ನವದೆಹಲಿ: ತೈಲ ದರಗಳು ಮತ್ತೆ ಗಗನದತ್ತ ಮುಖ ಮಾಡಿದ್ದು, ಇಂದು ದೇಶಾದ್ಯಂತ ಡೀಸೆಲ್(Diesel) ದರ ಪ್ರತಿ ಲೀಟರ್‌ಗೆ 17 ಪೈಸೆ ಹೆಚ್ಚಳವಾಗಿದೆ. ಇದೇ ವೇಳೆ ಪೆಟ್ರೋಲ್(Petrol) ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.


COMMERCIAL BREAK
SCROLL TO CONTINUE READING

ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತಿದೆ. ಪ್ರಪಂಚದಾದ್ಯಂತ ತೈಲ ಪೂರೈಕೆ ಕುಸಿಯುತ್ತಿರುವ ಕಾರಣ, ಏಷ್ಯಾದ ಮಾರುಕಟ್ಟೆಗಳಲ್ಲಿ ತೈಲ ದರದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. 


ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಈ ಹಿಂದೆ ಕಚ್ಚಾ ತೈಲದ ಬೆಲೆ ಹೆಚ್ಚಳದಿಂದಾಗಿ, ದೇಶದಲ್ಲಿ ಪೆಟ್ರೋಲ್ ಬೆಲೆ ಹೆಚ್ಚಾಗಿದೆ. ಕಚ್ಚಾ ತೈಲವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಥಿರವಾಗಿದ್ದರೂ, ಬೆಂಟ್ರಾ ಕಚ್ಚಾ ಬೆಲೆ ಸುಮಾರು ಎರಡು ತಿಂಗಳಲ್ಲೇ ಗರಿಷ್ಠ ಮಟ್ಟದಲ್ಲಿದೆ. 


ಇಂದು ಪರಿಷ್ಕರಿಸಲಾದ ತೈಲ ಬೆಲೆ ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 74.74 ರೂ. ಮತ್ತು ಡೀಸೆಲ್ ಲೀಟರ್‌ಗೆ 67.41 ರೂ. ಆಗಿದೆ. 


ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್(Petrol) ದರ 77.30 ರೂ. , ಡೀಸೆಲ್(Diesel) ದರ ಪ್ರತಿ ಲೀಟರ್‌ಗೆ 69.71 ರೂ. ಆಗಿದೆ.


ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ


ನಗರಗಳು

ಪೆಟ್ರೋಲ್ 


(ರೂ./ಲೀ)

ಡೀಸೆಲ್


(ರೂ./ಲೀ)

ದೆಹಲಿ 74.74 67.41
ಕೊಲ್ಕತ್ತಾ 77.40 69.83
ಮುಂಬೈ 80.40 70.73
ಚೆನ್ನೈ 77.70 71.27
ಬೆಂಗಳೂರು 77.30 69.71
ಹೈದರಾಬಾದ್ 79.53 73.56
ತಿರುವನಂತಪುರಂ 78.18 72.52

ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: 


https://www.iocl.com/TotalProductList.aspx