ದೆಹಲಿ:  ವಿಜ್ಞಾನ ಭವನದಲ್ಲಿ ಇಂದು ನಡೆಯಲಿರುವ ಕೇಂದ್ರೀಯ ತನಿಖಾ ದಳದ (ಸಿಬಿಐ) ವಜ್ರ ಮಹೋತ್ಸವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಈ ಅದ್ದೂರಿ ಸಮಾರಂಭದಲ್ಲಿ ವಿಶೇಷ ಸೇವೆ ಸಲ್ಲಿಸಿದ್ದವರಿಗಾಗಿ ರಾಷ್ಟ್ರಪತಿಗಳಿಂದ ‌ಉತ್ತಮ ಪೊಲೀಸ್ ಪದಕ ಹಾಗೂ ಪ್ರಧಾನಿ ನರೇಂದ್ರ ಮೋದಿಯಿಂದ ಸಿಬಿಐನ ಅತ್ಯುತ್ತಮ ತನಿಖಾ ಅಧಿಕಾರಿಗಳಿಗೆ ಚಿನ್ನದ  ಪದಕ ಪ್ರದಾನ ಮಾಡಲಿದ್ದಾರೆ. ಅದೇ ಸಂದರ್ಭದಲ್ಲಿ ಪದಕದ ಜೊತೆಗೆ ಗೌರವಧನ ವಿತರಣೆ ನಡೆಯಲಿದೆ.


COMMERCIAL BREAK
SCROLL TO CONTINUE READING

ಈ ವೇಳೆ ಸಿಬಿಐನ ವಜ್ರ ಮಹೋತ್ಸವದ ವರ್ಷವನ್ನು ಗುರುತಿಸುವ ಸಲುವಾಗಿ  ಹೊಸ ಅಂಚೆ ಚೀಟಿ ಮತ್ತು ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಲು ಸಿದ್ಧರಾಗಿದ್ದಾರೆ. ಅದೇ ಸವಿ ಘಳಿಗೆಯಲ್ಲಿ ಸಿಬಿಐನ ಟ್ವಿಟರ್ ಹ್ಯಾಂಡಲ್ ಅನ್ನು ಸಹ ಪ್ರಾರಂಭಿಸಲಿದ್ದಾರೆ.


ಇದನ್ನೂ ಓದಿ: Viral Video: ಪಿಸ್ತೂಲ್‌ನಿಂದ ಕೇಕ್ ಕಟ್‌ ಪೊಲೀಸರಿಂದ ಹುಟ್ಟುಹಬ್ಬಕ್ಕೆ ಸಿಕ್ತು ಭರ್ಜರಿ ಗಿಫ್ಟ್!


ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇಂಟರ್‌ಪೋಲ್ ಜನರಲ್ ಅಸೆಂಬ್ಲಿಯಲ್ಲಿ ಈವೆಂಟ್ ಕುರಿತು ಸುದ್ದಿಗಳನ್ನು ಪ್ರಚಾರ ಮಾಡಲು ಅಸ್ಕರ್ ಬ್ಲೂ ಟಿಕ್‌ನೊಂದಿಗೆ ಹ್ಯಾಂಡಲ್ ಅನ್ನು ಪ್ರಾರಂಭಿಸಿದಾಗ ಸಿಬಿಐ ತನ್ನ ಮೊದಲ ಟ್ವಿಟರ್‌ನಲ್ಲಿ ಕಾಣಿಸಿಕೊಂಡಿತು. ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಅನ್ನು 1963 ರ ಏಪ್ರಿಲ್ 1 ರಂದು ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯದ ನಿರ್ಣಯದಿಂದ ಸ್ಥಾಪಿಸಲಾಯಿತು.


ಇದನ್ನೂ ಓದಿ: Viral Video: ಪ್ರತಿಭಟನೆ ಆಕ್ರೋಶದ ಮಧ್ಯೆಯು ಫುಲ್‌ ವೈರಲ್‌ ಆಯಿತು ಯುಕೆ ಪೋಲೀಸ್ ಮ್ಯಾನ್‌ ಡ್ಯಾನ್ಸ್‌ https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.