ನವದೆಹಲಿ : ರೈತರಿಗೆ ಮತ್ತೊಮ್ಮೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ನೀವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಯಾಗಿದ್ದರೆ, ಈ ಸುದ್ದಿ ನಿಮಗಾಗಿ ಮಾತ್ರ. ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ 10 ನೇ ಕಂತಿನ ಹಣ ಬಿಡುಗಡೆ ಮಾಡುವ ದಿನಾಂಕವನ್ನು ನಿಗದಿಪಡಿಸಲಾಗಿದೆ. ಈ ಕಂತಿನ ಅವನ್ನು ರೈತರ ಖಾತೆಗೆ ವರ್ಗಾಯಿಸಲು ಸರ್ಕಾರದಿಂದ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ.


COMMERCIAL BREAK
SCROLL TO CONTINUE READING

10ನೇ ಕಂತಿನ ಹಣ ಬಿಡುಗಡೆ ದಿನಾಂಕ ನಿಗದಿಪಡಿಸಿದ ಸರ್ಕಾರ?


11.37 ಕೋಟಿ ರೈತರಿಗೆ ಸರ್ಕಾರ ಇದುವರೆಗೆ 1.58 ಲಕ್ಷ ಕೋಟಿ ರೂಪಾಯಿಗಳನ್ನು ರೈತರ ಖಾತೆಗೆ ಜಮಾ ಮಾಡಲಾಗಿದೆ. ಈಗ ಕೇಂದ್ರ ಸರ್ಕಾರವು ಮುಂದಿನ 10 ನೇ ಕಂತನ್ನು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Yojana) 15 ಡಿಸೆಂಬರ್ 2021 ರೊಳಗೆ ಬಿಡುಗಡೆ ಮಾಡಲು ಯೋಜಿಸುತ್ತಿದೆ. ಗಮನಿಸಬೇಕಾದ ಸಂಗತಿಯೆಂದರೆ, ಕಳೆದ ವರ್ಷ 25 ಡಿಸೆಂಬರ್ 2020 ರಂದು ಸರ್ಕಾರವು ರೈತರಿಗೆ ಹಣವನ್ನು ವರ್ಗಾಯಿಸಿತ್ತು. 


ಇದನ್ನೂ ಓದಿ : Terrorist Arrested : ಪಾಕ್ ಭಯೋತ್ಪಾದಕನ ಹೆಡೆ ಮುರಿ ಕಟ್ಟಿದ ದೆಹಲಿ ಪೊಲೀಸರು : ಈ ಹಬ್ಬದ ಸಂದರ್ಭದಲ್ಲಿ ದಾಳಿಗೆ ಪ್ಲಾನ್


ರೈತರ ಖಾತೆಗೆ 4 ಸಾವಿರ ರೂ. ಬರುತ್ತದೆಯೇ?


ಈ ಯೋಜನೆಯಡಿ, ತಮ್ಮ ಖಾತೆಯಲ್ಲಿ ಪಿಎಂ ಕಿಸಾನ್ ನ 9 ನೇ ಕಂತನ್ನು(PM Kisan 9th installment) ಪಡೆಯದ ರೈತರು ಈಗ ಮುಂದಿನ ಕಂತಿನೊಂದಿಗೆ ಹಿಂದಿನ ಮೊತ್ತವನ್ನು ಪಡೆಯುತ್ತಾರೆ. ಅಂದರೆ, ರೈತರಿಗೆ ಈಗ 4000 ರೂ.
ಆದರೆ ಈ ಸೌಲಭ್ಯವು ಸೆಪ್ಟೆಂಬರ್ 30 ಕ್ಕಿಂತ ಮೊದಲು ನೋಂದಾಯಿಸಿಕೊಂಡ ರೈತರಿಗೆ ಮಾತ್ರ ಲಭ್ಯವಿರುತ್ತದೆ. ನೀವು ಸಹ ಅರ್ಜಿ ಸಲ್ಲಿಸಿದ್ದರೆ, ಅದನ್ನು ಸ್ವೀಕರಿಸಿದ  ನಂತರ ನೀವು ಒಟ್ಟು 4000 ರೂ. ಪಡೆಯುತ್ತೀರಿ.


 10 ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ ರೈತರು


ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ, ಈಗ ರೈತರು 10 ನೇ(PM Kisan 10th installment) ಕಂತಿಗೆ ಕಾಯುತ್ತಿದ್ದಾರೆ. ಇದುವರೆಗೆ ಈ ಯೋಜನೆಯ 9 ಕಂತುಗಳನ್ನು ರೈತರ ಖಾತೆಗೆ ಜಮಾ ಮಾಡಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ಕೇಂದ್ರ ಸರ್ಕಾರವು ತಲಾ 2,000 ರೂ.ಗಳ ಮೂರು ಕಂತುಗಳನ್ನು ಅಂದರೆ 6000 ರೂ.ಗಳನ್ನು ನೇರವಾಗಿ ರೈತರ ಖಾತೆಗೆ ಕಳುಹಿಸುತ್ತದೆ ಎಂದು ಹೇಳೋಣ. ಈ ಯೋಜನೆಯ ಉದ್ದೇಶ ದೇಶದ ರೈತರ ಆದಾಯವನ್ನು ಹೆಚ್ಚಿಸುವುದು ಮತ್ತು ಅವರಿಗೆ ನೇರವಾಗಿ ಆರ್ಥಿಕ ಸಹಾಯ ಮಾಡುವುದು.


ಇದನ್ನೂ ಓದಿ : PM GatiShakti Mastrplanಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