ನವದೆಹಲಿ: ನಿಮ್ಮ ಬಳಿಯೂ ಕೂಡ ಪ್ಲಾಸ್ಟಿಕ್ ಆಧಾರ್ ಕಾರ್ಡ್ ಇದೆಯಾ? ಅಥವಾ ನೀವೂ ಕೂಡ ಪ್ಲಾಸ್ಟಿಕ್ ಆಧಾರ್ ಕಾರ್ಡ್ ಬಳಕೆ ಮಾಡುತ್ತೀರಾ..? ಹಾಗಾದರೆ ಎಚ್ಚರ...! ಏಕೆಂದರೆ, ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ ಪ್ಲಾಸ್ಟಿಕ್ ಆಧಾರ್ ಕಾರ್ಡ್ ಗಳನ್ನು ಅಮಾನ್ಯಗೊಳಿಸಿದೆ. ಇಂತಹ ಸಂದರ್ಭದಲ್ಲಿ ನೀವೂ ಕೂಡ ಇಂತಹ ಕಾರ್ಡ್ ಬಳಸುತ್ತಿದ್ದಾರೆ ನಿಮಗೆ ಹಾನಿಯಾಗುವ ಸಾಧ್ಯತೆ ಇದೆ. UIDAI ಈ ಮೊದಲೂ ಕೂಡ ಈ ರೀತಿಯ ಆಧಾರ್ ಕಾರ್ಡ್ ಬಳಕೆಯ ಕುರಿತು ಎಚ್ಚರಿಕೆಯ ಸಂದೇಶ ರವಾನಿಸಿದೆ. ಹಾಗಾದರೆ, ಈ ರೀತಿಯ ಆಧಾರ್ ಕಾರ್ಡ್ ಗೆ ಏಕೆ ಮಾನ್ಯತೆ ಇಲ್ಲ ಎಂಬುದನ್ನು ತಿಳಿಯೋಣ..


COMMERCIAL BREAK
SCROLL TO CONTINUE READING

ನಿಮ್ಮ ಆಧಾರ್ ಕಾರ್ಡ್‌ ಮೇಲೆ ನೀವೂ ಕೂಡ ಪ್ಲಾಸ್ಟಿಕ್ ಲ್ಯಾಮಿನೇಷನ್ ಹೊಂದಿದ್ದರೆ ಅಥವಾ ನಿಮ್ಮಲ್ಲಿ ಪ್ಲಾಸ್ಟಿಕ್ ಆಧಾರ್ ಕಾರ್ಡ್ ಇದ್ದರೆ, ಈ ಕಾರ್ಡ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಬಹುದು ಎಂದು ಯುಐಡಿಎಐ ಈಗಾಗಲೇ ಎಲ್ಲಾ ಗ್ರಾಹಕರನ್ನು ಎಚ್ಚರಿಸಿದೆ. ವಾಸ್ತವವಾಗಿ, ಪ್ಲಾಸ್ಟಿಕ್ ಬೇಸ್ನ ಅನಧಿಕೃತ ಮುದ್ರಣದಿಂದಾಗಿ, ಕ್ಯೂಆರ್ ಕೋಡ್ ನಿಷ್ಕ್ರಿಯಗೊಳ್ಳುತ್ತದೆ. ಅಲ್ಲದೆ, ಅದರಿಂದ ವೈಯಕ್ತಿಕ ಮಾಹಿತಿಯ ಕಳ್ಳತನದ ಅಪಾಯವಿದೆ. ನಿಮ್ಮ ಅನುಮತಿಯಿಲ್ಲದೆ ನಿಮ್ಮ ವೈಯಕ್ತಿಕ ವಿವರಗಳನ್ನು ಬೇರೆಯವರು ಹಂಚಿಕೊಳ್ಳಬಹುದಾಗಿದೆ.


