ನವದೆಹಲಿ : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi) ಯೋಜನೆ ಅಡಿಯಲ್ಲಿ ಡಿಸೆಂಬರ್ ನಿಂದ ಮಾರ್ಚ್ ಒಳಗೆ ನೀಡಲಾಗುವ  7 ನೇ ಕಂತಿನ ಹಣ ಈಗಾಗಲೇ  ಸುಮಾರು 9.42 ಕೋಟಿ ರೈತರ ಖಾತೆಗಳನ್ನು ತಲುಪಿದೆ. ಇಲ್ಲಿಯವರೆಗೆ  ಈ ಯೋಜನೆಯಡಿ ಸುಮಾರು 11.52 ಕೋಟಿ ರೈತರು ನೋಂದಾಯಿಸಿ ಕೊಂಡಿದ್ದಾರೆ.  ಇನ್ನೂ ಅನೇಕ ರೈತರು ಪಿಎಂ ಕಿಸಾನ್ ನಿಧಿಯಿಂದ ಹಣವನ್ನು ಪಡೆದಿಲ್ಲ. ನೀವು ಕೂಡಾ ಹಣ ಪಡೆಯದ ರೈತರ ಪಟ್ಟಿಯಲ್ಲಿದ್ದರೆ, ಇನ್ನೂ ನಿಮ್ಮ ಖಾತೆಗೆ ಹಣ ಯಾಕೆ ಬಂದಿಲ್ಲ ಎನ್ನುವುದನ್ನು ಹೇಗೆ ತಿಳಿದುಕೊಳ್ಳಬಹುದು ಎಂಬ ಮಾಹಿತಿ ಇಲ್ಲಿದೆ..
 
1.6 ಕೋಟಿ ರೈತರ ಖಾತೆಗೆ ಹಣ ಜಮಾ ಮಾಡಲಾಗುವುದು:
ಸರ್ಕಾರ ವಾರ್ಷಿಕವಾಗಿ 6000 ರೂಗಳನ್ನು ಮೂರು ಕಂತುಗಳಲ್ಲಿ ರೈತರ (Farmers) ಖಾತೆಗೆ ಕಳುಹಿಸುತ್ತದೆ. ಈ ಪೈಕಿ  ಮೊದಲ ಕಂತು ಏಪ್ರಿಲ್ ನಿಂದ ಜುಲೈ ವರೆಗೆ, ಎರಡನೇ ಕಂತು ಆಗಸ್ಟ್ ನಿಂದ ನವೆಂಬರ್ ವರೆಗೆ ಮತ್ತು ಮೂರನೇ ಕಂತು ಡಿಸೆಂಬರ್ ನಿಂದ ಮಾರ್ಚ್ ವರೆಗೆ ಬರುತ್ತದೆ. ಈ ಯೋಜನೆಯಡಿ ಈಗಾಗಲೇ ಆರು ಕಂತುಗಳ ಹಣ ಎಲ್ಲಾ ರೈತರ ಖಾತೆಯನ್ನು ತಲುಪಿದೆ.  ಏಳನೇ ಕಂತು 9,41,90,188 ರೈತರ ಖಾತೆಗಳನ್ನು ತಲುಪಿದೆ. ಇನ್ನೂ  1.6 ಕೋಟಿ ರೈತರ ಖಾತೆಗೆ 7 ನೇ ಕಂತಿನ ಹಣ ತಲುಪಿಲ್ಲ. ಕೃಷಿ ಸಚಿವಾಲಯದ ಪ್ರಕಾರ, ಪಿಎಂ ಕಿಸಾನ್ ಯೋಜನೆಯ ಏಳನೇ ಕಂತಿನ ಹಣವನ್ನು ಮಾರ್ಚ್ 2021 ರೊಳಗೆ ಎಲ್ಲಾ ರೈತರ ಖಾತೆಗೆ ವರ್ಗಾಯಿಸಲಾಗುವುದು. ಕೆಲವು ರೈತರ ಆಧಾರ್ ಕಾರ್ಡ್ (Aadhaaar) ಸಂಖ್ಯೆ ಮತ್ತು ಬ್ಯಾಂಕ್ (Bank) ಖಾತೆ ಸಂಖ್ಯೆಯಲ್ಲಿ ಕೆಲವು ತಪ್ಪುಗಳು ಕಂಡುಬಂದಿದ್ದು,ಅವುಗಳ ಪರಿಶೀಲನೆ ನಡೆಸಲಾಗುತ್ತಿತ್ತು.  ಪರಿಶೀಲನಾ ಪ್ರಕ್ರಿಯೆ ಮುಕ್ತಾಯವಾಗಿದ್ದು, ಶೀಘ್ರದಲ್ಲೇ  ರೈತರ ಖಾತೆಗೆ ಏಳನೇ ಕಂತಿನ ಹಣ ಬಿಡುಗಡೆಯಾಗಲಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿPM Kisan Yojana: ಭೂರಹಿತ ರೈತರಿಗೂ ಸಿಗಲಿದೆ ಈ ಸೌಲಭ್ಯ


