ಅಮೇಥಿ: ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನ ಇಂದು 7 ರಾಜ್ಯಗಳಲ್ಲಿ ನಡೆಯುತ್ತಿದ್ದು, ಉತ್ತರಪ್ರದೇಶದ ಅಮೇಥಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತೊಮ್ಮೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಮತಗಟ್ಟೆ ವಶಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ, ಈ ಕುರಿತು ಜಿಲ್ಲಾಡಳಿತ ಮತ್ತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ರಾಹುಲ್​ ಗಾಂಧಿ ಅವರ ಇಂತಹ ರಾಜಕೀಯವನ್ನು ತಿರಸ್ಕರಿಸಬೇಕೋ ಅಥವಾ ಪುರಸ್ಕರಿಸಬೇಕೋ ಎಂಬುದನ್ನು ದೇಶದ ಜನತೆ ಪರಾಮರ್ಶಿಸಬೇಕು ಎಂದು ಸ್ಮೃತಿ ಹೇಳಿದ್ದಾರೆ.


ಅಮೇಥಿಯ ಮತಗಟ್ಟೆ ಸಂಖ್ಯೆ 316ರಲ್ಲಿ ಮಹಿಳೆಯೊಬ್ಬರು ತಾನು ಬಿಜೆಪಿಗೆ ಮತ ಹಾಕಲು ಬಯಸಿದ್ದಾಗ್ಯೂ ಅಲ್ಲಿನ ಕರ್ತವ್ಯ ನಿರತ ಅಧಿಕಾರಿಯೋರ್ವರು ತಾನು ಕಾಂಗ್ರೆಸ್‌ ಗೆ ಮತ ಹಾಕುವಂತೆ ಮಾಡಿದರು ಎಂದು ಹೇಳುವ ವೀಡಿಯೋ ವೈರಲ್ ಆದ ಬೆನ್ನಲ್ಲೇ ಪ್ರತಿಕ್ರಿಯಿಸಿದ ಸ್ಮೃತಿ ಇರಾನಿ ಅವರು ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.


ಗಾಂಧಿ ಕುಟುಂಬದ ಭದ್ರ ಕೋಟೆ ಎಂದು ತಿಳಿಯಲಾಗಿರುವ ಅಮೇಥಿ ಕ್ಷೇತ್ರದಲ್ಲಿ ರಾಹುಲ್‌ ಗಾಂಧಿ ವಿರುದ್ದ ಸ್ಮೃತಿ ಇರಾನಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.