ಭೋಪಾಲ್: ಪ್ರಧಾನಿ ನರೇಂದ್ರ ಮೋದಿ(Narendra Modi)ಅವರು ರಾಮ ಮತ್ತು ಕೃಷ್ಣರಂತೆ ದೇವರ ಅವತಾರವೆಂದು ಮಧ್ಯ ಪ್ರದೇಶ(Madhya Pradesh)ದ ಕೃಷಿ ಸಚಿವ, ಬಿಜೆಪಿ ನಾಯಕ ಕಮಲ್ ಪಟೇಲ್(Kamal Patel) ಹೇಳಿದ್ದಾರೆ. ಸೋಮವಾರ ಹರ್ದಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸೃಷ್ಟಿಸಿರುವ ಭ್ರಷ್ಟಾಚಾರ ಮತ್ತು ಅನಾಚಾರಗಳನ್ನು ತೊಲಗಿಸಲು ಪ್ರಧಾನಿ ಮೋದಿ ಅವರೇ ದೇವರ ಅವತಾರವೆತ್ತಿ ಬಂದಿದ್ದಾರೆ ಅಂತಾ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಕಾಂಗ್ರೆಸ್(Congress)ನ ದುಷ್ಕೃತ್ಯಗಳು, ಭ್ರಷ್ಟಾಚಾರ ಮತ್ತು ದೇಶದ ಸಂಸ್ಕೃತಿಯ ನಾಶದಿಂದ ಉಂಟಾದ ಹತಾಶೆಯ ವಾತಾವರಣವನ್ನು ಭಗವಾನ್ ರಾಮನು ಕೊನೆಗೊಳಿಸಬೇಕಾಗಿದೆ. ರಾಮ ಮತ್ತು ಕೃಷ್ಣನಂತೆ ಪ್ರಧಾನಿ ಮೋದಿ ಅವರು' ದೇವರ ಅವತಾರ(Incarnation Of God)ದಲ್ಲಿ ಜನ್ಮತಾಳಿದ್ದಾರೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತ ವಿಶ್ವಗುರುವಾಗುತ್ತಿದೆ. ಭ್ರಷ್ಟಾಚಾರ ಕೊನೆಯಾಗುತ್ತಿದೆ. ಇಷ್ಟೊಂದು ಜನರ ಕಲ್ಯಾಣ ಓರ್ವ ಜನಸಾಮಾನ್ಯನಿಂದ ಸಾಧ್ಯವಿಲ್ಲವೆಂದು ಹೇಳಿದ್ದಾರೆ.


ಇದನ್ನೂ ಓದಿ: ಹಾರುವ ಜಿಂಕೆಯನ್ನು ನೋಡಿದ್ದಿರಾ ? ನಂಬಲಸಾಧ್ಯವಾದ ವಿಡಿಯೋ ಇಲ್ಲಿದೆ ನೋಡಿ


ಭರತ ಭೂಮಿಯ ಮೇಲೆ ಅನ್ಯಾಯ ಉಂಟಾದಾಗ ಮತ್ತು ದೌರ್ಜನ್ಯಗಳು ಹೆಚ್ಚಾದಾಗ ದೇವರು ಮಾನವನ ರೂಪದಲ್ಲಿ ಅವತರಿಸುತ್ತಾನೆ ಎಂದು ನಮ್ಮ ಧರ್ಮ ಮತ್ತು ಸಂಸ್ಕೃತಿಯಲ್ಲಿ ಹೇಳಲಾಗಿದೆ. ಶ್ರೀರಾಮನು ಮಾನವನಾಗಿ ಅವತರಿಸಿ ರಾಕ್ಷಸ ರಾವಣನನ್ನು ಸಂಹರಿಸಿ ಇತರ ದುಷ್ಟ ಶಕ್ತಿಗಳನ್ನು ಸೋಲಿಸಿ ಜನರನ್ನು ರಕ್ಷಿಸುವ ಮೂಲಕ ರಾಮರಾಜ್ಯವನ್ನು ಸ್ಥಾಪಿಸಿದ್ದ. ಕಂಸನ ದೌರ್ಜನ್ಯಗಳು ಹೆಚ್ಚಾದಾಗ ಶ್ರೀಕೃಷ್ಣನು ಜನ್ಮ ತಳೆದು ಅವನ ಕ್ರೌರ್ಯವನ್ನು ಕೊನೆಗೊಳಿಸಿದ್ದನು. ಅದೇ ಮಾದರಿಯಲ್ಲಿ ಈಗ ಪ್ರಧಾನಿ  ಮೋದಿ ಜನ್ಮತಾಳಿದ್ದು(Ram & Krishna), ದೇಶದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅನಾಚಾರವನ್ನು ಕೊನೆಗೊಳಿಸಲಿದ್ದಾರೆ ಎಂದು ಬಿಜೆಪಿ ಸಚಿವ ಪಟೇಲ್ ಹೇಳಿದ್ದಾರೆ.


ಅದೇ ರೀತಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್(Shivraj Singh Chouhan)ರನ್ನು ಹೊಗಳಿರುವ ಪಟೇಲ್, ಕಳೆದ ನವೆಂಬರ್‌ನಲ್ಲಿ ಬುಡಕಟ್ಟು ಐಕಾನ್ ತಾಂತ್ಯ ಭಿಲ್ ಅವರ ಅವತಾರ ಎಂದು ಬಣ್ಣಿಸಿದ್ದರು. ಶಿವರಾಜ್ ಸಿಂಗ್ ಚೌಹ್ವಾಣ್ ಅವರು ಭಾರತೀಯ ‘ರಾಬಿನ್ ಹುಡ್’ ಎಂದು ಪಟೇಲ್ ಹೇಳಿದ್ದರು.


ಇದನ್ನೂ ಓದಿ: Vaccination: 12 ರಿಂದ 14 ವರ್ಷದ ಮಕ್ಕಳಿಗೆ ಯಾವಾಗ ಸಿಗಲಿದೆ ಲಸಿಕೆ? ಸರ್ಕಾರದ ನಿರ್ಧಾರ ಏನು ಗೊತ್ತಾ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.