಾಸ್ ಚಂದ್ರ ಬೋಸ್ ಮತ್ತು ಭಗತ್ ಸಿಂಗ್ ಅವರ ಪ್ರತಿಮೆಗಳನ್ನು ಸ್ಥಾಪಿಸಿತ್ತು.