ನವದೆಹಲಿ: Electric Vehicles Subsidy -  ಇತ್ತೀಚಿನ  ದಿನಗಳಲ್ಲಿ ಜನರು ಇಲೆಕ್ಟ್ರಿಕ್ ವಾಹನಗಳ ಖರೀದಿಗೆ ಹೆಚ್ಚಾಗಿ ಆಸಕ್ತಿ ತೋರುತ್ತಿದ್ದಾರೆ. ಪೆಟ್ರೋಲ್ ಮತ್ತು ಡಿಸೇಲ್ ವಾಹನಗಳು ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗಬೇಕು ಮತ್ತು ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ನಡೆಸುತ್ತಿವೆ. ಈ ಹಿನ್ನೆಲೆ ದೆಹಲಿ ಸರ್ಕಾರ ಕೂಡ ಕ್ಯಾಂಪೇನ್ ಆರಂಭಿಸಿದೆ. ಈ ಅಭಿಯಾನದ ಅಡಿ ಸರ್ಕಾರ ಜನತೆಗೆ ಎಲೆಕ್ಟ್ರಿಕ್ ವಾಹನಗಳ ಪ್ರಯೋಜನ ಹಾಗೂ ಅದರ ಮೇಲೆ ನೀಡಲಾಗುತ್ತಿರುವ ಸಬ್ಸಿಡಿ ಕುರಿತು ಸಂಪೂರ್ಣ ಮಾಹಿತಿ ಒದಗಿಸುತ್ತಿದೆ.


COMMERCIAL BREAK
SCROLL TO CONTINUE READING

Switch Delhi ಅಭಿಯಾನ ಬಿಡುಗಡೆ
ಖಾಸಗಿ ವಾಹನ ಹೊಂದಿರುವ ಜನರನ್ನು ಎಲೆಕ್ಟ್ರಿಕ್ ವಾಹನಗಳತ್ತ(Electric Vehicle) ಆಕರ್ಷಿಸಲು ದೆಹಲಿಯಲ್ಲಿ ಡಾಯಲಾಗ್ ಅಂಡ್ ಡೆವಲಪ್ಮೆಂಟ್ ಕಮಿಷನ್(DDC) 'ಸ್ವಿಚ್ ದೆಹಲಿ ಕ್ಯಾಂಪೇನ್  (Switch Delhi campaign)' ಆರಂಭಿಸಿದೆ. ದೆಹಲಿಯ ಸಾರಿಗೆ ಸಚಿವ ಕೈಲಾಶ್ ಗೆಹಲೋತ್ WRI ಜೊತೆ ಸೇರಿ ಈ ಅಭಿಯಾನ ಆರಂಭಿಸಿದ್ದಾರೆ. WRI ಒಂದು ಸಂಶೋಧನಾ ಸಂಸ್ಥೆಯಾಗಿದ್ದು, ಪರಿಸರ ಮತ್ತು ಸಾಮಾಜಿಕ ಕಾಳಜಿಗಳ ಅಭಿವೃದ್ಧಿ ಕಾರ್ಯಗಳನ್ನು ಪ್ರೋತ್ಸಾಹಿಸಲು ಸಂಶೋಧನೆ ಕೈಗೊಳ್ಳುವ ಒಂದು ಸಂಸ್ಥೆಯಾಗಿದೆ.


