ನವದೆಹಲಿ: ಇತ್ತ ಅಧಿಕೃತ ರಾಜಕೀಯಕ್ಕೆ ಪ್ರವೇಶಿಸಿರುವ ಪ್ರಿಯಾಂಕಾ ಗಾಂಧಿ ಕುರಿತು ಪತಿ ರಾಬರ್ಟ್ ವಾದ್ರಾ ಭಾವನಾತ್ಮಕ ಫೇಸ್ ಬರಹವೊಂದನ್ನು ಬರದುಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಕಾಂಗ್ರೆಸ್ ಪಕ್ಷ ಪ್ರಿಯಾಂಕಾ ಗಾಂಧಿಯವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿಕೊಳ್ಳುವ ಮೂಲಕ ಅವರು ಅಧಿಕೃತ ರಾಜಕಾರಣಕ್ಕೆ ಪ್ರವೇಶ ನೀಡಿದ್ದರು. ಇದಾದ ನಂತರ ಇದೇ ಮೊದಲ ಬಾರಿಗೆ ಉತ್ತರ ಪ್ರದೇಶದ ಲಕ್ನೋದಲ್ಲಿ ಬೃಹತ್ ರೋಡ್ ಶೋ ದಲ್ಲಿ ಭಾಗವಹಿಸಿದ್ದರು.


ಇದಾದ ನಂತರ ಪತಿ ರಾಬರ್ಟ್ ವಾದ್ರಾ ಈಗ ತಮ್ಮ ಫೇಸ್ ಬುಕ್ ನಲ್ಲಿ  ಭಾವನಾತ್ಮಕವಾಗಿ ಬರೆದುಕೊಳ್ಳುತ್ತಾ " ಪಿ ಉತ್ತರ ಪ್ರದೇಶ ಹಾಗೂ ಭಾರತದ ಜನರ ಸೇವೆಗಾಗಿ ಆರಂಭವಾಗಿರುವ ಈ ನಿನ್ನ ಪ್ರಯಾಣಕ್ಕೆ ನನ್ನ ಶುಭ ಹಾರೈಕೆಗಳು. ನೀನು ನನ್ನ ಉತ್ತಮ ಸ್ನೇಹಿತೆ,ಉತ್ತಮ ಪತ್ನಿ ಹಾಗೂ ನಿನ್ನ ಮಕ್ಕಳಿಗೆ ಉತ್ತಮ ತಾಯಿಯಾಗಿರುವೆ.


"ಪ್ರತಿಕಾರದ ಹಾಗೂ ಕ್ರೂರ ರಾಜಕೀಯ ವಾತಾವರಣವಿದೆ. ಆದರೆ ನನಗೆ ಗೊತ್ತು, ಇದು ಜನರ ಸೇವೆ ಮಾಡಬೇಕಾಗಿರುವುದು ಆಕೆಯ ಕರ್ತ್ಯವ್ಯ, ಈಗ ಆಕೆಯನ್ನು ನಾವು ಜನರ ಕೈಗೆ ನೀಡುತ್ತಿದ್ದೇವೆ. ದಯವಿಟ್ಟು ಆಕೆಯನ್ನು ಸುರಕ್ಷಿತವಾಗಿಡಿ " ಎಂದು  ರಾಬರ್ಟ್ ವಾದ್ರಾ ತಮ್ಮ ಫೆಸ್ ಬುಕ್ ಪೋಸ್ಟ್ ನಲ್ಲಿ ವಿನಂತಿಸಿಕೊಂಡಿದ್ದಾರೆ.