ರೈತರಿಗೆ ಸಿಹಿ ಸುದ್ದಿ : PM Kisan 10ನೇ ಕಂತು ಈ ದಿನ ನಿಮ್ಮ ಖಾತೆಗೆ, ಈ ರೀತಿ ಸ್ಟೇಟಸ್ ಪರಿಶೀಲಿಸಿ
ಈ ನಿಟ್ಟಿನಲ್ಲಿ ರೈತರಿಗೆ ಶೀಘ್ರದಲ್ಲೇ ಸಿಹಿ ಸುದ್ದಿಯೊಂದು ಸಿಗಲಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಅವರ ಖಾತೆಗೆ 2 ಸಾವಿರ ರೂಪಾಯಿಗಳನ್ನು ಜಮಾ ಮಾಡಲಾಗುತ್ತಿದೆ.
ನವದೆಹಲಿ : ಪಿಎಂ ಕಿಸಾನ್ ಯೋಜನೆ ಅಡಿಯ 10 ನೇ ಕಂತಿನ ಹಣ ಶೀಘ್ರದಲ್ಲೇ ರೈತರ ಖಾತೆಗೆ ಸರ್ಕಾರ ಜಮಾ ಮಾಡಲಿದೆ. ಈ ನಿಟ್ಟಿನಲ್ಲಿ ರೈತರಿಗೆ ಶೀಘ್ರದಲ್ಲೇ ಸಿಹಿ ಸುದ್ದಿಯೊಂದು ಸಿಗಲಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಅವರ ಖಾತೆಗೆ 2 ಸಾವಿರ ರೂಪಾಯಿಗಳನ್ನು ಜಮಾ ಮಾಡಲಾಗುತ್ತಿದೆ.
ನೋಂದಾಯಿತ ರೈತರಿಗೆ ಸಿಗಲಿದೆ ಹಣ
ಮಾಧ್ಯಮ ವರದಿಗಳ ಪ್ರಕಾರ, ಸಮ್ಮನ್ ನಿಧಿಯ(PM Kisan Samman Nidhi)ನ್ನು ರೈತರ ಖಾತೆಗೆ ಕಳುಹಿಸಲು ಕೇಂದ್ರ ಸರ್ಕಾರದಿಂದ ಸಿದ್ಧತೆಗಳು ಆರಂಭವಾಗಿವೆ. ಡಿಸೆಂಬರ್ 15 ರೊಳಗೆ ಸಮ್ಮಾನ್ ನಿಧಿಯನ್ನು ಪಿಎಂ ಕಿಸಾನ್ ಯೋಜನೆಯಡಿ ನೋಂದಾಯಿಸಿದ ರೈತರ ಖಾತೆಗೆ ವರ್ಗಾಯಿಸಲಾಗುವುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : LPG Subsidy : LPG ಗ್ಯಾಸ್ ಸಬ್ಸಿಡಿ ಹಣ ಬರುತ್ತಿಲ್ಲವೇ? ಹಾಗಿದ್ರೆ, ಈ ಕೆಲಸ ಮಾಡಿ, ಖಾತೆಗೆ ಹಣ ಬರುತ್ತದೆ
ವಾರ್ಷಿಕ 6 ಸಾವಿರ ರೂಪಾಯಿ ನೀಡಲಾಗುತ್ತಿದೆ
ನೀವು ಕೃಷಿಕರಾಗಿದ್ದು ಈ ಕಿಸಾನ್ ಯೋಜನೆಯಲ್ಲಿ ಇನ್ನೂ ನೋಂದಾಯಿಸದಿದ್ದರೆ, ಆದಷ್ಟು ಬೇಗ ನೋಂದಾಯಿಸಿ, ಇದರಿಂದ ನೀವು ಕೂಡ ಸಮ್ಮನ್ ನಿಧಿಯ ಲಾಭ(PM Kisan Benefits) ಪಡೆಯಬಹುದು. ಮಾಧ್ಯಮ ವರದಿಗಳ ಪ್ರಕಾರ, ಸರ್ಕಾರ ಇದುವರೆಗೆ 1.5.3 ಲಕ್ಷ ಕೋಟಿ ಅಹವನ್ನ 11.37 ಕೋಟಿ ರೈತರ ಖಾತೆಗೆ ಜಮಾ ಮಾಡಲಾಗಿದೆ. ಯೋಜನೆಯಡಿ, ಕೇಂದ್ರ ಸರ್ಕಾರವು ರೈತರ ಖಾತೆಗೆ ವಾರ್ಷಿಕವಾಗಿ 2,000 ರೂ. ಅಂತೆ ಮೂರು ಕಂತುಗಳಲ್ಲಿ ಹಣ ನೀಡುತ್ತಿದೆ.
