ನವದೆಹಲಿ: ಭಾರತದ ರಕ್ಷಣಾ ಇಲಾಖೆ ಈಗ ಮತ್ತೊಂದು ಮೈಲುಗಲ್ಲು ಸಾಧಿಸಿದೆ. ಡಿಆರ್ಡಿಓ ಅಭಿವೃದ್ದಿಪಡಿಸಿದ ವಿಸ್ತೃತ ಶ್ರೇಣಿಯ ರಾಕೆಟ್ ಗಳು ಸೋಮವಾರದಂದು ಯಶಸ್ವಿಯಾಗಿ ಉಡಾವಣೆಯಾಗಿವೆ. 90 ಕಿಮೀ ವ್ಯಾಪ್ತಿಯನ್ನು ಎರಡು ರಾಕೆಟ್ ಗಳು ತಲುಪುವಲ್ಲಿ ಯಶಸ್ವಿಯಾಗಿವೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.ರಾಡಾರ್ ಗಳು,ಎಲೆಕ್ಟ್ರೋ-ಆಪ್ಟಿಕಲ್ ಸಿಸ್ಟಮ್ಸ್ ಮತ್ತು ಟೆಲಿಮೆಟ್ರಿಯೂ ವಿಮಾನದ  ಮಾರ್ಗವನ್ನು ಪಿಎಕ್ಸ್ಇಯಲ್ಲಿ ಮೇಲ್ವಿಚಾರಣೆ ನಡೆಸಲಾಗುತ್ತಿತ್ತು ಎಂದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಎರಡೂ ರಾಕೆಟ್ ಗಳ ಕಾರ್ಯಾಚರಣೆಗಳಲ್ಲಿ ಶಸ್ತ್ರಾಸ್ತ್ರ ವ್ಯವಸ್ಥೆಗಳು ಹೆಚ್ಚಿನ ನಿಖರತೆಯೊಂದಿಗೆ ಉದ್ದೇಶಿತ ಗುರಿಗಳ ಮೇಲೆ ಪರಿಣಾಮ ಬೀರಿದವು ಮತ್ತು ಅಪೇಕ್ಷಿತ ನಿಖರತೆಗಳನ್ನು ಸಾಧಿಸಿದವು ಎಂದು ಡಿಆರ್ಡಿಓ ಹೇಳಿಕೆ ನೀಡಿದೆ. ಈ ಎರಡು ರಾಕೆಟ್ ಗಳ ಮಾರ್ಗವನ್ನು ಟೆಲಿಮೆಟ್ರಿ ಮೂಲಕ ಟ್ರ್ಯಾಕ್ ಮಾಡಲಾಗಿದೆ ಎಂದು ಡಿಆರ್ಡಿಒ ತಿಳಿಸಿದೆ.


ಪಿನಾಕಾ ಭಾರತೀಯ ಸೈನ್ಯದಲ್ಲಿ ಬಳಸಲಾಗುವ ಬಹು ರಾಕೆಟ್ ಲಾಂಚರ್ ಆಗಿದೆ. ಇದನ್ನು ಡಿಆರ್ಡಿಒ ಮೂಲಕ ಅಭಿವೃದ್ಧಿಪಡಿಸಲಾಗಿದೆ. ಇದು 44 ಸೆಕೆಂಡ್ಗಳಲ್ಲಿ 12 HE ರಾಕೆಟ್ ಗಳ ಸವಕಳಿಯನ್ನು ಹೊಡೆಯಲು ಶಕ್ತವಾಗಿದೆ. ಚಲನಶೀಲತೆಗಾಗಿ ಸಿಸ್ಟಮ್ ಅನ್ನು ಟಟ್ರಾ ಟ್ರಕ್ನಲ್ಲಿ ಅಳವಡಿಸಲಾಗಿದೆ. ಪಿನಕಾ ಪರ್ವತದ ಮೇಲ್ಭಾಗದಲ್ಲಿ ಶತ್ರು ಸ್ಥಾನಗಳನ್ನು ನಾಶಪಡಿಸಲು ಕಾರ್ಗಿಲ್ ಯುದ್ಧದ ವೇಳೆ ಹೆಚ್ಚಿನ ಪ್ರಮಾಣದಲ್ಲಿ ಇವುಗಳನ್ನು ಬಳಸಲಾಗಿತ್ತು ಎನ್ನಲಾಗಿದೆ.