ಒಂದು ವೇಳೆ ನೀವು ನಿಮ್ಮ ಆಧಾರ್ ಕಾರ್ಡ್ ಮೇಲೆ ಪ್ಲಾಸ್ಟಿಕ್ ಲ್ಯಾಮಿನೆಶನ್ ಮಾಡಿಸಿದ್ದಾರೆ ಅಥವಾ ಪ್ಲಾಸ್ಟಿಕ್ ಆಧಾರ್ ಕಾರ್ಡ್ ಮುದ್ರಿಸಿಕೊಂಡಿದ್ದರೆ, ನಿಮ್ಮ ಬಳಿ ರೂ.50 ರಿಂದ ರೂ.500 ಶುಲ್ಕವನ್ನು ಪಡೆಯಲಾಗುತ್ತದೆ. ಆಧಾರ್ ನೀಡುವ ಸೆಂಟರ್ ಗಳೂ ಈ ರೀತಿ ಕೂಡ ನಿಮ್ಮನ್ನು ಲೂಟಿ ಮಾಡಬಹುದು ಹಾಗೂ ಆಧಾರ್ ಗೆ ಶುಲ್ಕ ನೀಡುವುದು ಅನಾವಶ್ಯಕವಾಗಿದೆ.


ಈ ರೀತಿಯ ಅಂಗಡಿಗಳು ಅಥವಾ ಸೆಂಟರ್ ಗಳ ಆಮೀಷಕ್ಕೆ ಒಳಗಾಗಬಾರದು ಎಂದು UIDAI ಸಲಹೆ ನೀಡಿದೆ. ಪ್ಲಾಸ್ಟಿಕ್ ಅಥವಾ PVC ಆಧಾರ್ ಸ್ಮಾರ್ಟ್ ಕಾರ್ಡ್ ಗಳನ್ನು ಸಾಮಾನ್ಯವಾಗಿ QR ಕೋಡ್ ರೂಪದಲ್ಲಿ ಬಳಕೆ ಮಾಡಲಾಗುವುದಿಲ್ಲ ಎಂದು ಪ್ರಾಧಿಕಾರ ಹೇಳಿದೆ.


ಯುಐಡಿಎಐ ತನ್ನ ಹೇಳಿಕೆಯಲ್ಲಿ ಮೂಲ ಆಧಾರ್ ಹೊರತುಪಡಿಸಿ, ಡೌನ್‌ಲೋಡ್ ಮಾಡಿದ ಆಧಾರ್ ಮತ್ತು ಸರಳ ಕಾಗದದ ಬೇಸ್ ಮೇಲೆ ಮುದ್ರಿಸಲಾಗಿರುವ ಆಧಾರ್ ಕಾರ್ಡ್  ಸಂಪೂರ್ಣವಾಗಿ ಮಾನ್ಯತೆ ಹೊಂದಿದೆ. ಆದ್ದರಿಂದ, ನೀವು ಸ್ಮಾರ್ಟ್ ಬೇಸ್ ವಲಯಕ್ಕೆ ಬೀಳಬೇಕಾಗಿಲ್ಲ. ನಿಮಗೆ ಬಣ್ಣದ ಮುದ್ರಣ ಕೂಡ ಅಗತ್ಯವಿಲ್ಲ. ಅಲ್ಲದೆ, ನಿಮಗೆ ಪ್ರತ್ಯೇಕ ಆಧಾರ್ ಕಾರ್ಡ್ ಲ್ಯಾಮಿನೇಶನ್ ಅಥವಾ ಪ್ಲಾಸ್ಟಿಕ್ ಆಧಾರ್ ಕಾರ್ಡ್ ಅಗತ್ಯವಿಲ್ಲ ಎಂದು ಪ್ರಾಧಿಕಾರ ಹೇಳಿದೆ.


ಒಂದು ವೇಳೆ ನೀವು ನಿಮ್ಮ ಆಧಾರ್ ಕಾರ್ಡ್ ಕಳೆದುಕೊಂಡಿದ್ದರೆ, ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಉಚಿತವಾಗಿ https://eaadhaar.uidai.gov.in ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.