ನವದೆಹಲಿ: ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತಿದೆ. ಇಂದು ಪರಿಷ್ಕರಿಸಲಾದ ತೈಲ ದರದಲ್ಲಿ ಸತತ ಆರನೇ ದಿನವೂ ಪೆಟ್ರೋಲ್ ದರಗಳು ಇಳಿಮುಖವಾಗಿದೆ. ಸತತ ಎರಡನೇ ದಿನವೂ ಡೀಸೆಲ್ ಬೆಲೆ ಕಡಿಮೆಯಾಗಿದೆ. ಪೆಟ್ರೋಲ್‌ನ ದರ ಮಂಗಳವಾರ ಲೀಟರ್‌ಗೆ 13 ಪೈಸೆ ಇಳಿಕೆಯಾಗಿದೆ. 


COMMERCIAL BREAK
SCROLL TO CONTINUE READING

ಇದರೊಂದಿಗೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 72.86 ರೂ., ಡೀಸೆಲ್ ಬೆಲೆ 66.00 ರೂ. ಇದೆ.


ಈ ದರವು ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಅನ್ವಯವಾಗಲಿದೆ.


ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ


ನಗರಗಳು

ಪೆಟ್ರೋಲ್


(ರೂ./ಲೀ)

ಡೀಸೆಲ್


(ರೂ./ಲೀ)

ದೆಹಲಿ 72.86 66.00
ಕೊಲ್ಕತ್ತಾ 75.50 68.19
ಮುಂಬೈ 78.48 69.17
ಚೆನ್ನೈ 75.80 69.78
ಬೆಂಗಳೂರು 75.27 68.18
ಹೈದರಾಬಾದ್ 77.38 71.88
ತಿರುವನಂತಪುರಂ 75.96 70.76

ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: 


https://www.iocl.com/TotalProductList.aspx