PM Modi-Sonia Gandhi : ಪಿಎಂ ಮೋದಿ - ಸೋನಿಯಾ ಗಾಂಧಿ ಮುಖಾಮುಖಿ : ಹೀಗಿತ್ತು ಉಭಯ ನಾಯಕರ ಪ್ರತಿಕ್ರಿಯೆ
ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಪುಷ್ಪಾರ್ಚನೆ ಸಮಾರಂಭ ಇದಾಗಿತ್ತು.
Gandhi Jayanti 2022 : ಕಳೆದ ಕೆಲವು ವರ್ಷಗಳಿಂದ ಬಿಜೆಪಿ ಮತ್ತು ಕಾಂಗ್ರೆಸ್ ನಡುವಣ ಸಂಬಂಧ ಹದಗೆಟ್ಟಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಇಡಿ ವಿಚಾರಣೆಯ ವಿಷಯವಾಗಲಿ ಅಥವಾ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಸೋನಿಯಾ ಗಾಂಧಿ ನಡುವಿನ ಘರ್ಷಣೆ, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಉನ್ನತ ನಾಯಕತ್ವದ ನಡುವಿನ ಸಂಬಂಧ ನಿರಂತರವಾಗಿ ಪೈಪೋಟಿ ನಡೆಯುತ್ತಲೆ ಇದೆ. ಇದೇ ವೇಳೆ ಭಾನುವಾರ ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ನಡೆದ ಘಟನೆ ಚರ್ಚೆಗೆ ಗ್ರಾಸವಾಗಿದೆ. ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಪುಷ್ಪಾರ್ಚನೆ ಸಮಾರಂಭ ಇದಾಗಿತ್ತು.
ಸಂಸತ್ತಿನಲ್ಲಿ ಬಾಪು ಅವರಿಗೆ ಶ್ರದ್ಧಾಂಜಲಿ
ಈ ಕಾರ್ಯಕ್ರಮದಲ್ಲಿ ಇದ್ದಕ್ಕಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಮುಖಾಮುಖಿಯಾದರು. ಲೋಕಸಭೆ ಸ್ಪೀಕರ್ ಬಿರ್ಲಾ, ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜನಾಥ್ ಸಿಂಗ್ ಅವರು ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಸೋನಿಯಾ ಗಾಂಧಿ ಅವರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ನಂತರ ಶ್ರದ್ಧಾಂಜಲಿ ಸಲ್ಲಿಸಲು ಮುಂದಾದರು. ಬಾಪು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ನಂತರ ಸೋನಿಯಾ ಗಾಂಧಿ ಮುಂದೆ ಸಾಗಿದ ತಕ್ಷಣ, ಅವರು ಲೋಕಸಭೆಯ ಸ್ಪೀಕರ್ ಪಕ್ಕದಲ್ಲಿ ನಿಂತಿದ್ದ ಪ್ರಧಾನಿ ಮೋದಿಯವರಿಗೆ ಮುಖಾಮುಖಿಯಾದರು.
ಇದನ್ನೂ ಓದಿ : 'ನಾನು ಬರಿ ದಲಿತ ನಾಯಕನಾಗಿ ಸ್ಪರ್ಧಿಸುತ್ತಿಲ್ಲ, ಕಾಂಗ್ರೆಸ್ ನಾಯಕನಾಗಿ ಸ್ಪರ್ಧಿಸುತ್ತಿದ್ದೇನೆ'
ಶುಭಾಶಯ ಕೋರಿದ್ದಾರೆ ಪ್ರಧಾನಿ ಮೋದಿ
ಉಪಕ್ರಮವನ್ನು ತೆಗೆದುಕೊಂಡ ಪ್ರಧಾನಿ ಸೋನಿಯಾ ಗಾಂಧಿಯವರಿಗೆ ನಮಸ್ತೆ ಹೇಳುವ ಮೂಲಕ ಶುಭಾಶಯ ಕೋರಿದರು ಮತ್ತು ಅದಕ್ಕೆ ಪ್ರತಿಯಾಗಿ ಸೋನಿಯಾ ಗಾಂಧಿ ಕೂಡ ಕೈ ಜೋಡಿಸಿ ಸ್ವಾಗತಿಸಿದರು. ಆದರೆ, ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ನಡೆಯುತ್ತಿರುವ ಜಟಾಪಟಿ ಮುಖದಲ್ಲಿ ಕಾಣುತ್ತಿತ್ತು. ಇದಾದ ಬಳಿಕ ಹಲವು ಗ್ರೂಪ್ ಫೋಟೊಗಳನ್ನು ತೆಗೆಯಲಾಗಿದ್ದು, ಅದರಲ್ಲಿ ಇಬ್ಬರೂ ನಾಯಕರು ನಿಂತಿದ್ದು, ಅವರ ನಡುವೆ ಯಾವುದೇ ಕಣ್ಣಿನ ಸಂಪರ್ಕವಾಗಲೀ ಅಥವಾ ಯಾವುದೇ ಸಂಭಾಷಣೆಯಾಗಲೀ ಇರಲಿಲ್ಲ. ನಂತರ ಪೀಠದಲ್ಲಿ ಕುಳಿತಾಗ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಸೋನಿಯಾ ಗಾಂಧಿ ಪರಸ್ಪರ ಕೈ ಜೋಡಿಸಿ ಶುಭಾಶಯ ಕೋರಿದರು.
ಇದಕ್ಕೂ ಮುನ್ನ ಭಾನುವಾರ ಪ್ರಧಾನಿ ಮೋದಿ ಅವರು ರಾಜ್‌ಘಾಟ್‌ನಲ್ಲಿರುವ ಬಾಪು ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸರ್ವಧರ್ಮ ಪ್ರಾರ್ಥನಾ ಸಭೆಯನ್ನು ಅಲ್ಲಿ ಆಯೋಜಿಸಲಾಗಿತ್ತು. ಬಾಪು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ ಟ್ವೀಟ್‌ನಲ್ಲಿ, 'ಗಾಂಧಿ ಜಯಂತಿಯಂದು ಮಹಾತ್ಮ ಗಾಂಧಿ ಅವರಿಗೆ ನಮನಗಳು. ಭಾರತವು ಸ್ವಾತಂತ್ರ್ಯದ ಅಮೃತ ಹಬ್ಬವನ್ನು ಆಚರಿಸುತ್ತಿರುವ ಕಾರಣ ಈ ಬಾರಿಯ ಗಾಂಧಿ ಜಯಂತಿ ಬಹಳ ವಿಶೇಷವಾಗಿದೆ. ನಾವು ಯಾವಾಗಲೂ ಬಾಪು ಅವರ ಆದರ್ಶಗಳನ್ನು ಪಾಲಿಸಬೇಕೆಂದು ನಾನು ಬಯಸುತ್ತೇನೆ.' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ಮುಲಾಯಂ ಸಿಂಗ್ ಆರೋಗ್ಯ ಸ್ಥಿತಿ ಗಂಭೀರ, ಐಸಿಯುಗೆ ಸ್ಥಳಾಂತರ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.