ರಾಜ್ಯಸಭೆಯಲ್ಲಿ ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಜಾದ್ ಹೊಗಳುತ್ತಾ ಭಾವುಕರಾದ PM Modi
ರಾಜ್ಯಸಭೆಯಲ್ಲಿ 4 ಸಂಸದರಿಗೆ ವಿದಾಯ ಹೇಳುತ್ತಾ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಜಾದ್ ಅವರನ್ನು ಹೊಗಳುತ್ತಾ ಭಾವುಕರಾದರು.
ನವದೆಹಲಿ: ರಾಜ್ಯಸಭೆಯಲ್ಲಿ ಕಾಂಗ್ರೆಸ್ ಹಿರಿಯ ಮತ್ತು ಪ್ರತಿಪಕ್ಷದ ನಾಯಕ ಗುಲಾಮ್ ನಬಿ ಆಜಾದ್ ಅವರಿಗೆ ವಿದಾಯ ಹೇಳುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಭಾವುಕರಾದರು. ರಾಜ್ಯಸಭೆಯಲ್ಲಿ ಗುಲಾಮ್ ನಬಿ ಆಜಾದ್, ಶಂಶರ್ ಸಿಂಗ್, ಮಿರ್ ಮೊಹಮ್ಮದ್ ಫಯಾಜ್ ಮತ್ತು ನಾದಿರ್ ಅಹ್ಮದ್ ಅವರ ಅಧಿಕಾರಾವಧಿ ಪೂರ್ಣಗೊಳ್ಳುತ್ತಿದೆ. ರಾಜ್ಯಸಭೆಯಲ್ಲಿಂದು ಈ ನಾಲ್ವರು ಸಂಸದರಿಗೆ ವಿದಾಯ ಹೇಳುತ್ತಾ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಕಾಂಗ್ರೆಸ್ ಸಂಸದ ಗುಲಾಮ್ ನಬಿ ಆಜಾದ್ (Ghulam Nabi Azad) ಅವರನ್ನು ಹಾಡಿ ಹೊಗಳಿದರು.
ಗುಲಾಮ್ ನಬಿ ಆಜಾದ್ ಅವರನ್ನು ಹೊಗಳಿದ ಪಿಎಂ ಮೋದಿ :
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಜ್ಯಸಭೆಯಲ್ಲಿ, 'ಗುಲಾಮ್ ನಬಿ ಅಜಾದ್ ಜಿ ನಂತರ, ಈ ಹುದ್ದೆಯನ್ನು ಯಾರು ವಹಿಸಿಕೊಂಡರೂ, ಗುಲಾಮ್ ನಬಿ ಜಿ ಅವರನ್ನು ಹೊಂದಿಸಲು ಸಾಕಷ್ಟು ತೊಂದರೆ ಉಂಟಾಗುತ್ತದೆ ಎಂದು ನಾನು ಕಳವಳ ವ್ಯಕ್ತಪಡಿಸುತ್ತೇನೆ. ಗುಲಾಂ ನಬಿ ಆಜಾದ್ ಅವರನ್ನು ನಿಜವಾದ ಸ್ನೇಹಿತ ಎಂದು ಪರಿಗಣಿಸಿದ್ದೇನೆ ಎಂದ ಪ್ರಧಾನಿ ಮೋದಿ, "ಪ್ರತಿಪಕ್ಷದ ನಾಯಕನಾಗಿ ಆಯ್ಕೆಯಾಗುವ ವ್ಯಕ್ತಿಗೆ ಇರುವ ಕಠಿಣ ಸವಾಲೆಂದರೆ ಗುಲಾಮ್ ನಬಿ ಜಿ ಅವರನ್ನು ಹೊಂದಿಸುವುದು. ಏಕೆಂದರೆ ಅವರು ತಮ್ಮ ಪಕ್ಷದ ಬಗ್ಗೆ ಮಾತ್ರವಲ್ಲದೆ ದೇಶ ಮತ್ತು ಸದನದ ಬಗ್ಗೆಯೂ ಕಾಳಜಿ ವಹಿಸುತ್ತಿದ್ದರು" ಎಂದು ಅವರು ಎಂದು ತಿಳಿಸಿದರು.
ನಾನು ಗುಲಾಮ್ ನಬಿ ಜಿ ಅವರನ್ನು ಗೌರವಿಸುತ್ತೇನೆ: ಪಿಎಂ ಮೋದಿ
ಪಿಎಂ ನರೇಂದ್ರ ಮೋದಿ ಗುಲಾಮ್ ನಬಿ ಆಜಾದ್ ಅವರನ್ನು ಶ್ಲಾಘಿಸುತ್ತಾ, 'ನನ್ನ ಅನುಭವಗಳ ಆಧಾರದ ಮೇಲೆ ನಾನು ಗುಲಾಮ್ ನಬಿ ಆಜಾದ್ (Ghulam Nabi Azad) ಜಿ ಅವರನ್ನು ಗೌರವಿಸುತ್ತೇನೆ. ಅವರ ದಯೆ, ಶಾಂತಿ ಮತ್ತು ರಾಷ್ಟ್ರಕ್ಕಾಗಿ ಕೆಲಸ ಮಾಡುವ ಅಭಿಯಾನ ಯಾವಾಗಲೂ ಮುಂದುವರಿಯುತ್ತದೆ ಎಂದು ನನಗೆ ಖಾತ್ರಿಯಿದೆ. ಅವರು ಯಾವಾಗಲೂ ಏನು ಮಾಡಿದರೂ, ಅದನ್ನು ಅವರು ತಮ್ಮ ಮೌಲ್ಯಗಳಿಗೆ ಸೇರಿಸಿಕೊಳ್ಳುತ್ತಾರೆ ಎಂದರು.
