ಜಮ್ಮು-ಕಾಶ್ಮೀರ ಉಗ್ರರ ದಾಳಿ; ಹುತಾತ್ಮರ ತ್ಯಾಗ ವ್ಯರ್ಥವಾಗುವಂತಿಲ್ಲ -ಪ್ರಧಾನಿ ಮೋದಿ
ಉಗ್ರರು ಐಇಡಿ ಬಳಸಿ 26 ಸಿಆರ್ಪಿಎಫ್ ಸೈನಿಕರನ್ನು ಅವಂತಿಪುರಾದಲ್ಲಿ ಹತ್ಯೆ ಮಾಡಿದ್ದಾರೆ. ಈ ಉಗ್ರ ಕೃತ್ಯವನ್ನು ಖಂಡಿಸಿರುವ ಪ್ರಧಾನಿ ಮೋದಿ ಉಗ್ರರ ದಾಳಿಯಲ್ಲಿ ಬಲಿಯಾದವರ ಸೈನಿಕರ ತ್ಯಾಗ ವ್ಯರ್ಥವಾಗುವಂತಿಲ್ಲ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ನವದೆಹಲಿ: ಉಗ್ರರು ಐಇಡಿ ಬಳಸಿ 26 ಸಿಆರ್ಪಿಎಫ್ ಸೈನಿಕರನ್ನು ಅವಂತಿಪುರಾದಲ್ಲಿ ಹತ್ಯೆ ಮಾಡಿದ್ದಾರೆ. ಈ ಉಗ್ರ ಕೃತ್ಯವನ್ನು ಖಂಡಿಸಿರುವ ಪ್ರಧಾನಿ ಮೋದಿ ಉಗ್ರರ ದಾಳಿಯಲ್ಲಿ ಬಲಿಯಾದವರ ಸೈನಿಕರ ತ್ಯಾಗ ವ್ಯರ್ಥವಾಗುವಂತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
"ಪುಲವಾಮಾದಲ್ಲಿ ಸಿಆರ್ಪಿಎಫ್ ಸೈನಿಕರ ದಾಳಿ ನಿಜಕ್ಕೂ ಹೇಯ ಕೃತ್ಯವಾಗಿದೆ.ಈ ಕ್ರೂರ ದಾಳಿಯನ್ನು ನಾನು ಖಂಡಿಸುತ್ತೇನೆ. ನಮ್ಮ ಭದ್ರತಾ ಪಡೆಗಳ ತ್ಯಾಗ ವ್ಯರ್ಥವಾಗುವಂತಿಲ್ಲ.ಈ ಘಟನೆಯಲ್ಲಿ ಹುತಾತ್ಮರಾಗಿರುವ ಎಲ್ಲ ಸೈನಿಕರ ಕುಟುಂಬಗಳಿಗೆ ಇಡೀ ದೇಶವು ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲಿದೆ.ಗಾಯಗೊಂಡಿರುವ ಬೇಗನೆ ಚೇತರಿಸಿಕೊಳ್ಳಲಿ "ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿ ಖಂಡಿಸಿದ್ದಾರೆ.
ಉಗ್ರರು ರಸ್ತೆಯಲ್ಲಿ ಕಾರ್ ವೊಂದಕ್ಕೆ ಐಇಡಿಯನ್ನು ಅಳವಡಿಸಿದ್ದರು ಎನ್ನಲಾಗಿದೆ.ಯಾವಾಗ 20ಕ್ಕೂ ಸೈನಿಕರನ್ನು ಒಳಗೊಂಡ ವಾಹನವು ಆ ಕಾರ್ ಹತ್ತಿರ ಬಂದಿದೆಯೋ ಆಗ ಉಗ್ರರು ಅದನ್ನು ಸ್ಪೋಟಗೊಳಿಸಿದ್ದಾರೆ.ಅನಂತರ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.ಈ ಘಟನೆ ನಡೆದ ತಕ್ಷಣ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರು ಆಗಮಿಸಿ ತನಿಖೆ ಮುಂದುವರೆಸಿದ್ದಾರೆ.