ಕೆಲಸಣ್ಣ ತಪ್ಪುಗಳಿಂದ ಹಣ ನಿಮ್ಮ ಖಾತೆ ಸೇರಿರುವುದಿಲ್ಲ:
ಫಾರ್ಮ್ ಅನ್ನು ಭರ್ತಿ ಮಾಡುವಾಗ ಅನೇಕ ಬಾರಿ ತಪ್ಪುಗಳು ಸಂಭವಿಸುತ್ತವೆ. ಇದರಿಂದಾಗಿ ಪಿಎಂ ಕಿಸಾನ್ ಯೋಜನೆಯ (PM Kisaan Scheme) ಹಣ ಬಿಡುಗಡೆಯಾಗಿರುವುದಿಲ್ಲ. ಆದರೆ ಹಣ ಬಿಡುಗಡೆಯಾಗಿಲ್ಲ ಎಂದು ಭಯ ಪಡುವ ಅಗತ್ಯವಿಲ್ಲ. ಪಿಎಂ ಕಿಸಾನ್ ಪೋರ್ಟಲ್‌ಗೆ (PM Kisaan Portal) ಹೋಗಿ  ಏನು ತಪ್ಪಾಗಿದೆ ಎನ್ನುವುದನ್ನು ನೋಡಬಹುದು.
1. ಮೊದಲನೆಯದಾಗಿ, ಪಿಎಂ-ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ.. (https://pmkisan.gov.in/).
2. ಈ ವೆಬ್‌ಸೈಟ್‌ನಲ್ಲಿ, (Website) 'ಫಾರ್ಮರ್ಸ್ ಕಾರ್ನರ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
3. ಈ ವಿಭಾಗಕ್ಕೆ ಹೋದ ನಂತರ, Beneficiary Status ಕ್ಲಿಕ್ ಮಾಡಿ.
4. ಇದರ ನಂತರ, ಈ ಪ್ರದೇಶದಲ್ಲಿನ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮದ ಹೆಸರಿನಂತಹ ಮಾಹಿತಿಯನ್ನು ಭರ್ತಿ ಮಾಡಿ
5. 'ಗೆಟ್ ರಿಪೋರ್ಟ್' ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ, ಸಂಪೂರ್ಣ ಪಟ್ಟಿ ನಿಮ್ಮ ಮುಂದೆ ಕಾಣಿಸುತ್ತದೆ.
6. ಈ ಪಟ್ಟಿಯಲ್ಲಿ, ನಿಮ್ಮ ಕಂತಿನ  Status ನೀವು ನೋಡಬಹುದು.


ಇದನ್ನೂ ಓದಿPM Kisan : ರೈತರಿಗೆ 6,000 ಬದಲಿಗೆ 10,000 ರೂ. ! ಬಜೆಟ್‌ನಲ್ಲಿ ಘೋಷಣೆ ಸಾಧ್ಯತೆ


ತಪ್ಪು ಇದ್ದರೆ ಇಲ್ಲಿ ದೂರು ನೀಡಿ:
ಒಂದು ವೇಳೆ ತಪ್ಪುಕಂಡುಬಂದರೆ,  ಸಹಾಯವಾಣಿ ಸಂಖ್ಯೆ 011-24300606 ಗೆ ಕರೆ ಮಾಡಿ ದೂರು ಸಲ್ಲಿಸಬಹುದು.
ಪಿಎಂ-ಕಿಸಾನ್ ಟೋಲ್ ಫ್ರೀ ಸಂಖ್ಯೆ: 18001155266
ಪಿಎಂ-ಕಿಸಾನ್ ಸಹಾಯವಾಣಿ ಸಂಖ್ಯೆ: 155261,  0120-6025109
ಪಿಎಂ-ಕಿಸಾನ್ ಲ್ಯಾಂಡ್‌ಲೈನ್ ಸಂಖ್ಯೆಗಳು: 011-23381092, 23382401
ಪಿಎಂ-ಕಿಸಾನ್ ಹೊಸ ಸಹಾಯವಾಣಿ: 011-24300606ಗೆ ಕರೆ ಮಾಡಬಹುದು..

 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.