Good News: ಪ್ರತಿ ಲೀಟರ್‌ಗೆ 15 ರೂ.ನಂತೆ ಮಾರಾಟವಾಗಲಿದೆ ಪೆಟ್ರೋಲ್..!
Nitin Gadkari: ಈಗ ಎಲ್ಲಾ ವಾಹನಗಳು ರೈತರು ಉತ್ಪಾದಿಸುವ ಎಥೆನಾಲ್‌ನಿಂದ ಓಡುತ್ತವೆ. ಸರಾಸರಿ ಶೇ.60ರಷ್ಟು ಎಥೆನಾಲ್ ಮತ್ತು ಶೇ.40ರಷ್ಟು ವಿದ್ಯುತ್ ತೆಗೆದುಕೊಂಡರೆ ಪೆಟ್ರೋಲ್ ಪ್ರತಿ ಲೀಟರ್‌ಗೆ 15 ರೂ. ದರದಲ್ಲಿ ಲಭ್ಯವಿರುತ್ತದೆ ಎಂದು ಗಡ್ಕರಿ ಹೇಳಿದ್ದಾರೆ.
ನವದೆಹಲಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮಂಗಳವಾರ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 15 ರೂ.ಗೆ ಇಳಿಸುವ ವಿನೂತನ ಪ್ರಸ್ತಾಪವನ್ನು ಮಾಡಿದ್ದಾರೆ. ರಾಜಸ್ಥಾನದ ಪ್ರತಾಪಗಢದಲ್ಲಿ ನಡೆದ ರ್ಯಾಲಿಯಲ್ಲಿ, ಮಾತನಾಡಿದ ಅವರು, ‘ದೇಶದಾದ್ಯಂತ ರೈತರನ್ನು "ಉರ್ಜಾದಾತ" (ಶಕ್ತಿ ಪೂರೈಕೆದಾರರು) ಆಗಲು ಸಬಲೀಕರಣಗೊಳಿಸುವ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು. ಶೇ.60ರಷ್ಟು ಎಥೆನಾಲ್ ಮತ್ತು ಶೇ.40ರಷ್ಟು ವಿದ್ಯುತ್ ಮಿಶ್ರಣವನ್ನು ತೆಗೆದುಕೊಂಡರೆ ಪೆಟ್ರೋಲ್ ಬೆಲೆ ಕಡಿಮೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.
ತಮ್ಮ ಭಾಷಣದಲ್ಲಿ ಸಚಿವರು ಎಥೆನಾಲ್ ಮತ್ತು ವಿದ್ಯುಚ್ಛಕ್ತಿಯ ಮಿಶ್ರಣವನ್ನು ಬಳಸಿಕೊಳ್ಳುವ ಅನುಕೂಲಗಳ ಬಗ್ಗೆ ಒತ್ತಿ ಹೇಳಿದರು. ‘ರೈತರು ಕೇವಲ ಅನ್ನದಾತರಷ್ಟೇ ಅಲ್ಲ, ಊರ್ಜದಾತರೂ ಆಗುತ್ತಾರೆ ಎಂಬ ಮನಸ್ಥಿತಿ ನಮ್ಮ ಸರ್ಕಾರದ್ದು. ಈಗ ಎಲ್ಲಾ ವಾಹನಗಳು ರೈತರು ಉತ್ಪಾದಿಸುವ ಎಥೆನಾಲ್‌ನಿಂದ ಓಡುತ್ತವೆ. ಸರಾಸರಿ ಶೇ.60ರಷ್ಟು ಎಥೆನಾಲ್ ಮತ್ತು ಶೇ.40ರಷ್ಟು ವಿದ್ಯುತ್ ತೆಗೆದುಕೊಂಡರೆ ಪೆಟ್ರೋಲ್ ಪ್ರತಿ ಲೀಟರ್‌ಗೆ 15 ರೂ. ದರದಲ್ಲಿ ಲಭ್ಯವಿರುತ್ತದೆ. ಇದರಿಂದ ದೇಶದ ಜನರಿಗೆ ಸಾಕಷ್ಟು ಪ್ರಯೋಜನವಾಗಲಿದೆ’ ಎಂದು ಗಡ್ಕರಿ ಹೇಳಿದ್ದಾರೆ.
ಇದನ್ನೂ ಓದಿ: Tripura Rath Yatra: ತ್ರಿಪುರಾದ ‘ಉಲ್ಟಾ ರಥ ಯಾತ್ರೆ’ ದುರಂತ, ಸಾವಿನ ಸಂಖ್ಯೆ 8ಕ್ಕೇರಿಕೆ!
ಎಥೆನಾಲ್ ಮತ್ತು ವಿದ್ಯುತ್ ಮಿಶ್ರಣವು ಮಾಲಿನ್ಯ ಮತ್ತು ಆಮದುಗಳನ್ನು ಕಡಿಮೆ ಮಾಡುವುದಲ್ಲದೆ 16 ಲಕ್ಷ ಕೋಟಿ ರೂ.ಗಳ ಬೃಹತ್ ಆಮದು ವೆಚ್ಚವನ್ನು ರೈತರ ಮನೆಗಳಿಗೆ ಮರುನಿರ್ದೇಶಿಸುತ್ತದೆ ಎಂದು ಅವರು ತಿಳಿಸಿದರು. ಪ್ರತಾಪಗಢದಲ್ಲಿ ಒಟ್ಟು 5,600 ಕೋಟಿ ರೂ.ಗಳ 11 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಗಡ್ಕರಿ ನೆರವೇರಿಸಿದರು.
ಒಟ್ಟು 219 ಕಿಮೀ ಉದ್ದದ 3,775 ಕೋಟಿ ರೂ. ವೆಚ್ಚದ 4 ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಇದೇ ವೇಳೆ ಉದ್ಘಾಟಿಸಲಾಯಿತು. ಇವುಗಳಲ್ಲಿ ಅಜ್ಮೀರ್ ಮತ್ತು ಭಿಲ್ವಾರಾ ಜಿಲ್ಲೆಗಳಿಗೆ ಸಂಪರ್ಕವನ್ನು ಸುಧಾರಿಸಲು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕಿಶನ್‌ಗಡ್‌ನಿಂದ ಗುಲ್ಬಾಪುರದವರೆಗೆ 6 ಪಥಗಳ ವಿಭಾಗವಾಗಿದೆ. ರಾಜಸ್ಥಾನದಲ್ಲಿ ಕೇಂದ್ರ ರಸ್ತೆಗಳ ನಿಧಿಯಡಿ 2,250 ಕೋಟಿ ರೂ. ವೆಚ್ಚದಲ್ಲಿ 74 ಯೋಜನೆಗಳಿಗೆ ಅನುಮೋದನೆಯನ್ನು ಈ ಕಾರ್ಯಕ್ರಮದಲ್ಲಿ ಘೋಷಿಸಲಾಯಿತು.
ಇದನ್ನೂ ಓದಿ: Watch: ಬುಡಕಟ್ಟು ವ್ಯಕ್ತಿಯ ಪಾದಗಳನ್ನು ತೊಳೆದ ಮಧ್ಯಪ್ರದೇಶದ ಸಿಎಂ ಶಿವರಾಜ್ ಚೌಹಾಣ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.