ಮಥುರಾದ ಶಾಹಿ ಈದ್ಗಾ ಮಸೀದಿಯಲ್ಲಿ ಅಭಿಷೇಕಕ್ಕೆ ಅನುಮತಿ ಕೋರಿ ಅರ್ಜಿ, ಜುಲೈ 1ಕ್ಕೆ ವಿಚಾರಣೆ
Shahi Idgah mosque: ಹಿಂದೂ ಮಹಾಸಭಾ ಮಥುರಾದ ಶಾಹಿ ಈದ್ಗಾ ಮಸೀದಿಯಲ್ಲಿ ಅಭಿಷೇಕಕ್ಕೆ ಅನುಮತಿ ಕೋರಿ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಜುಲೈ 1 ರಂದು ಅರ್ಜಿ ವಿಚಾರಣೆ ನಡೆಯಲಿದೆ.
ಮಥುರಾ: ವಾರಣಾಸಿಯ ಜ್ಞಾನವಾಪಿ ಮಸೀದಿಯ ಕಾನೂನು ಹೋರಾಟದ ನಡುವೆಯೇ, ಶ್ರೀ ಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ಮಸೀದಿಯ ಮತ್ತೊಂದು ಭೂ ವಿವಾದ ಮುನ್ನೆಲೆಗೆ ಬಂದಿದೆ. ಮಥುರಾದಲ್ಲಿ ಸೋಮವಾರ ಹಿಂದೂ ಮಹಾಸಭಾ, ಶಾಹಿ ಈದ್ಗಾ ಮಸೀದಿಯಲ್ಲಿ ಅಭಿಷೇಕಕ್ಕೆ ಅನುಮತಿ ಕೋರಿ ಸಿವಿಲ್ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದೆ. ಜುಲೈ 1 ರಂದು ಈ ಅರ್ಜಿ ವಿಚಾರಣೆ ನಡೆಯಲಿದೆ. ಶ್ರೀಕೃಷ್ಣನ ನಿಜವಾದ ಜನ್ಮಸ್ಥಳ ಇರುವ ಆವರಣವನ್ನು ತೊಳೆದು ಶುದ್ಧೀಕರಿಸಲು ನಾವು ಅನುಮತಿ ಕೋರಿದ್ದೇವೆ. ಗಂಗಾ ಮತ್ತು ಯಮುನಾ ನದಿಗಳಿಂದ ತಂದ ನೀರಿನಿಂದ ಇದನ್ನು ಮಾಡಲಾಗುತ್ತದೆ ಎಂದು ಅರ್ಜಿದಾರರು ಹೇಳುತ್ತಾರೆ.
ಇದನ್ನೂ ಓದಿ: ಮೇ 27ಕ್ಕೆ ಬರಲಿದ್ದಾನೆ ‘ವ್ಹೀಲ್ ಚೇರ್ ರೋಮಿಯೋ’; ಆಲ್ ದಿ ಬೆಸ್ಟ್ ಹೇಳಿದ ಶಿವಣ್ಣ
ಶ್ರೀಕೃಷ್ಣ ಜನ್ಮಭೂಮಿಯ ಗರ್ಭಗುಡಿಯಲ್ಲಿ ಈದ್ಗಾ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹಿಂದೂ ಮಹಾಸಭಾದ ಖಜಾಂಚಿ ದಿನೇಶ್ ಶರ್ಮಾ ಮನವಿಯಲ್ಲಿ ಹೇಳಿದ್ದಾರೆ. ಪುರಾತನ ದೇವಾಲಯದ ವಿವಾದಿತ ಸ್ಥಳದಲ್ಲಿ 'ಅಭಿಷೇಕ' (ಶುದ್ಧೀಕರಣ) ಮತ್ತು ಭಗವಾನ್ ಕೃಷ್ಣನ ಪೂಜೆಯನ್ನು ಮಾಡಲು ಶಾಹಿ ಈದ್ಗಾ ಮಸೀದಿಯನ್ನು ಪ್ರವೇಶಿಸಲು ಅವರು ಅನುಮತಿ ಕೇಳಿದ್ದಾರೆ.
ದಿನೇಶ್ ಶರ್ಮಾ, ಅವರು ಮೊದಲು ಕತ್ತಿಗಳ ಬಲದಿಂದ ನಮ್ಮ ದೇವಾಲಯಗಳ ಮೇಲೆ ದಾಳಿ ಮಾಡಿದರು. ಆದರೆ ಈಗ ನಾವು ಪ್ರಾಚೀನ ಪರಂಪರೆಯನ್ನು ಹಿಂಪಡೆಯುತ್ತೇವೆ, ಮಸೀದಿಯನ್ನು ತೆಗೆದುಹಾಕಬೇಕು ಮತ್ತು ಹಿಂದೂಗಳ ಸ್ವಾಭಿಮಾನವನ್ನು ಪುನಃಸ್ಥಾಪಿಸಬೇಕು ಎಂದು ನಾವು ಬಯಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ಮ್ಯೂಚುಯಲ್ ಫಂಡ್‌ನ 5 ಬಹು ದೊಡ್ಡ ಪ್ರಯೋಜನಗಳಿವು
ಮೇ 26ರಂದು ಕೆಳ ನ್ಯಾಯಾಲಯದಲ್ಲಿ ಶಾಹಿ ಈದ್ಗಾ ಮಸೀದಿ ಇರುವ 2.37 ಎಕರೆ ಭೂಮಿಯನ್ನು ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯಲಿದೆ. ವಿವಾದವು ಮೂಲಭೂತವಾಗಿ 13.37 ಎಕರೆ ಜಮೀನಿನ ಮಾಲೀಕತ್ವವನ್ನು ಒಳಗೊಂಡಿದೆ. ಇದು ಆರಾಧ್ಯ ದೈವ ಶ್ರೀ ಕೃಷ್ಣನಿಗೆ ಸೇರಿದ್ದು ಎಂದು ಅರ್ಜಿದಾರರು ಹೇಳುತ್ತಾರೆ. ಶಾಹಿ ಈದ್ಗಾ ಮಸೀದಿಯನ್ನು ಒಟ್ಟು 13.37 ಎಕರೆ ಜಾಗದಲ್ಲಿ 2.37 ಎಕರೆಯಲ್ಲಿ ನಿರ್ಮಿಸಲಾಗಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.