ನವದೆಹಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬುಧವಾರ ಫಿಜರ್‌ (Pfizer) ನ ಕೋವಿಡ್ -19 ಲಸಿಕೆಯನ್ನು ಭಾರತೀಯ ನಾಗರಿಕರಿಗೆ ಲಭ್ಯವಾಗುವಂತೆ ಮಾಡುವ ವ್ಯವಸ್ಥೆಯನ್ನು ರೂಪಿಸುವ ಅಗತ್ಯವಿದೆ ಎಂದು ಹೇಳಿದರು ಮತ್ತು ಕೇಂದ್ರ ಸರ್ಕಾರವು ಲಸಿಕೆ ವಿತರಣಾ ಕಾರ್ಯತಂತ್ರವನ್ನು ವ್ಯಾಖ್ಯಾನಿಸಬೇಕಾಗಿದೆ ಎಂದು ತಿಳಿಸಿದರು.


COMMERCIAL BREAK
SCROLL TO CONTINUE READING

ಫಿಜರ್ ಭರವಸೆಯ ಲಸಿಕೆಯನ್ನು ಸಿದ್ದಪಡಿಸಿದ್ದರೂ ಸಹ, ಪ್ರತಿಯೊಬ್ಬ ಭಾರತೀಯರಿಗೂ ಅದನ್ನು ಲಭ್ಯವಾಗುವಂತೆ ಮಾಡುವ ಲಾಜಿಸ್ಟಿಕ್ಸ್ ನ್ನು ರೂಪಿಸಬೇಕಾಗಿದೆ. ಪ್ರತಿಯೊಬ್ಬ ಭಾರತೀಯನಿಗೂ ಲಸಿಕೆಯನ್ನು ಹೇಗೆ ತಲುಪಿಸಲಾಗುತ್ತದೆ ಎನ್ನುವ ಬಗ್ಗೆ ಲಸಿಕೆ ವಿತರಣಾ ಕಾರ್ಯತಂತ್ರವನ್ನು  ರಚಿಸಬೇಕಾಗುತ್ತದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. 


ಕೃಷಿ ಕಾನೂನಿನ ವಿರುದ್ಧ ಪಂಜಾಬ್‌ನಲ್ಲಿ ಇಂದು ರಾಹುಲ್ ಗಾಂಧಿ ಟ್ರ್ಯಾಕ್ಟರ್ ರ್ಯಾಲಿ

ಭಾರತವು ಫಿಜರ್‌ನೊಂದಿಗೆ ಯಾವಾಗ ಚರ್ಚೆಯನ್ನು ಪ್ರಾರಂಭಿಸುತ್ತದೆ ಎಂದು ಕೇಳಿದಾಗ, ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಕರೋನವೈರಸ್ ಲಸಿಕೆ ರಾಷ್ಟ್ರೀಯ ತಜ್ಞರ ಗುಂಪು ದೇಶೀಯ ಮತ್ತು ವಿದೇಶಿ ಸೇರಿದಂತೆ ಎಲ್ಲಾ ಲಸಿಕೆ ತಯಾರಕರೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಹೇಳಿದರು.