ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರಿಗೆ ಚಾಟಿಂಗ್ ಸೇವೆ ಒದಗಿಸಲು, ಡಿಜಿಟಲ್ ಹಣ ಪಾವತಿ ಕಂಪನಿ ಫೋನ್‌ಪೇ ತನ್ನ ಅಪ್ಲಿಕೇಶನ್‌ನಲ್ಲಿ ಹೊಸ ಚಾಟ್ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ. ಈ ವೈಶಿಷ್ಟ್ಯದ ಬಳಸುವ ಮೂಲಕ, ಬಳಕೆದಾರರು ಇದೀಗ ಯಾವುದೇ ಮೆಸೇಜಿಂಗ್ ಆಪ್ ಬಳಸದೆ ಕೇವಲ ಫೋನ್ ಪೇ ಆಪ್ ಅನ್ನು ಬಳಸಿ ಹಣಕ್ಕಾಗಿ ರಿಕ್ವೆಸ್ಟ್ ಅಥವಾ ಹಣ ಪಾವತಿಸಿರುವ ಕುರಿತು ಸಂದೇಶ ರವಾನಿಸಬಹುದಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಫೋನ್ ಪೇ ಸಹ ಸಂಸ್ಥಾಪಕ ಹಾಗೂ ಸಿಇಓ ರಾಹುಲ್ ಚಾರಿ, ಫೋನ್ -ಪೇ-ಚಾಟ್ ಸೇವೆ ಬಳಕೆದಾರರು ತಾವು ಮಾತನಾಡುತ್ತಲೇ ತಮ್ಮ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿರುವ ಯಾವುದೇ ಕಾಂಟಾಕ್ಟ್ ಗೆ ಹಣ ಪಾವತಿಸುವುದನ್ನು ಸುಲಭಗೊಳಿಸಲಿದೆ ಎಂದಿದ್ದಾರೆ. ಫೋನ್ ಪೇ ಆಪ್ ನಲ್ಲಿ ಬಳಕೆದಾರರ ವ್ಯವಹಾರದ ಹಿಸ್ಟರಿ ಅವರ ಚಾಟ್ ನಲ್ಲಿ ಡಿಸ್ಪ್ಲೇ ಆಗುತ್ತದೆ. ಇದರಿಂದ ಬಳಕೆದಾರರ ಅನುಭವ ಇನ್ನಷ್ಟು ಆಕರ್ಷಕವಾಗಲಿದೆ.


COMMERCIAL BREAK
SCROLL TO CONTINUE READING

ಈ ಮಾತುಕತೆ ಹಿಸ್ಟರಿ ಜೊತೆಗೆ ಬಳಕೆದಾರರಿಗೆ ತಮ್ಮ ವ್ಯವಹಾರದ ಮೇಲೆಯೂ ಕೂಡ ಕಣ್ಣಿಡಲು ಅನುಕೂಲಕರವಾಗಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ಚಾರಿ, ಮುಂಬರುವ ದಿನಗಳಲ್ಲಿ ಗ್ರೂಪ್ ಚಾಟ್ ಸೌಲಭ್ಯವನ್ನು ಸಹ ನಮ್ಮ ಆಪ್ ನಲ್ಲಿ ಅಳವಡಿಸಲಿದ್ದೇವೆ ಎಂದು ಹೇಳಿದ್ದಾರೆ. ಇದರಿಂದ ಬಳಕೆದಾರರು ತಮ್ಮ ಸ್ನೇಹಿತರು ಸೇರಿದಂತೆ ಕುಟುಂಬ ಸದಸ್ಯರ ಜೊತೆಗೆ ಚಾಟ್ ನಡೆಸುವ ಮೂಲಕ ಹಣಕ್ಕಾಗಿ ಬೇಡಿಕೆ ಸಲ್ಲಿಸಲು ಹಾಗೂ ಹಣ ಪಾವತಿಸಲು ಮತ್ತಷ್ಟು ಅನುಕೂಲಕರ ವಾಗಲಿದೆ.


PhonePe ಒಂದು ವಾರದ ಹಿಂದೆಯಷ್ಟೇ ತನ್ನ ಅಂಡ್ರಾಯಿಡ್ ಹಾಗೂ ಐಓಎಸ್ ಬಳಕೆದಾರರಿಗಾಗಿ ಈ ಸೇವೆಯನ್ನು ಬಿಡುಗಡೆಗೊಳಿಸಿದೆ. ಸದ್ಯ ಸುಮಾರು 18.5 ಕೋಟಿ ಜನರು phonepe ಮೊಬೈಲ್ ವ್ಯಾಲೆಟ್ ಸೇವೆಯನ್ನು ಬಳಸುತ್ತಿದ್ದು. ಅವರಿಗೆ ಈ ಸೇವೆಯಿಂದ ಭಾರಿ ಅನುಕೂಲವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ.


PhonePe ಚಾಟ್ ಸೇವೆಯನ್ನು ಹೀಗೆ ಬಳಸಿ
ಫೋನ್ ಪೇ ಆಪ್ ನಲ್ಲಿರುವ ಈ ಸೌಲಭ್ಯ ಬಳಕೆದಾರರಿಗೆ ಹಣ ವರ್ಗಾವಣೆಯ ಇಂಟಿಗ್ರೇಟೆಡ್ ಅನುಭವ ನೀಡಲಿದೆ. ಇದರ ಬಳಕೆಗಾಗಿ ಬಳಕೆದಾರರು ಮೊದಲು ತಮ್ಮ ಮೊಬೈಲ್ ನಲ್ಲಿರುವ PhonePe ಆಪ್ ಅಪ್ಗ್ರೇಡ್ ಮಾಡಬೇಕು. ಬಳಿಕ ಆಪ್ ಓಪನ್ ಮಾಡಿ. ನಂತರ ಫೋನ್ ನ ಕಾಂಟ್ಯಾಕ್ಟ್ ಲಿಸ್ಟ್ ಭೇಟಿ ನೀಡಿ, ನೀವು ಹಣ ಕಳುಹಿಸಬೇಕಾದ ಅಥವಾ ಹಣವನ್ನು ಪಡೆಯಬೇಕಾಗಿರುವ ಕಾಂಟ್ಯಾಕ್ಟ್ ಆಯ್ಕೆ ಮಾಡಬೇಕು. ಇದಕ್ಕಾಗಿ ನಿಮಗೆ ಚಾಟ್, ಹಣ ವರ್ಗಾವಣೆ ಎಂಬ ಎರಡು ಆಪ್ಶನ್ ಗಳು ಸಿಗಲಿವೆ.