PM Kisan - ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi) ಅಡಿಯಲ್ಲಿ ಕೇಂದ್ರ ಸರ್ಕಾರ ಇದುವರೆಗೆ 10 ಕಂತುಗಳ ಮೂಲಕ ರೈತರ (Farmers) ಖಾತೆಗೆ 20 ಸಾವಿರ ರೂಪಾಯಿಗಳನ್ನು ವರ್ಗಾಯಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ಈ ಯೋಜನೆಯ ಲಾಭ ಪಡೆಯುವ ಫಲಾನುಭವಿಗಳಿಗೆ ಒಳ್ಳೆಯ ಸುದ್ದಿ ಪ್ರಕಟಗೊಂಡಿದ್ದು, ಶೀಘ್ರದಲ್ಲೇ ಕೇಂದ್ರ ಸರ್ಕಾರ (Central Government) ಈ ಯೋಜನೆಯ 11 ಕಂತು (PM Kisan 11th Installment)  ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಈ ಯೋಜನೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನೀವು ತಿಳಿದಿರಬೇಕು.


COMMERCIAL BREAK
SCROLL TO CONTINUE READING

ನಿಮ್ಮ ಕಂತಿನ ಸ್ಥಿತಿಯನ್ನು ಈ ರೀತಿ ಪರಿಶೀಲಿಸಿ
ಯಾವುದೇ ರೈತರಿಗೆ ಇನ್ನೂ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 10 ನೇ ಕಂತಿನ (PM Kisan Fund) ಹಣ ಸಿಕ್ಕಿಲ್ಲ ಎಂದರೆ ಅವರು ತಮ್ಮ ಕಂತಿನ ಸ್ಥಿತಿಯನ್ನು ಪರಿಶೀಲಿಸಬೇಕಾಗುತ್ತದೆ.


>> ಇದಕ್ಕಾಗಿ, ಮೊದಲನೆಯದಾಗಿ, ನಿಮ್ಮ ಕಂತಿನ ಸ್ಥಿತಿಯನ್ನು ನೋಡಲು, ನೀವು ಮೊದಲು PM ಕಿಸಾನ್ ವೆಬ್‌ಸೈಟ್‌ಗೆ ಹೋಗಿ.
>> ಈಗ ಬಲಭಾಗದಲ್ಲಿರುವ ಫಾರ್ಮರ್ಸ್ ಕಾರ್ನರ್ ಮೇಲೆ ಕ್ಲಿಕ್ ಮಾಡಿ.
>> ಇದರ ನಂತರ ನೀವು ಬೆನಿಫಿಶಿಯರಿ ಸ್ಟೇಟಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ ಮುಂದೆ ಹೊಸ ಪುಟ ತೆರೆದುಕೊಳ್ಳಲಿದೆ.
>> ಇಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಇದರ ನಂತರ ನೀವು ನಿಮ್ಮ ಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುವಿರಿ.
>> ಒಂದು ವೇಳೆ ನಿಮ್ಮ ಖಾತೆಗೆ ಹಣ ಇನ್ನೂ ವರ್ಗವನೆಯಾಗಿಲ್ಲ ಎಂದರೆ, ನೀವು ಸಹಾಯವಾಣಿ ಸಂಖ್ಯೆ 155261 ಅಥವಾ 1800115526 (ಟೋಲ್ ಫ್ರೀ) ಅಥವಾ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 011-23381092 ಅನ್ನು ಸಂಪರ್ಕಿಸಬಹುದು. ನಿಮ್ಮ ದೂರನ್ನು ನೀವು ಇ-ಮೇಲ್ ಐಡಿ (pmkisan-ict@gov.in) ಗೆ ಮೇಲ್ ಕೂಡ ಮಾಡಬಹುದು.


ಇದನ್ನೂ ಓದಿ-ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಏಳು ಜಿಲ್ಲೆಗಳ ಇಂಟರ್ನೆಟ್ ಸೇವೆ ಸ್ಥಗಿತ!


ಹಣ ಯಾವಾಗ ಬರುತ್ತದೆ
ಈ ಯೋಜನೆಯ 11 ನೇ ಕಂತಿನ ಹಣ ವರ್ಗಾವಣೆಯ ಕುರಿತು ಹೇಳುವುದಾದರೆ,  ಪಿಎಂ ಕಿಸಾನ್ ಯೋಜನೆಯಡಿ, ಮೊದಲ ಕಂತಿನ ಹಣವನ್ನು ಏಪ್ರಿಲ್ 1 ರಿಂದ ಜುಲೈ 31 ರ ನಡುವೆ ರೈತರಿಗೆ ನೀಡಲಾಗುತ್ತದೆ. ಎರಡನೇ ಕಂತಿನ ಹಣವು ಆಗಸ್ಟ್ 1 ಮತ್ತು ನವೆಂಬರ್ 30 ರ ನಡುವೆ ಬರುತ್ತದೆ. ಮೂರನೇ ಕಂತಿನ ಹಣ ಡಿಸೆಂಬರ್ 1 ರಿಂದ ಮಾರ್ಚ್ 31 ರ ನಡುವೆ ವರ್ಗಾಯಿಸಲಾಗುತ್ತದೆ.


ಇದನ್ನೂ ಓದಿ-SBI ಗ್ರಾಹಕರಿಗೆ ಸಿಹಿ ಸುದ್ದಿ! ಮನೆಯಲ್ಲೇ ಕುಳಿತು ಈ ಕೆಲಸ ಮಾಡಿ, ತೆರಿಗೆಯಲ್ಲಿ ಬಂಪರ್ ವಿನಾಯಿತಿ ಸಿಗುತ್ತೆ


ಹೀಗಿರುವಾಗ ಏಪ್ರಿಲ್ ಆರಂಭದಲ್ಲೇ ರೈತರ ಖಾತೆಗೆ 11 ಕಂತಿನ ಹಣ ಜಮೆಯಾಗಲಿದ್ದು,  ಕೇಂದ್ರ ಸರ್ಕಾರದಿಂದರೈತರಿಗೆ  ಮತ್ತೊಮ್ಮೆ ಬಿಗ್ ರಿಲೀಫ್ ಸಿಗಲಿದೆ ಎಂದೇ ಹೇಳಬಹುದು.


ಇದನ್ನೂ ಓದಿ-Video:ಅಪಘಾತದಲ್ಲಿ ಒಂದು ಕಾಲು ಕಳೆದುಕೊಂಡ 19 ವರ್ಷದ ರೇಖಾ ಇಂದು YouTube ನಲ್ಲಿ One Leg Dancer ಹೆಸರಿನಿಂದ ಖ್ಯಾತಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.