ರಾತ್ರಿಯಿಡೀ ಧ್ಯಾನದ ಬಳಿಕ ಕೇದಾರನಾಥ ಗುಹೆಯಿಂದ ಹೊರಬಂದ ಪ್ರಧಾನಿ ಮೋದಿ
ಕೇದಾರನಾಥ ದೇವಸ್ಥಾನದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ಮಂದಾಕಿನಿ ನದಿಯ ಮತ್ತೊಂದು ಭಾಗದಲ್ಲಿ ಈ ಗುಹೆ ಇದೆ.
ನವದೆಹಲಿ: ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಬ್ಯುಸಿ ಆಗಿದ್ದ ಆಗಿದ್ದ ಪ್ರಧಾನಿ ಮೋದಿ ಇದೀಗ ಕೇದಾರನಾಥ, ಬದರಿನಾಥ ದೇವಾಲಯಗಳ ಪ್ರವಾಸದಲ್ಲಿದ್ದಾರೆ. ಶನಿವಾರ ಕೇದಾರನಾಥ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದ ಮೋದಿ, ಬಳಿಕ ಅಲ್ಲಿನ ಗರುಡ್ ಚಟ್ಟಿ ಪ್ರದೇಶದಲ್ಲಿರುವ ಗುಹೆಯಲ್ಲಿ ಕುಳಿತು ರಾತ್ರಿಯಿಡೀ ಧ್ಯಾನ ಸಾಧನೆ ಮಾಡಿ, ಇಂದು ಬೆಳಿಗ್ಗೆ ಗುಹೆಯಿಂದ ಹೊರಬಂದಿದ್ದಾರೆ.
ಕೇದಾರನಾಥ ದೇವಸ್ಥಾನದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ಮಂದಾಕಿನಿ ನದಿಯ ಮತ್ತೊಂದು ಭಾಗದಲ್ಲಿ ಈ ಗುಹೆ ಇದೆ. ಬೆಟ್ಟದ ಮೇಲಿರುವ ಈ ಗುಹೆಯಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಲಭ್ಯವನ್ನೂ ಒದಗಿಸಲಾಗಿದೆ.
ಶನಿವಾರ ಕೇದಾರನಾಥ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಅಲ್ಲಿನ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನೂ ಮೋದಿ ನಡೆಸಿದ್ದರು. ಬಳಿಕ ದೇವಾಲಯದಿಂದ 1.5 ಕಿ.ಮೀ ದೂರವಿರುವ ಗುಹೆಗೆ ಮಳೆಯನ್ನೂ ಲೆಕ್ಕಿಸದೇ ತೆರಳಿ, ಧ್ಯಾನ ಮಗ್ನರಾದರು. ಪ್ರಧಾನಿ ನರೇಂದ್ರ ಮೋದಿ ಗುಹೆಯಲ್ಲಿ ಧ್ಯಾನ ಮಗ್ನರಾಗಿರುವ ವೀಡಿಯೋ ಸಖತ್ ವೈರಲ್ ಆಗಿದೆ.