Electric Vihicle ಗಳಿಗೆ ರಾಜಧಾನಿಯಾಗಲು ಹೊರಟ ದೆಹಲಿ
ಈ ಕ್ಯಾಂಪೇನ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸಾರಿಗೆ ಸಚಿವ ಕೈಲಾಶ್ ಗೆಹಲೋಟ್, 'ದೆಹಲಿಯನ್ನು ಇಲೆಕ್ಟ್ರಿಕ್ ವಾಹನಗಳ ರಾಜಧಾನಿಯನ್ನಾಗಿಸಲು ಕೈಗೊಳ್ಳಲಾದ ಕ್ರಾಂತಿಗೆ ಬಲ ನೀಡಲು ಈ ಅಭಿಯಾನ ಆರಂಭಿಸಲಾಗಿದ್ದು, ದೆಹಲಿ ಜನರು ಕೂಡ ತಾವು ಇಲೆಕ್ಟ್ರಿಕ್ ವಾಹನಗಳತ್ತ ಮುಖಮಾದಳು ಶಪಥ ಕೈಗೊಳ್ಳಬೇಕು ಎಂದು ಆಹ್ವಾನಿಸಿದ್ದಾರೆ.  ಮುಂದಿನ ಮೂರುವರ್ಷಗಳಲ್ಲಿ ನಾಗರಿಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಇಲೆಕ್ಟ್ರಿಕ್ ಚಾರ್ಜಿಂಗ್ ಪಾಯಿಂಟ್ ಗಳನ್ನು ಸ್ಥಾಪಿಸಬೇಕು. ಪ್ರಸ್ತುತ ತಾವೂ ಕೂಡ ಈ ಸಂಕಲ್ಪಮಾಡಿದ್ದು, ಉಳಿದೆಲ್ಲ ನಾಗರಿಕರು ಇದನ್ನು ಮಾಡಲಿದ್ದಾರೆ ಎಂದು ಆಶಿಸುತ್ತೇನೆ' ಎಂದಿದ್ದಾರೆ.


ದೆಹಲಿಯಲ್ಲಿ ಪ್ರಸ್ತುತ 7000 ಎಲೆಕ್ಟ್ರಿಕ್ ವಾಹನಗಳ ನೋಂದಣಿ ಮಾಡಲಾಗಿದೆ
ಈ ಕುರಿತು ಮಾಹಿತಿ ನೀಡಿರುವ ದೆಹಲಿ ಸಾರಿಗೆ ಸಚಿವರು ಇದುವರೆಗೆ ದೆಹಲಿಯಲ್ಲಿ ಸುಮಾರು 7000 ನೂತನ ಎಲೆಕ್ಟ್ರಿಕ್ ವಾಹನಗಳ ನೋಂದಣಿಯಾಗಿವೆ. ಇದಲ್ಲದೆ ಸುಮಾರು 210 ಅನುಮೋದನೆ ಪಡೆದ ಮಾಡೆಲ್ ಗಳ ಮೇಲೆ ಸುಮಾರು 13.5 ಕೋಟಿ ರೂ. ಸಬ್ಸಿಡಿ ನೀಡಲಾಗಿದೆ. ಈ ವೆಬಿನಾರ್ ನಲ್ಲಿ ಸುಮಾರು 100 ಇಲೆಕ್ಟ್ರಿಕ್ ವಾಹನ ಬೆಂಬಲಿಗರು ಪಾಲ್ಗೊಂಡು, ಚರ್ಚೆಯಲ್ಲಿ ಶಾಮೀಲಾದರು. ಇದರಲ್ಲಿ EV ಕ್ಷೇತ್ರದ ತಜ್ಞರು ಕೂಡ ಭಾಗವಹಿಸಿದ್ದರು. ದೆಹಲಿ EV ಕ್ರಾಂತಿಯನ್ನು ಹೇಗೆ ಮುನ್ನಡೆಸಿಕೊಂಡು ಹೋಗಲಾಗುವುದು ಎಂಬುದರ ಕುರಿತು ಚರ್ಚೆ ನಡೆಸಲಾಯಿತು.


ಇದನ್ನೂ ಓದಿ-Petrol-Diesel ಬಗ್ಗೆ ಮಹತ್ವದ ಸೂಚನೆ ನೀಡಿದ ಸಚಿವ ನಿತಿನ್ ಗಡ್ಕರಿ ಹೇಳಿದ್ದೇನು?


