ನವದೆಹಲಿ: ಓಣಂ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು  ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಾಜನಾಥ್ ಸಿಂಗ್ ಅವರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, "ಓಣಂ ಶುಭ ಸಂದರ್ಭದಲ್ಲಿ ಶುಭಾಶಯಗಳು! ಈ ಹಬ್ಬವು ನಮ್ಮ ಸಮಾಜದಲ್ಲಿ ಸಂತೋಷ, ಆರೋಗ್ಯ ಮತ್ತು ಸಮೃದ್ಧಿಯ ಉತ್ಸಾಹವನ್ನು ಹೆಚ್ಚಿಸಲಿ" ಎಂದು ಹೇಳಿದ್ದಾರೆ.



ಉಪರಾಷ್ಟ್ರಪತಿಗಳ ಕಚೇರಿ ತನ್ನ ಟ್ವೀಟ್‌ನಲ್ಲಿ "ಓಣಂ ಶುಭ ಸಂದರ್ಭದಲ್ಲಿ ದೇಶದ ಜನರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಕೇರಳ ಪ್ರದೇಶದ ಪ್ರಸಿದ್ಧ ಪೌರಾಣಿಕ ರಾಜ ಮಹಾಬಲಿಯ ನೆನಪಿಗಾಗಿ ಓಣಂ ಆಚರಿಸಲಾಗುತ್ತದೆ. ಅವರ ಆದರ್ಶ ಸಾರ್ವಜನಿಕ ಕಲ್ಯಾಣ ಆಡಳಿತದಲ್ಲಿ, ರಾಜ್ಯದಲ್ಲಿ ಶಾಂತಿ ಮತ್ತು ಸಮೃದ್ಧಿ ಮೇಲುಗೈ ಸಾಧಿಸಿತು" ಎಂದು ಹೇಳಲಾಗಿದೆ. 


"ಓಣಂ ಸಮೃದ್ಧಿ, ಕರುಣೆ, ಸಹಾನುಭೂತಿ, ತ್ಯಾಗ, ನಿಷ್ಠೆ ಮತ್ತು ತೃಪ್ತಿಯ ಹಬ್ಬವಾಗಿದೆ. ಈ ಶುಭ ಸಂದರ್ಭವು ನಮ್ಮ ದೇಶದಲ್ಲಿ ಶಾಂತಿ, ಸಾಮರಸ್ಯ, ಸಮೃದ್ಧಿ ಮತ್ತು ಸಂತೋಷವನ್ನು ತರುತ್ತದೆ ಎಂದು ನಾನು ಬಯಸುತ್ತೇನೆ" ಎಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಹೇಳಿದ್ದಾರೆ.


ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಹ ಈ ಶುಭ ಸಂದರ್ಭದಲ್ಲಿ ಟ್ವೀಟ್ ಮಾಡಿದ್ದು, "ಓಣಂನ ಶುಭ ಸಂದರ್ಭದಲ್ಲಿ ಎಲ್ಲರಿಗೂ, ವಿಶೇಷವಾಗಿ ಕೇರಳದ ಜನತೆಗೆ ಶುಭಾಶಯಗಳು. ಈ ಹಬ್ಬವು ನಿಮ್ಮ ಜೀವನದಲ್ಲಿ ಸಂತೋಷ, ಉತ್ತಮ ಆರೋಗ್ಯ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ. ಓಣಂ ಶುಭಾಶಯಗಳು!" ಎಂದು ಹೇಳಿದ್ದಾರೆ.