ನವದೆಹಲಿ: ತೆಲಂಗಾಣದ ಶಂಶಾಬಾದ್ ನಲ್ಲಿ ನಟಿ ಹಾಗೂ ರಾಜಕಾರಣಿ ವಿಜಯ್ ಶಾಂತಿ ಪ್ರಧಾನಿ ಮೋದಿ ಭಯೋತ್ಪಾದಕರ ಹಾಗೆ ಕಾಣುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಕಾಂಗ್ರೆಸ್ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ವಿಜಯ್ ಶಾಂತಿ " ಜನರಿಗೆ ನಿಜಕ್ಕೂ ಭಯವಾಗಿದೆ. ಮೋದಿ ಯಾವಾಗ ಬಾಂಬ್ ಎಸೆಯುತ್ತಾರೋ ಏನು ಅವರು ಭಯೋತ್ಪಾದಕರ ಹಾಗೆ ಕಾಣುತ್ತಾರೆ.ಜನರನ್ನು ಪ್ರೀತಿಸುವ ಬದಲು ಅವರು ಹೆದರಿಸುತ್ತಿದ್ದಾರೆ ಎಂದು ತೆಲುಗು ಭಾಷೆಯಲ್ಲಿ ಮಾತನಾಡುತ್ತಾ ಹೇಳಿದ್ದಾರೆ.



ಇದೇ ರ್ಯಾಲಿಯಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ ಮಾತನಾಡಿ ಪ್ರಧಾನಿ ಮೋದಿ ಕಳೆದ 5 ವರ್ಷಗಳಲ್ಲಿ ಎರಡು ಭಾರತವನ್ನು ಸೃಷ್ಟಿಸಿದ್ದಾರೆ ಎಂದು ಕಿಡಿಕಾರಿದರು.ಕಳೆದ 5 ವರ್ಷದಲ್ಲಿ ಮೋದಿ ಎರಡು ರೀತಿಯ ಭಾರತವನ್ನು ಸೃಷ್ಟಿಸಿದ್ದಾರೆ.ಅದರಲ್ಲಿ ಮೊದಲನೇ ದಾಗಿ ಅನಿಲ್ ಅಂಬಾನಿ ಅವರು ಖಾಸಗಿ ವಿಮಾನದಲ್ಲಿ ಪ್ರಯಾಣ ಬೆಳೆಸುತ್ತಾ  ಅವರು ತಮಗೆ ಬೇಕಾಗದ್ದರಲ್ಲಿ ಯಶಸ್ಸು ಸಾಧಿಸುತ್ತಿದ್ದಾರೆ. ಇನ್ನೊಂದೆಡೆಗೆ ರೈತರು ತಮ್ಮ ಎರಡು ಕೈ ಮುಗಿದು ಅರುಣ್ ಜೈಟ್ಲಿ ಅವರನ್ನು ಸಾಲಮನ್ನಾ ಮಾಡಿ ಎಂದು ಕೈ ಮುಗಿದು ಕೇಳಿಕೊಳ್ಳುತ್ತಿದ್ದಾರೆ.ಆದರೆ ಸಾಲಮನ್ನಾ ವಿಚಾರವಾಗಿ ಯಾವುದೇ ಯೋಜನೆ ಇಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.