ನವದೆಹಲಿ: ದೇಶಾದ್ಯಂತದ ರೈತರಿಗೆ 6 ಸಾವಿರ ರೂಪಾಯಿ ಅನುದಾನ ನೀಡುವ ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯಿಂದ 2 ಕೋಟಿಗೂ ಹೆಚ್ಚು ರೈತರ ಹೆಸರನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ. ಸರ್ಕಾರ ಪ್ರಸ್ತುತ ಏಳನೇ ಕಂತಿನಡಿ ರೈತರ ಖಾತೆಗಳಲ್ಲಿ 2 ಸಾವಿರ ರೂಪಾಯಿಗಳನ್ನು ವರ್ಗಾಯಿಸುತ್ತಿದೆ.


COMMERCIAL BREAK
SCROLL TO CONTINUE READING

ಮತ್ತೊಂದೆಡೆ ತಪ್ಪಾದ ಮಾಹಿತಿ ನೀಡಿರುವ ರೈತರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ. ಈ ಸಮಯದಲ್ಲಿ ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆ (PM Kisan Samman Nidhi Yojana) ಯಲ್ಲಿ ಯೋಜನೆಯ ಲಾಭ ಪಡೆಯುವ ರೈತರ ಸಂಖ್ಯೆ 9 ಕೋಟಿ 97 ಲಕ್ಷಕ್ಕೆ ಹತ್ತಿರದಲ್ಲಿದ್ದರೆ, ಕೆಲವು ದಿನಗಳ ಹಿಂದೆ ಈ ಸಂಖ್ಯೆ ಸುಮಾರು 11 ಕೋಟಿ ಇತ್ತು.


Farmers) ಖಾತೆಗೆ ಜಮಾ ಮಾಡುತ್ತಿದೆ. ಇದರ ಅಡಿಯಲ್ಲಿ ಡಿಸೆಂಬರ್ 1 ರಿಂದ 2 ಸಾವಿರ ರೂಪಾಯಿ ರೈತರ ಖಾತೆಯನ್ನು ತಲುಪುತ್ತಿದೆ. ಈ ಮಧ್ಯೆ ಕೆಲವು ರೈತ ಕುಟುಂಬದಲ್ಲಿ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಮಂದಿ ಇದರ ಲಾಭ ಪಡೆಯುತ್ತಿದ್ದಾರೆ ಎಂಬುದನ್ನು ಸರ್ಕಾರ ಗಮನಿಸಿದೆ. ಜೊತೆಗೆ ಕೆಲವು ರೈತರು ನಕಲಿ ದಾಖಲೆಗಳನ್ನು ಒದಗಿಸಿ ಇದರ ಲಾಭ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಹಲವು ರೈತರ ಹೆಸರನ್ನು ಕೈಬಿಡಲಾಗಿದೆ. ಇಲ್ಲಿಯವರೆಗೆ ಅಂತಹ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿರುವುದು ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಿಂದ ಎಂದು ಮಾಹಿತಿ ಲಭ್ಯವಾಗಿದೆ. ಇದಲ್ಲದೆ ಲಕ್ಷಾಂತರ ರೈತರನ್ನು ಅವರ ತಪ್ಪಾದ ಮಾಹಿತಿಯ ಕಾರಣದಿಂದಾಗಿ ಪೋರ್ಟಲ್‌ನಿಂದ ತೆಗೆದುಹಾಕಲಾಗಿದೆ.


PM Kisan Samman Nidhi Yojana: ನಿಮ್ಮ ಹಣ ಎಲ್ಲಿ ಸಿಲುಕಿದೆ ಎಂದು ತಿಳಿಯಿರಿ


ರೈತರು ಪ್ರತಿ ಬಾರಿಯೂ ಕಡಿಮೆಯಾಗುತ್ತಿದ್ದಾರೆ:
ಕಂತಿನ ಮೂಲಕ ಯೋಜನೆಯ ಲಾಭವನ್ನು ಪಡೆಯುವ ರೈತರ ಸಂಖ್ಯೆ ಕಡಿಮೆಯಾಗುತ್ತಿದೆ. ಪಿಎಂ ಕಿಸಾನ್ (PM Kisan) ಪೋರ್ಟಲ್ ಪ್ರಕಾರ ಮೊದಲ ಕಂತಿನಲ್ಲಿ 10.52 ಕೋಟಿ ರೈತರು ಈ ಯೋಜನೆಯ ಲಾಭ ಪಡೆದಿದ್ದರೆ, ಎರಡನೇ ಕಂತಿನಲ್ಲಿ 9.97 ಕೋಟಿ ರೈತರು, ಮೂರನೇ ಕಂತಿನಲ್ಲಿ 9.05 ಕೋಟಿ ರೈತರು, ನಾಲ್ಕನೇ ಕಂತಿನಲ್ಲಿ 7.83 ಕೋಟಿ ರೈತರು ಮತ್ತು ಐದನೇ ಕಂತಿನಲ್ಲಿ 6.58 ಕೋಟಿ ರೈತರಿಗೆ ಈ ಯೋಜನೆ ಲಾಭ ತಲುಪಿದ್ದರೆ, ಆರನೇ ಕಂತಿನಲ್ಲಿ ಇದರ ಲಾಭ  ಪಡೆಯುವ ರೈತರ ಸಂಖ್ಯೆ ಕೇವಲ 3.84 ಕೋಟಿ. ಅಂತಹ ಪರಿಸ್ಥಿತಿಯಲ್ಲಿ, ಏಳನೇ ಕಂತು ಪಡೆಯುವ ರೈತರ ಸಂಖ್ಯೆ ಇದಕ್ಕಿಂತ ಕಡಿಮೆಯಿರಬಹುದು.


PM Kisan Samman Nidhi: ನಿಮ್ಮ ಖಾತೆಗೆ 6000 ರೂ. ಬರದಿದ್ದರೆ ಇಲ್ಲಿ ದೂರು ನೀಡಿ



ಹೊಸ ಪಟ್ಟಿಯಲ್ಲಿ ಈ ರೀತಿಯ ನಿಮ್ಮ ಹೆಸರನ್ನು ಪರಿಶೀಲಿಸಿ:
* Pmkisan.gov.in ವೆಬ್‌ಸೈಟ್‌ಗೆ ಹೋಗಿ.
* ಮುಖಪುಟದಲ್ಲಿರುವ ಮೆನು ಬಾರ್ ಅನ್ನು ನೋಡಿ ಮತ್ತು ಇಲ್ಲಿ 'ಫಾರ್ಮರ್ ಕಾರ್ನರ್' ಗೆ  ಹೋಗಿ.
* ಇಲ್ಲಿ 'ಫಲಾನುಭವಿಗಳ ಪಟ್ಟಿ' ಲಿಂಕ್ ಕ್ಲಿಕ್ ಮಾಡಿ.
* ಇದರ ನಂತರ ನಿಮ್ಮ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮದ ವಿವರಗಳನ್ನು ನಮೂದಿಸಿ.
* ಇದನ್ನು ಭರ್ತಿ ಮಾಡಿದ ನಂತರ, ಗೆಟ್ ರಿಪೋರ್ಟ್ ಕ್ಲಿಕ್ ಮಾಡಿ ಮತ್ತು ಸಂಪೂರ್ಣ ಪಟ್ಟಿಯನ್ನು ಪಡೆಯಿರಿ