PM ಕಿಸಾನ್ 9ನೇ ಕಂತಿನ ಹಣ ಮುಂದಿನ ವಾರ ಖಾತೆಗೆ : ಈ ತಪ್ಪುಗಳನ್ನ ಆದಷ್ಟೂ ಬೇಗ ಸರಿಪಡಿಸಿ!
ಈ ಯೋಜನೆಯಲ್ಲಿ ಸರ್ಕಾರವು ನೋಂದಾಯಿತ ರೈತರ ಖಾತೆಗಳಿಗೆ 2000 ರೂ. ಹಾಕುತ್ತದೆ. ಆದರೆ ನಿಮ್ಮ ಖಾತೆಯಲ್ಲಿ ಈ ಕಂತು ಬರುತ್ತದೆಯೇ ಎಂದು ನೀವು ಮುಂಚಿತವಾಗಿ ಪರಿಶೀಲಿಸಬೇಕು, ಏಕೆಂದರೆ ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ ಇಲ್ಲದಿದ್ದರೆ, ನಿಮಗೆ ಹಣ ಜಮಾ ಆಗುವುದಿಲ್ಲ.
ನವದೆಹಲಿ : ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 9 ನೇ ಕಂತಿನ ಹಣ ಆಗಸ್ಟ್ 9 ರಂದು ಅಂದರೆ ಸೋಮವಾರ ರೈತರ ಖಾತೆಗೆ ಜಮಾ ಆಗಲಿದೆ. ಈ ಯೋಜನೆಯಲ್ಲಿ ಸರ್ಕಾರವು ನೋಂದಾಯಿತ ರೈತರ ಖಾತೆಗಳಿಗೆ 2000 ರೂ. ಹಾಕುತ್ತದೆ. ಆದರೆ ನಿಮ್ಮ ಖಾತೆಯಲ್ಲಿ ಈ ಕಂತು ಬರುತ್ತದೆಯೇ ಎಂದು ನೀವು ಮುಂಚಿತವಾಗಿ ಪರಿಶೀಲಿಸಬೇಕು, ಏಕೆಂದರೆ ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ ಇಲ್ಲದಿದ್ದರೆ, ನಿಮಗೆ ಹಣ ಜಮಾ ಆಗುವುದಿಲ್ಲ.
ಮಾಹಿತಿಯ ಪ್ರಕಾರ, ದೇಶಾದ್ಯಂತ ಸುಮಾರು 50 ಲಕ್ಷ ರೈತರ 8ನೇ ಕಂತಿನ ಹಣ(Money) ಸಿಲುಕಿಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ, ಈ ರೈತರು ಆಗಸ್ಟ್ 9 ರಂದು ಬಿಡುಗಡೆಯಾಗುವ 9 ನೇ ಕಂತಿನ 2000 ರೂ. ಪಡೆಯಲಿದ್ದಾರೆ. ನೀವು ಈ ಯೋಜನೆಯ ಫಲಾನುಭವಿಯಾಗಿದ್ದರೆ ಮತ್ತು ಈ ಬಾರಿ ನಿಮ್ಮ ಹಣ ಬರುತ್ತದೆಯೋ ಇಲ್ಲವೋ ಎಂದು ತಿಳಿಯಲು ಬಯಸಿದರೆ, ನೀವು ಈ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಸ್ಟೇಟಸ್ ಪರಿಶೀಲಿಸಬಹುದು. ಹಾಗೆಯೇ, ಈ ಕಂತಿನ ಇಂದು ವೇಳೆ ಬರದಿದ್ದರೆ, ಅದಕ್ಕೆ ಕಾರಣವೇನು? ಅಂತಹ ಎಲ್ಲಾ ಪ್ರಶ್ನೆಗಳನ್ನು ನೀವು ತಿಳಿದುಕೊಳ್ಳಬಹುದು. ಇಲ್ಲಿದೆ ಅದಕ್ಕೆ ಸುಲಭ ದಾರಿ..
ಇದನ್ನೂ ಓದಿ : SBI ಬ್ಯಾಂಕ್ ಖಾತೆಯಲ್ಲಿ ಮಿನಿಮಂ ಬ್ಯಾಲೆನ್ಸ್ ಎಷ್ಟಿರಬೇಕು?
ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಈ ರೀತಿ ಪರಿಶೀಲಿಸಿ
1. ಮೊದಲು PM ಕಿಸಾನ್ ನ ಅಧಿಕೃತ ವೆಬ್ ಸೈಟ್ https://pmkisan.gov.in/ ಗೆ ಹೋಗಿ.
2. ಇಲ್ಲಿ ನೀವು ಬಲಭಾಗದಲ್ಲಿ 'ಫಾರ್ಮರ್ಸ್ ಕಾರ್ನರ್' ಆಯ್ಕೆಮಾಡಿ
3. ಇಲ್ಲಿ 'ಫಲಾನುಭವಿಗಳ ಪಟ್ಟಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಅದರ ನಂತರ ಹೊಸ ಪುಟ(New Page) ತೆರೆಯುತ್ತದೆ.