ಇದನ್ನೂ ಓದಿ - Labor Ministry: ಕಾರ್ಮಿಕರಿಗೆ ವಾರಕ್ಕೆ 4 ದಿನ ಕೆಲಸ, 3 ದಿನ ರಜೆ ಪದ್ಧತಿಗೆ ಸರ್ಕಾರ ಸಮ್ಮತಿ!
ಹಳೆಯ ಕಥೆಯನ್ನು ನೆನಪಿಸಿದ ಪಿಎಂ ಮೋದಿ :
ಪ್ರಧಾನಿ ಮೋದಿ (PM Modi) ತಮ್ಮ ಭಾಷಣದಲ್ಲಿ ಹಳೆಯ ಸಂಗತಿಗಳನ್ನು ಮೆಲುಕು ಹಾಕುತ್ತಾ, ಗುಜರಾತ್ ಮತ್ತು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಗಳಾಗಿದ್ದಾಗ ಒಂದು ಪ್ರಸಂಗವನ್ನು ನೆನಪಿಸಿಕೊಳ್ಳುತ್ತಿದ್ದಂತೆ ಕಣ್ಣೀರು ಹಾಕಿದರು. 'ಗುಲಾಮ್ ನಬಿ ಜಿ ಅವರು ಮುಖ್ಯಮಂತ್ರಿಯಾಗಿದ್ದಾಗ ನಾನೂ ಕೂಡ ಒಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದೆ. ನಾವು ತುಂಬಾ ಹತ್ತಿರದಲ್ಲಿದ್ದೆವು. ಒಮ್ಮೆ ಗುಜರಾತ್‌ನ ಕೆಲವು ಪ್ರಯಾಣಿಕರ ಮೇಲೆ ಭಯೋತ್ಪಾದಕರು ಹಲ್ಲೆ ನಡೆಸಿದರು, ಅದರಲ್ಲಿ 8 ಜನರು ಸಾವನ್ನಪ್ಪಿದರು. ಮೊದಲನೆಯದಾಗಿ, ನನಗೆ ಗುಲಾಮ್ ನಬಿ ಜಿ ಅವರಿಂದ ಕರೆ ಬಂತು ಮತ್ತು ಅವರ ಕಣ್ಣೀರು ನಿಲ್ಲುತ್ತಿರಲಿಲ್ಲ ಎಂದು ವಿವರಿಸುತ್ತಾ ಗುಲಾಬ್ ನಬಿ ಆಜಾದ್ ಅವರ ಸ್ವಭಾವದ ಬಗ್ಗೆ ಬೆಳಕು ಚೆಲ್ಲಿದರು.
Sasikala: ತಮಿಳುನಾಡಿಗೆ ಎಂಟ್ರಿಕೊಟ್ಟ ಚಿನ್ನಮ್ಮ: 'ನಾನು ಎಂದಿಗೂ ಗುಲಾಮಳಾಗುವುದಿಲ್ಲ'
ಅಧಿಕಾರ ಬರುತ್ತದೆ, ಹೋಗುತ್ತದೆ. ಆದರೆ ಅದನ್ನು ಹೇಗೆ ನಿಭಾಯಿಸಬೇಕು... ಎನ್ನುತ್ತಾ ತಮ್ಮ ಮಾತನ್ನು ನಿಲ್ಲಿಸಿದ ಪ್ರಧಾನಿ ಮೋದಿ ಗುಲಾಮ್ ನಬಿ ಆಜಾದ್ ಅವರಿಗೆ ಧನ್ಯವಾದ ತಿಳಿಸಿದರು.
ನಾಲ್ಕು ಸಂಸದರಿಗೆ ಧನ್ಯವಾದಗಳು :
'ಗುಲಾಮ್ ನಬಿ ಆಜಾದ್ ಜಿ, ಶಂಶರ್ ಸಿಂಗ್ ಜಿ, ಮಿರ್ ಮೊಹಮ್ಮದ್ ಫಯಾಜ್ ಜಿ ಮತ್ತು ನಾದಿರ್ ಅಹ್ಮದ್ ಜಿ. ಈ ಸದನದ ವೈಭವ, ನಿಮ್ಮ ಅನುಭವ, ಸದನ ಮತ್ತು ದೇಶಕ್ಕೆ ಪ್ರಯೋಜನಕಾರಿಯಾಗಲು ನಿಮ್ಮ ಜ್ಞಾನ ಮತ್ತು ಪ್ರದೇಶದ ಸಮಸ್ಯೆಗಳಿಗೆ ನಿಮ್ಮ ಪರಿಹಾರಕ್ಕಾಗಿ ನಿಮ್ಮ ನಾಲ್ವರಿಗೂ ಧನ್ಯವಾದಗಳು ಎಂದು ಪ್ರಧಾನಿ ನರೇಂದ್ರ ಮೋದಿ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.