ನವದೆಹಲಿ: ಎನ್ ಆರ್ ಸಿ ಪಟ್ಟಿಯಿಂದ ಹೊರಗೂಳಿದಿರುವ ಅಸ್ಸಾಂನಲ್ಲಿನ ನೊಂದಾಯಿತ ಮತದಾರರು ನ್ಯಾಯಮಂಡಳಿ ಅಂತಿಮ ತಿರ್ಮಾನ ತೆಗೆದುಕೊಳ್ಳುವವರೆಗೂ ಮತ ಚಲಾಯಿಸಬಹುದು ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ. 


COMMERCIAL BREAK
SCROLL TO CONTINUE READING

ಅನುಮಾನಾಸ್ಪದ ಅಥವಾ ‘ಡಿ’ ಮತದಾರರು ಅಸ್ಸಾಂನ ಮತದಾರರ ವರ್ಗವಾಗಿದ್ದು, ಅವರ ಪೌರತ್ವ ಅನಿಶ್ಚಿತ ಅಥವಾ ವಿವಾದದಲ್ಲಿದೆ.1997 ರಲ್ಲಿ, ರಾಜ್ಯದ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಸಮಯದಲ್ಲಿ ಚುನಾವಣಾ ಆಯೋಗ ಇದನ್ನು ಪರಿಚಯಿಸಿತು.


ಆಗಸ್ಟ್ 30 ರಂದು ಬಿಡುಗಡೆಯಾದ ಅಂತಿಮ ಎನ್‌ಆರ್‌ಸಿ 3.11 ಕೋಟಿ ಅರ್ಜಿದಾರರನ್ನು ನಾಗರಿಕರನ್ನಾಗಿ ಒಳಗೊಂಡಿತ್ತು ಅದರಲ್ಲಿ 19 ಲಕ್ಷ ಜನರನ್ನು ಹೊರಗಿಟ್ಟಿದೆ. ಈ ಪಟ್ಟಿಯ ಪ್ರಕಟನೆ ನಂತರ ಸೇರ್ಪಡೆ ಮಾಡದಿರುವುದು ವ್ಯಕ್ತಿ ಪೌರತ್ವವನ್ನು ಅನುಮಾನಾಸ್ಪದವಾಗಿಸುತ್ತದೆಯೇ ಮತ್ತು  ಪೌರತ್ವವನ್ನು ವಿದೇಶಿಯರ ನ್ಯಾಯಮಂಡಳಿಯು ನಿರ್ಧರಿಸುವವರೆಗೆ ಅವರನ್ನು ‘ಅನುಮಾನಾಸ್ಪದ’ ಎಂದು ಗುರುತಿಸಬೇಕೇ? ಎಂಬ ಕಾನೂನು ಪ್ರಶ್ನೆ ಚುನಾವಣಾ ಆಯೋಗಕ್ಕೆ ಎದುರಾಯಿತು. 


ಈ ಹಿನ್ನಲೆಯಲ್ಲಿ ಈ ಅನುಮಾನಗಳನ್ನು ಸ್ಪಷ್ಟಪಡಿಸಿದ ಕೇಂದ್ರ ಗೃಹ ಸಚಿವಾಲಯ ಎನ್‌ಆರ್‌ಸಿಯಲ್ಲಿ ಅವರ ಹೆಸರುಗಳ ಅನುಪಸ್ಥಿತಿಯು ಅವರನ್ನು ವಿದೇಶಿಯರು ಎಂದು ಘೋಷಿಸುವುದಕ್ಕೆ ಸಾಧ್ಯವಿಲ್ಲ ,ಅವರು ನ್ಯಾಯಮಂಡಳಿಗಳ ಮುಂದೆ ತಮ್ಮ ಪೌರತ್ವವನ್ನು ಸಾಬೀತುಪಡಿಸಲು ಅವರಿಗೆ ಅವಕಾಶವಿದೆ ಎಂದು ತಿಳಿಸಿದೆ.