ನವದೆಹಲಿ: ಶನಿವಾರದಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಸಮಾರೋಪ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ನರೇಂದ್ರ ಮೋದಿ "ಇದು ಅಟಲ್ ಜಿ ಇಲ್ಲದ ಮೊದಲ ರಾಷ್ಟ್ರೀಯ ಸಮಾವೇಶವಾಗಿದೆ" ಎಂದರು.


COMMERCIAL BREAK
SCROLL TO CONTINUE READING

ಇದೇ ಸಂದರ್ಭದಲ್ಲಿ ಸರ್ಕಾರದ ಶೇ 10ರಷ್ಟು ಮೀಸಲಾತಿಯನ್ನು ಮೆಲ್ವರ್ಗದಲ್ಲಿನ ಬಡವರಿಗೆ ನೀಡಿರುವ ಕುರಿತಾಗಿ ಸಮರ್ಥಿಸಿಕೊಂಡು ಮಾತನಾಡಿದ ಪ್ರಧಾನಿ ಮೋದಿ ಈ ಮಸೂದೆ ಸಮಾನತೆಯನ್ನು ತರಲು ಸಹಾಯಕವಾಗುತ್ತದೆ ಎಂದರು.


ಕಾಂಗ್ರೆಸ್ ಪಕ್ಷದ ವಿರುದ್ದ ವಾಗ್ದಾಳಿ ನಡೆಸಿದ ಮೋದಿ " ನಮಗಿಂತ ಮುಂಚೆಯಿದ್ದ ಸರ್ಕಾರ ದೇಶವನ್ನು ಕತ್ತಲೆಗೆ ತಳ್ಳಿತು. ಭಾರತ ಭ್ರಷ್ಟಾಚಾರ ಮತ್ತು ಹಗರಣಗಳ ಮೂಲಕ ತನ್ನ ಹತ್ತು ವರ್ಷಗಳನ್ನು ಹಿಂದಕ್ಕೆ ತಳ್ಳಿತು ಎಂದು ನಾನು ಹೇಳಿದರೆ ಅದು ತಪ್ಪಾಗಲಾರದು "ಎಂದರು. ಮುಂಬರುವ ಲೋಕಸಭಾ ಚುನಾವಣೆಯ ನಿಮಿತ್ತ ಪಕ್ಷದ ಕಾರ್ಯಕರ್ತರಿಗೆ ಮಾರ್ಗಸೂಚಿಗಳನ್ನು ನೀಡುವ ನಿಟ್ಟಿನಲ್ಲಿ ಕರೆದಿದ್ದ ಕಾರ್ಯಕಾರಣಿ ಸಭೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಪ್ರಧಾನಿ ಮೋದಿ  ಮಾತನಾಡಿದರು.    


ಇದಕ್ಕೂ ಮುಂಚೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಬಿಜೆಪಿ ರಾಷ್ಟ್ರೀಯ ಅಧಿವೇಶನದಲ್ಲಿ ಮಾತನಾಡುತ್ತಾ, "2014 ರ ಬಳಿಕ ನಾವು ಈ ದೇಶದಲ್ಲಿ ಯಾವುದೇ ಭಯೋತ್ಪಾದಕ ದಾಳಿಯನ್ನು ಕಂಡಿಲ್ಲ ಎಂದರು. ಹಿರಿಯ ಬಿಜೆಪಿ ನಾಯಕರನ್ನು ಹೊರತುಪಡಿಸಿ ರಾಷ್ಟ್ರೀಯ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರು, ರಾಷ್ಟ್ರೀಯ ಮಂಡಳಿ ಸದಸ್ಯರು, ಎಲ್ಲಾ ಸಂಸದರು, ಎಂಎಲ್ಎಗಳು, ಎಮ್ಎಲ್ಸಿಗಳು, ಇತರ ಮೋರ್ಚಾಗಳ ರಾಷ್ಟ್ರೀಯ ಅಧಿಕಾರಿಗಳು ಭಾಗವಹಿಸಿದ್ದಾರೆ.