ಈ ರೀತಿಯ ಸ್ಟೇಟಸ್ ಪರಿಶೀಲಿಸಿ
ನೀವು ಯೋಜನೆ(PM Kisan)ಯಡಿ ನೋಂದಾಯಿಸಿಕೊಂಡಿದ್ದರೆ, ನೀವು ಈ ರೀತಿ 10 ನೇ ಕಂತಿನ ಸ್ಥಿತಿಯನ್ನು ಪರಿಶೀಲಿಸಬಹುದು. ಮೊದಲು pmkisan.gov.in ಗೆ ಹೋಗಿ. ಇಲ್ಲಿ 'ಫಾರ್ಮರ್ಸ್ ಕಾರ್ನರ್' ಮೇಲೆ ಕ್ಲಿಕ್ ಮಾಡಿ. ಅದರ ನಂತರ ಫಲಾನುಭವಿ ಸ್ಥಿತಿಯ ಮೇಲೆ ಕ್ಲಿಕ್ ಮಾಡಿ. ಇದರಲ್ಲಿ, ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಹಳ್ಳಿಯ ಹೆಸರಿನಂತಹ ನಿಮ್ಮ ಪ್ರದೇಶಕ್ಕೆ ಸಂಬಂಧಿಸಿದ ಮಾಹಿತಿಯನ್ನು ಭರ್ತಿ ಮಾಡಿ. ನಂತರ 'ರಿಪೋರ್ಟ್' ಮೇಲೆ ಕ್ಲಿಕ್ ಮಾಡಿ. ನೀವು ಪಟ್ಟಿಯನ್ನು ನೋಡುತ್ತೀರಿ. ಇದರಲ್ಲಿ ನೀವು ನಿಮ್ಮ ಕಂತಿನ ಸ್ಥಿತಿಯನ್ನು ನೋಡಬಹುದು.
ಇದನ್ನೂ ಓದಿ : LIC ಈ ಯೋಜನೆಯಲ್ಲಿ ಪ್ರತಿದಿನ ₹200 ಹೂಡಿಕೆ ಮಾಡಿ, ಪಡೆಯಿರಿ ₹28 ಲಕ್ಷ ಲಾಭ!
ಇವರಿಗೆ ಸಿಗುವುದಿಲ್ಲ ಈ ಯೋಜನೆಯ ಪ್ರಯೋಜನ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಕೇವಲ 2 ಹೆಕ್ಟೇರ್ ಅಂದರೆ 5 ಎಕರೆ ಕೃಷಿ ಭೂಮಿಯನ್ನು ಹೊಂದಿರುವ ರೈತರಿಗೆ(Farmers) ಮಾತ್ರ ಲಾಭ ಸಿಗುತ್ತದೆ. ಈಗ ಸರ್ಕಾರವು ಹಿಡುವಳಿ ಮಿತಿಯನ್ನು ರದ್ದುಪಡಿಸಿದೆ. ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ವ್ಯಕ್ತಿಯನ್ನು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಇದಲ್ಲದೇ, ವಕೀಲರು, ವೈದ್ಯರು, ಸಿಎಗಳನ್ನು ಕೂಡ ಯೋಜನೆಯಿಂದ ಹೊರಗಿಡಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