ಮುಂಬೈ: ಬುಧವಾರದಂದು ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಅನಕ್ಷರಸ್ಥ ಮತ್ತು ಅನಾಗರಿಕ ವ್ಯಕ್ತಿಯಾಗಿರುವ ಮೋದಿ ಅವರಿಂದ ಕಲಿಯುವುದೇನಿದೆ? ಎಂದು ಪ್ರಶ್ನಿಸಿ ಸುದ್ದಿಯಾಗಿದ್ದ ಸಂಜಯ ನಿರುಪಮ್ ತಮ್ಮ ಹೇಳಿಕೆಯನ್ನು ಈಗ ಮತ್ತೆ ಸಮರ್ಥಿಸಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಾ ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ನಿರುಪಮ್ "ಇದು ಪ್ರಜಾಪ್ರಭುತ್ವ,ಪ್ರಧಾನ ಮಂತ್ರಿಯೇನು ದೇವರಲ್ಲ. ಜನರು ಅವರ ಸಭ್ಯತೆ ವಿಚಾರವಾಗಿ ಮಾತನಾಡುತ್ತಾರೆ.ನಾನು ಬಳಸಿದ ಪದ ಅಗೌರವ ಸೂಚಿಸುವಂತದಲ್ಲ" ಎಂದು ತಿಳಿಸಿದರು.


ದೇಶಾದ್ಯಂತ ಪ್ರಧಾನಿ ಮೋದಿ ಕುರಿತಾಗಿ ಶಾಲೆಗಳಲ್ಲಿ ಚಿತ್ರ ಪ್ರದರ್ಶನದ ಕುರಿತಾಗಿ ಈಗ ಆಕ್ಷೇಪ ವ್ಯಕ್ತಪಡಿಸಿದ್ದ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ "ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಅನಕ್ಷರಸ್ಥ ಮತ್ತು ಅನಾಗರಿಕ ವ್ಯಕ್ತಿಯಾಗಿರುವ ಮೋದಿ ಅವರಿಂದ ಕಲಿಯುವುದೇನಿದೆ? ಎಂದು ಪ್ರಶ್ನಿಸಿದ್ದರು.ಅಲ್ಲದೆ ಇನ್ನು ಮುಂದುವರೆದು ನಮ್ಮ ಮಕ್ಕಳು ಅಂತಹ ಚಲನಚಿತ್ರಗಳನ್ನು ನೋಡಬಾರದು ಏಕೆಂದರೆ ಅವರಿಗೆ ಪ್ರಧಾನಿ ಮೋದಿಯವರ ಶಿಕ್ಷಣದ ಬಗ್ಗೆ ತಿಳಿದಿಲ್ಲ ಹೇಳಿದ್ದರು.