ನವದೆಹಲಿ: ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ಮುಖಸ್ಥ ರಾಹುಲ್ ಗಾಂಧಿ ರಫೇಲ್ ಒಪ್ಪಂದದಲ್ಲಿ ನಡೆಯುತ್ತಿರುವ ತನಿಖೆಯಿಂದ ಸರ್ಕಾರ ಭೀತಿಗೆ ಸಿಲುಕಿದೆ ಆದ್ದರಿಂದ ಅವರು ಸಿಬಿಐ ಮುಖ್ಯಸ್ಥ ಅಲೋಕ್ ಕುಮಾರ್ ಮೇಲೆ ಕ್ರಮ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.



COMMERCIAL BREAK
SCROLL TO CONTINUE READING

ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮೋದಿ ಸರ್ಕಾರದ ವಿರುದ್ದ ಟೀಕೆ ಮಾಡಿದ ರಾಹುಲ್ ಗಾಂಧಿ "ಪ್ರಧಾನಿ ನರೇಂದ್ರ ಮೋದಿಯವರು ಮಧ್ಯರಾತ್ರಿಯಲ್ಲಿ ಸಿಬಿಐ ಮುಖ್ಯಸ್ಥರನ್ನು ತೆಗೆದುಹಾಕಿದ್ದಾರೆ ಏಕೆಂದರೆ ರಫೇಲ್ ಒಪ್ಪಂದದ ವಿಚಾರವಾಗಿ ತನಿಖೆಯಿಂದಾಗಿ ಅವರು ಭಯಭೀತಿಗೊಂಡಿದ್ದಾರೆ ಎಂದು ತಿಳಿಸಿದರು.


ಸಿಬಿಐ ನಿರ್ದೇಶಕರನ್ನು ನೇಮಕ ಮಾಡುವುದು ಮತ್ತು ತೆಗೆದು ಹಾಕುವುದನ್ನು ಪ್ರಧಾನಿ, ಮುಖ್ಯನ್ಯಾಯಮೂರ್ತಿ ಮತ್ತು ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಮೂವರ ಸದಸ್ಯರ ಸಮಿತಿಯಿಂದ ಮಾಡಲಾಗುತ್ತದೆ.ಆದರೆ ಮಧ್ಯರಾತ್ರಿ 2 ಗಂಟೆಗೆ ಸಿಬಿಐ ನಿರ್ದೇಶಕರನ್ನು  ಕಿತ್ತು ಹಾಕಲಾಗಿದೆ,ಇದು ಸಂವಿಧಾನಕ್ಕೆ,ಮುಖ್ಯ ನ್ಯಾಯಮೂರ್ತಿಗೆ ಮತ್ತು ಜನರಿಗೆ ಮಾಡಿರುವ ಅವಮಾನ ಎಂದು ರಾಹುಲ್ ಗಾಂಧಿ ಸರ್ಕಾರದ ವಿರುದ್ದ ಕಿಡಿಕಾರಿದರು.