4. ಹೊಸ ಪುಟದಲ್ಲಿ, ನಿಮ್ಮ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಹಳ್ಳಿಯ ವಿವರಗಳನ್ನು ಭರ್ತಿ ಮಾಡಿ.
5. ಇದರ ನಂತರ Get Report ಮೇಲೆ ಕ್ಲಿಕ್ ಮಾಡಿ. ಇಲ್ಲಿ ನೀವು ಸಂಪೂರ್ಣ ಫಲಾನುಭವಿಗಳ ಪಟ್ಟಿಯನ್ನು ಪಡೆಯುತ್ತೀರಿ.
ಈ ತಪ್ಪುಗಳನ್ನು ಮಾಡಬೇಡಿ, ಈ ಕಂತಿನ ಹಣ ಕೈ ಸೇರುವುದಿಲ್ಲ
ವಾಸ್ತವವಾಗಿ, ಅಪ್ಲಿಕೇಶನ್ ನಲ್ಲಿ ಅನೇಕ ಸಣ್ಣ ತಪ್ಪುಗಳಿಂದಾಗಿ, ನಿಮ್ಮ ಕಂತಿನ ಸಿಕ್ಕಿಹಾಕಿಕೊಳ್ಳಬಹುದು.
1. ರೈತರ ಹೆಸರು ಇಂಗ್ಲಿಷ್(English)ನಲ್ಲಿರಬೇಕು
2. ಅರ್ಜಿಯಲ್ಲಿ ಹಿಂದಿ ಅಥವಾ ಇತರೆ ಭಾಷೆಯಲ್ಲಿ ರೈತರ ಹೆಸರನ್ನು ಸರಿಪಡಿಸಿ ಮತ್ತು ಅದನ್ನು ಇಂಗ್ಲಿಷ್‌ನಲ್ಲಿ ಮಾಡುವುದು ಅವಶ್ಯಕ.
3. ಅರ್ಜಿಯಲ್ಲಿ ಅರ್ಜಿದಾರರ ಹೆಸರು ಮತ್ತು ಬ್ಯಾಂಕ್ ಖಾತೆ(Bank Account)ಯಲ್ಲಿರುವ ಅರ್ಜಿದಾರರ ಹೆಸರು ವಿಭಿನ್ನವಾಗಿದ್ದರೂ, ಹಣ ಜಮಾ ಆಗುವುದಿಲ್ಲ.
4. ಬ್ಯಾಂಕಿನ ಐಎಫ್‌ಎಸ್‌ಸಿ ಕೋಡ್, ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಹಳ್ಳಿಯ ಹೆಸರನ್ನು ಬರೆಯುವಲ್ಲಿ ತಪ್ಪಾಗಿದ್ದರೆ, ನಿಮ್ಮ ಖಾತೆಗೆ ಜಮಾ ಆಗುವುದಿಲ್ಲ.
5. ಇತ್ತೀಚೆಗೆ, ಇತರ ಬ್ಯಾಂಕುಗಳೊಂದಿಗೆ ವಿಲೀನಗೊಂಡ ಬ್ಯಾಂಕುಗಳ IFSC ಕೋಡ್(IFSC Code) ಬದಲಾಗಿವೆ. ಆದ್ದರಿಂದ ಅರ್ಜಿದಾರರು ತಮ್ಮ ಹೊಸ ಐಎಫ್‌ಎಸ್‌ಸಿ ಕೋಡ್ ಅನ್ನು ಅಪ್‌ಡೇಟ್ ಮಾಡಬೇಕು.
ಇದನ್ನೂ ಓದಿ : Atal Pension Yojana: ಪ್ರತಿದಿನ 7 ರೂ. ಉಳಿಸಿ, ತಿಂಗಳಿಗೆ 5000 ರೂ. ಪಡೆಯಿರಿ
ತಪ್ಪನ್ನು ಸರಿಪಡಿಸುವುದು ಹೇಗೆ?
- ಯೋಜನೆಗೆ ನೋಂದಾಯಿಸುವಾಗ ಮಾಡಿದ ತಪ್ಪುಗಳನ್ನು ಸರಿಪಡಿಸಲು ಮೊದಲು ನೀವು pmkisan.gov.in ವೆಬ್‌ಸೈಟ್‌ಗೆ ಹೋಗಬೇಕು.
- ಇದರ ನಂತರ ನೀವು 'ಫಾರ್ಮರ್ಸ್ ಕಾರ್ನರ್' ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
- ಇದರ ನಂತರ ನೀವು 'ಆಧಾರ್ ಎಡಿಟ್' ಆಯ್ಕೆಯನ್ನು ನೋಡುತ್ತೀರಿ. ಇಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆಯಲ್ಲಿ ತಿದ್ದುಪಡಿಗಳನ್ನು ಮಾಡಬಹುದು.
- ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ್ದರೆ, ಅದನ್ನು ಸರಿಪಡಿಸಲು ನೀವು ಕೃಷಿ ಇಲಾಖೆ ಕಚೇರಿ ಅಥವಾ ಲೇಖಪಾಲ್ ಅನ್ನು ಸಂಪರ್ಕಿಸಬೇಕು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