ನವದೆಹಲಿ: PM Kisan Latest News - ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ (PM Kisan Samman Nidhi Yojana) ಹೊಸ ವರ್ಷದ ಮೊದಲ ದಿನದಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು 10 ನೇ ಕಂತಿನ 2000 ರೂಪಾಯಿಗಳನ್ನು ರೈತರ ಖಾತೆಗೆ ವರ್ಗಾಯಿಸಿದ್ದಾರೆ. ಇದೀಗ ಸರ್ಕಾರವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ 2022 ರಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ, ಇದು 12 ಕೋಟಿಗೂ ಹೆಚ್ಚು ನೋಂದಾಯಿತ ರೈತರ ಮೇಲೆ ನೇರ ಪರಿಣಾಮ ಬೀರಲಿದೆ. ಹೌದು ಈ ಬಾರಿ ರೈತರಿಂದ ದೊಡ್ಡ ಸೌಲಭ್ಯ ಸರ್ಕಾರ ಕಿತ್ತುಕೊಂಡಿದೆ. ಸರ್ಕಾರ ಏನು ಬದಲಾವಣೆ ಮಾಡಿದೆ ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಪಿಎಂ ಕಿಸಾನ್‌ನಲ್ಲಿ ದೊಡ್ಡ ಬದಲಾವಣೆ
ಪ್ರಧಾನಮಂತ್ರಿ ಕಿಸಾನ್ (PM Kisan Samman Nidhi) ಯೋಜನೆಯಲ್ಲಿ ಕೇಂದ್ರ ಸರ್ಕಾರ ದೊಡ್ಡ ಬದಲಾವಣೆ ಮಾಡಿದೆ. ಇದುವರೆಗೆ ರೈತರು ನೋಂದಣಿ ನಂತರ ತಮ್ಮ ಸ್ಥಿತಿಗತಿ, ಅರ್ಜಿಯ ಸ್ಥಿತಿ ಏನು, ನಿಮ್ಮ ಬ್ಯಾಂಕ್ ಖಾತೆಗೆ ಎಷ್ಟು ಹಣ ಬಂದಿದೆ ಅಥವಾ ಯಾವಾಗ ಬಂದಿದೆ ಇತ್ಯಾದಿಗಳನ್ನು ಖುದ್ದಾಗಿ ಪರಿಶೀಲಿಸಬಹುಡಿತ್ತು.  ಆದರೆ, ಈಗ ರೈತರಿಗೆ ಇದು ಸಾಧ್ಯವಿಲ್ಲ. ಇಲ್ಲಿಯವರೆಗೆ ಯಾವುದೇ ರೈತರು ತಮ್ಮ ಆಧಾರ್ ಸಂಖ್ಯೆ, ಮೊಬೈಲ್ ಅಥವಾ ಖಾತೆ ಸಂಖ್ಯೆ ಅಥವಾ ಅವರ ಕಂತಿನ ಸ್ಥಿತಿಯನ್ನು ತಿಳಿಯಲು PM ಕಿಸಾನ್ ಪೋರ್ಟಲ್‌ಗೆ ಭೇಟಿ ನೀಡಬಹುದಾಗಿತ್ತು. ಆದರೆ ಈಗ ರೈತರು ತಮ್ಮ ಮೊಬೈಲ್ ಸಂಖ್ಯೆ ಮೂಲಕ ಈ ಸ್ಥಿತಿಯನ್ನು ನೋಡಲು ಸಾಧ್ಯವಾಗುವುದಿಲ್ಲ. ಈ ಮಾಹಿತಿಯನ್ನು ಪಡೆಯಲು ಇನ್ಮುಂದೆ ರೈತರು ಕೇವಲ ತಮ್ಮ ಆಧಾರ್ ಮತ್ತು ಬ್ಯಾಂಕ್ ಖಾತೆಯ ಸಂಖೆಯನ್ನು ನಮೂದು ಮಾಡುವ ಮೂಲಕ ಮಾತ್ರ ಈ ಮಾಹಿತಿಯನ್ನು ಪರಿಶೀಲಿಸಬಹುದು.


ಯಾಕೆ ಈ ಬದಲಾವಣೆ
ಇದು ರೈತರ ಮೇಲೆ ಖಂಡಿತಾ ಪರಿಣಾಮ ಬೀರುತ್ತದೆ. ಮೊದಲು ರೈತರ ಮೊಬೈಲ್ ಸಂಖ್ಯೆಯಿಂದ ಸ್ಥಿತಿಯನ್ನು ಪರಿಶೀಲಿಸುವುದು ಸುಲಭದ ಮಾತಾಗಿತ್ತು, ಆದರೆ, ಇದರಿಂದ ನಷ್ಟವೂ ಉಂಟಾಗುತ್ತಿದೆ. ವಾಸ್ತವವಾಗಿ, ಅನೇಕ ಜನರು ಯಾವುದೇ ಮೊಬೈಲ್ ಸಂಖ್ಯೆಯಿಂದ ಸ್ಥಿತಿಯನ್ನು ಪರಿಶೀಲಿಸುತ್ತಿದ್ದರು ಮತ್ತು ಅನೇಕ ಬಾರಿ ಇತರ ಜನರು ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದರು. ಇಂತಹ ಅಕ್ರಮಗಳನ್ನು ತಡೆಯಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಇದಲ್ಲದೆ, ಈ ಯೋಜನೆಯಲ್ಲಿ ಈಗಾಗಲೇ KYC ಅನ್ನು ಕಡ್ಡಾಯಗೊಳಿಸಲಾಗಿದೆ.


