PM Modi In SCO Summit : ಇಂದು ಉಜ್ಬೇಕಿಸ್ತಾನ್‌ನ ಸಮರ್‌ಕಂಡ್‌ನಲ್ಲಿ ನಡೆದ SCO ಶೃಂಗಸಭೆ 2022 ಅನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಈ ವೇಳೆ ಪ್ರಧಾನಿ ಮೋದಿ ಅವರು ಆಹಾರ ಭದ್ರತೆ ವಿಷಯ ಪ್ರಸ್ತಾಪಿಸಿದರು. ಎಸ್‌ಸಿಒ ರಾಷ್ಟ್ರಗಳು ರಾಗಿ ಬೆಳೆಯಬೇಕು ಎಂದು ಪ್ರಧಾನಿ ಮೋದಿ ಭಾಷಣದಲ್ಲಿ ಹೇಳಿದರು. 


COMMERCIAL BREAK
SCROLL TO CONTINUE READING

ಪ್ರಪಂಚದಲ್ಲಿರುವ ಆಹಾರ ಬಿಕ್ಕಟ್ಟನ್ನು ಹೋಗಲಾಡಿಸುವಂತಹ ಸೂಪರ್‌ಫುಡ್ ಇದಾಗಿದೆ. ಕೋವಿಡ್-19 ಮಹಾಮಾರಿಯನ್ನು ಜಗತ್ತು ಜಯಿಸುತ್ತಿದೆ. ಕೋವಿಡ್ ಮತ್ತು ಉಕ್ರೇನ್ ಬಿಕ್ಕಟ್ಟು ಜಾಗತಿಕ ಪೂರೈಕೆ ಸರಪಳಿಯಲ್ಲಿ ಅನೇಕ ಅಡೆತಡೆಗಳನ್ನು ಉಂಟುಮಾಡಿದೆ. ನಾವು ಭಾರತವನ್ನು ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ಬಯಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದರು.


ಇದನ್ನೂ ಓದಿ : 2024 ರ ಲೋಕಸಭೆ ಚುನಾವಣೆಗೆ ಮುನ್ನ ಸಿಎಂ ನಿತೀಶ್ ಕುಮಾರ್ ಭರ್ಜರಿ ಘೋಷಣೆ


'ಭಾರತ ವೈದ್ಯಕೀಯ ಪ್ರವಾಸೋದ್ಯಮದ ಕೇಂದ್ರವಾಗುತ್ತಿದೆ'


ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಶಾಂಘೈ ಸಹಕಾರ ಸಂಸ್ಥೆಯಿಂದ ವಿಶ್ವಾಸದ ವಾತಾವರಣ ನಿರ್ಮಾಣವಾಗಲಿದೆ. ನಾವು ಪರಸ್ಪರ ಸಹಕಾರವನ್ನು ನಿರ್ಮಿಸಲು ಬಯಸುತ್ತೇವೆ. ಭಾರತ ವೈದ್ಯಕೀಯ ಪ್ರವಾಸೋದ್ಯಮದ ಕೇಂದ್ರವಾಗುತ್ತಿದೆ. ಭಾರತವನ್ನು ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ಪ್ರಯತ್ನಗಳು ನಡೆಯುತ್ತಿವೆ. ಕೊರೊನಾದಿಂದಾಗಿ ಪೂರೈಕೆ ಸರಪಳಿ ಮೇಲೆ ಪರಿಣಾಮ ಬೀರಿದೆ. ನಾವು ಆಹಾರ ಭದ್ರತೆಯ ಪರವಾಗಿದ್ದೇವೆ. ಭಾರತದಲ್ಲಿ ತಂತ್ರಜ್ಞಾನಕ್ಕೆ ಸಂಪೂರ್ಣ ಒತ್ತು ನೀಡಲಾಗಿದೆ ಎಂದರು. 


Video : ಈ ಗೋವಾ ಕಾಂಗ್ರೆಸ್ ನಾಯಕ ದೇವರು - ದೇವತೆಗಳನ್ನು ಕೇಳಿ ಬಿಜೆಪಿ ಸೇರಿದ್ದಾನಂತೆ!


'ಸಾಂಪ್ರದಾಯಿಕ ಔಷಧಗಳ ಮೇಲೆ ಭಾರತ ಹೊಸ ಉಪಕ್ರಮ'


ಇನ್ನೂ ಪಿಎಂ ಮೋದಿ ಆರೋಗ್ಯ ಕ್ಷೇತ್ರಗಳ ಬಗ್ಗೆ ಮಾತನಾಡಿ,  2022ರ ಏಪ್ರಿಲ್‌ನಲ್ಲಿ ಡಬ್ಲ್ಯುಎಚ್‌ಒ ತನ್ನ ಗ್ಲೋಬಲ್ ಸೆಂಟರ್ ಫಾರ್ ಟ್ರೆಡಿಷನಲ್ ಮೆಡಿಸಿನ್ ಅನ್ನು ಗುಜರಾತ್‌ನಲ್ಲಿ ಉದ್ಘಾಟಿಸಿದೆ. WHO ನಿಂದ ಸಾಂಪ್ರದಾಯಿಕ ಚಿಕಿತ್ಸೆಗಾಗಿ ಇದು ಮೊದಲ ಮತ್ತು ಏಕೈಕ ಜಾಗತಿಕ ಕೇಂದ್ರವಾಗಿದೆ. ಭಾರತವು ಸಾಂಪ್ರದಾಯಿಕ ಔಷಧಿಗಳ ಮೇಲೆ ಹೊಸ SCO ವರ್ಕಿಂಗ್ ಗ್ರೂಪ್ ಅನ್ನು ಪ್ರಾರಂಭಿಸುತ್ತದೆ ಎಂದು ಹೇಳಿದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.