2024 ರವೇಳೆಗೆ ಸುಮಾರು ಶೇ.25 ರಷ್ಟು ವಾಹನಗಳನ್ನು ಇಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸುವ ಗುರಿ
ಇದಕ್ಕೂ ಮೊದಲು ಈ ಕುರಿತು ಫೆಬ್ರವರಿ 4 ರಂದು ಮಾತನಾಡಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೆಜ್ರಿವಾಲ್, '2024 ರವರೆಗೆ ದೆಹಲಿಯಲ್ಲಿ ಖರೀದಿಯಾಗುವ ಒಟ್ಟು ವಾಹನಗಳ ಪೈಕಿ ಶೇ.25 ರಷ್ಟು ವಾಹನಗಳು ಇಲೆಕ್ಟ್ರಿಕ್ ವಾಹನಗಳಾಗಬೇಕು (Electric Vehicles) ಮತ್ತು ಇದಕ್ಕಾಗಿ ಸಮಗ್ರ ಯೋಜನೆಯನ್ನು ರೂಪಿಸಬೇಕು ಎಂದಿದ್ದರು. ಇದಕ್ಕಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇಲೆಕ್ಟ್ರಿಕ್ ವಾಹನ ಖರೀದಿಸಬೇಕು. ಇದಕ್ಕಾಗಿ ದೆಹಲಿ ಸರ್ಕಾರ ದೊಡ್ಡ ಮಟ್ಟದಲ್ಲಿ ಸಬ್ಸಿಡಿ ಪ್ಲಾನ್ ಸಿದ್ಧಪಡಿಸಿದೆ ಎಂದು ಅವರು ಹೇಳಿದ್ದರು.


ಇದನ್ನೂ ಓದಿ-ಬ್ಯಾಟರಿಗಳಿಲ್ಲದೆ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಬಹುದು ಎಂದ ಕೇಂದ್ರ ಸರ್ಕಾರ


ಇಲೆಕ್ಟ್ರಿಕ್ ವಾಹನಗಳ ಮೇಲೆ ಸಿಗುವ ಸಬ್ಸಿಡಿ ಎಷ್ಟು?
ನೀವು ದ್ವಿಚಕ್ರ ಅಥವಾ ತ್ರಿಚಕ್ರ ವಾಹನವನ್ನು ಖರೀದಿಸಿದರೆ, ನಿಮಗೆ 30,000 ರೂ.ಗಳವರೆಗೆ ಸಬ್ಸಿಡಿ ಸಿಗುತ್ತದೆ. ಇದೆ ರೀತಿ ಒಂದು ವೇಳೆ ನೀವು 4-ವೀಲರ್ ಖರೀದಿಸಿದರೆ, ನಿಮಗೆ ಸುಮಾರು 1.5 ಲಕ್ಷ ರೂಪಾಯಿಗಳವರೆಗೆ ಸಹಾಯಧನವನ್ನು ಪಡೆಯಬಹುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೆಜ್ರಿವಾಲ್ (Kejriwal) ಹೇಳಿದ್ದಾರೆ. ನಿಮ್ಮ ವಾಹನವನ್ನು ಖರೀದಿಸಿದ 3 ದಿನಗಳಲ್ಲಿ ಈ ಸಹಾಯಧನವು ನಿಮ್ಮ ಖಾತೆಗೆ ವರ್ಗಾವಣೆಯಾಗುತ್ತದೆ. ಇದಲ್ಲದೆ ಎಷ್ಟೇ ಇಲೆಕ್ಟ್ರಿಕ್ ವಾಹನ ಖರೀದಿಸಿದರೂ ಕೂಡ ರೋಡ್ ಟ್ಯಾಕ್ಸ್ ಇರುವುದಿಲ್ಲ, ನೀವು ಖರೀದಿಸುವ ಇಲೆಕ್ಟ್ರಿಕ್ ವಾಹನಗಳಿಗೆ ರಜಿಸ್ ಟ್ರೆಶನ್ ಚಾರ್ಜ್ ಕೂಡ ಇರುವುದಿಲ್ಲ ಎಂದು ಕೆಜ್ರಿವಾಲ್ ಹೇಳಿದ್ದಾರೆ.


ಇದನ್ನೂ ಓದಿ- ಶೀಘ್ರದಲ್ಲೇ ರಸ್ತೆಗಿಳಿಯಲಿದೆ Bajaj ಎಲೆಕ್ಟ್ರಿಕ್ ರಿಕ್ಷಾ!