ಅದರ ಪ್ರಕ್ರಿಯೆ ಕೆಳಗಿನಂತಿದೆ 
1. ಆಧಾರ್ ಆಧಾರಿತ OTP ದೃಢೀಕರಣಕ್ಕಾಗಿ ರೈತರ ಮೂಲೆಯಲ್ಲಿ 'EKYC' ಆಯ್ಕೆಯನ್ನು ಕ್ಲಿಕ್ ಮಾಡಿ
2. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಹತ್ತಿರದ CSC ಕೇಂದ್ರಗಳನ್ನು ಸಂಪರ್ಕಿಸಿ.
3. ನಿಮ್ಮ ಮೊಬೈಲ್, ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಸಹಾಯದಿಂದ ನೀವು ಅದನ್ನು ಮನೆಯಲ್ಲಿಯೇ ಕುಳಿತು ಪೂರ್ಣಗೊಳಿಸಬಹುದು.
4. ಇದಕ್ಕಾಗಿ, ನೀವು ಮೊದಲು https://pmkisan.gov.in/ ಪೋರ್ಟಲ್‌ಗೆ ಹೋಗಿ.
5. ಬಲಭಾಗದಲ್ಲಿ ನೀವು ಇವುಗಳಿಗೆ ಸಂಬಂಧಿಸಿದ ಟ್ಯಾಬ್ಗಳನ್ನು ಕಾಣಬಹುದು. ಮೇಲ್ಭಾಗದಲ್ಲಿ ನೀವು ಇ-ಕೆವೈಸಿ ಬರೆದಿರುವುದನ್ನು ಸಹ ಕಾಣಬಹುದು. ಅದರ ಮೇಲೆ ಕ್ಲಿಕ್ ಮಾಡಿ.


ಇದನ್ನೂ ಓದಿ-Employee Pension Scheme: ದುಪ್ಪಟ್ಟಾಗಲಿದೆಯಾ ನೌಕರರ ಪೆನ್ಷನ್! 15000ರೂ.ಗಳ ಗರಿಷ್ಠ ಲಿಮಿಟ್ ಇನ್ಮುಂದೆ ಇರೋದಿಲ್ವೆ?


ನಿಮ್ಮ ಕಂತು ಸ್ಥಿತಿಯನ್ನು ಈ ರೀತಿ ಪರಿಶೀಲಿಸಿ
1. ನಿಮ್ಮ ಕಂತಿನ ಸ್ಥಿತಿಯನ್ನು ನೋಡಲು, ನೀವು ಮೊದಲು PM ಕಿಸಾನ್ ವೆಬ್‌ಸೈಟ್‌ಗೆ ಹೋಗಿ.
2. ಈಗ ಬಲಭಾಗದಲ್ಲಿರುವ ರೈತರ ಕಾರ್ನರ್ ಮೇಲೆ ಕ್ಲಿಕ್ ಮಾಡಿ.
3. ಇದರ ನಂತರ ನೀವು ಬೆನಿಫಿಶಿಯರಿ ಸ್ಟೇಟಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
4. ಈಗ ನಿಮ್ಮ ಮುಂದೆ ಹೊಸ ಪುಟ ತೆರೆದುಕೊಳ್ಳುತ್ತದೆ.
5. ಇಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆ ಅಥವಾ ಬ್ಯಾಂಕ್ ಖಾತೆಯನ್ನು ನಮೂದಿಸಿ.
6. ಇದರ ನಂತರ ನೀವು ನಿಮ್ಮ ಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುವಿರಿ.


ಇದನ್ನೂ ಓದಿ-National Start-up Day: ಜನವರಿ 16 ನ್ನು ರಾಷ್ಟ್ರೀಯ ನವೋದ್ಯಮದ ದಿನ ಎಂದು ಘೋಷಿಸಿದ ಪ್ರಧಾನಿ ಮೋದಿ


ಏನಿದು ಪಿಎಂ ಕಿಸಾನ್ ಯೋಜನೆ?
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ, ಪ್ರತಿ ವರ್ಷ 6,000 ರೂ.ಗಳನ್ನು ನೇರವಾಗಿ ರೈತರ ಖಾತೆಗೆ ಕಳುಹಿಸಲಾಗುತ್ತದೆ, ಇದನ್ನು ರೂ. 2000ರ ಮೂರು ಸಮಾನ ಕಂತುಗಳಲ್ಲಿ  ಪಾವತಿಸಲಾಗುತ್ತದೆ. ಇದರಡಿ ಇದುವರೆಗೆ 10 ಕಂತುಗಳನ್ನು ರೈತರ ಖಾತೆಗೆ ವರ್ಗಾಯಿಸಲಾಗಿದೆ. ನಿಮ್ಮ ಖಾತೆಗೆ ಹಣವನ್ನು ಇನ್ನೂ ವರ್ಗಾವಣೆಯಾಗಿಲ್ಲ ಎಂದಾದಲ್ಲಿ ಮೊದಲು ನಿಮ್ಮ ಸ್ಥಿತಿ ಮತ್ತು ಬ್ಯಾಂಕ್ ಖಾತೆಯನ್ನು ಪರಿಶೀಲಿಸಿ.


ಇದನ್ನೂ ಓದಿ-Post Office ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡಿ : ಕೇವಲ 5 ವರ್ಷದಲ್ಲಿ 14 ಲಕ್ಷಕ್ಕೂ ಹೆಚ್ಚು ಹಣ ಲಾಭ ಸಿಗುತ್ತೆ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.