ನವದೆಹಲಿ: ಸುಮಾರು ಒಂದು ತಿಂಗಳಿನಿಂದ ಇಳಿಕೆಯತ್ತ ಮುಖಮಾಡಿದ್ದ ತೈಲ ಬೆಲೆ ಈಗ ಮತ್ತೆ ಏರಿಕೆ ಕಂಡಿದೆ. ದೇಶಾದ್ಯಂತ ಇಂದು ಬೆಳಗ್ಗೆ ತೈಲ ದರ ಪರಿಷ್ಕರಣೆಯಾಗಿದ್ದು, ಇಂದು ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಪೆಟ್ರೋಲ್ 14 ರಿಂದ 15 ಪೈಸೆಗಳಷ್ಟು ಏರಿಕೆಯಾಗಿದ್ದು, ಡೀಸೆಲ್ 16 ರಿಂದ 18 ಪೈಸೆಗಳಷ್ಟು ಏರಿಕೆಯಾಗಿದೆ. ಈ ದರ ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಚಾಲ್ತಿಯಲ್ಲಿರಲಿದೆ.


COMMERCIAL BREAK
SCROLL TO CONTINUE READING

ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಯೊಂದಿಗಿನ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತದೆ.


ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ


ನಗರಗಳು  ಪೆಟ್ರೋಲ್(ರೂ / ಲೀಟರ್) ಡೀಸೆಲ್ (ರೂ / ಲೀಟರ್)
ನವದೆಹಲಿ 75.71 67.66
ಕೋಲ್ಕತ್ತಾ 78.53 70.05
ಮುಂಬೈ 83.24 71.79
ಚೆನ್ನೈ 78.72 71.42
ಬೆಂಗಳೂರು 76.92 68.53
ಹೈದರಾಬಾದ್ 80.18 73.41
ತಿರುವನಂತಪುರಂ 78.78 72.23