PM Modi US Visit: ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ನಾಲ್ಕು ದಿನಗಳ ಕಾಲ ತಮ್ಮ ಅಮೆರಿಕ ಪ್ರವಾಸದಲ್ಲಿದ್ದಾರೆ. ಪ್ರಧಾನಿ ಮೋದಿಯವರ ಈ ಯುಎಸ್ ಭೇಟಿಯ ಸಂದರ್ಭದಲ್ಲಿ ಅವರು ವಿವಿಧ ಕ್ಷೇತ್ರಗಳ ಸುಮಾರು ಎರಡು ಡಜನ್ ಅನುಭವಿಗಳನ್ನು ಭೇಟಿಯಾಗಲಿದ್ದಾರೆ. ಟೆಸ್ಲಾ ಸಿಇಒ ಮತ್ತು ಟ್ವಿಟರ್ ಮಾಲೀಕ ಎಲೋನ್ ಮಸ್ಕ್ ಅವರು ಪ್ರಧಾನಿ ಮೋದಿ ಭೇಟಿಯಾಗಲಿರುವ ಪ್ರಸಿದ್ಧ ವ್ಯಕ್ತಿಗಳಲ್ಲಿ ಶಾಮೀಳಾಗಿದ್ದಾರೆ. ಈ ಹಿಂದೆ, 2015 ರಲ್ಲಿ ಕ್ಯಾಲಿಫೋರ್ನಿಯಾದ ಟೆಸ್ಲಾ ಮೋಟಾರ್ಸ್ ಕಂಪನಿಯಲ್ಲಿ ಪ್ರಧಾನಿ ಮೋದಿ ಮತ್ತು ಎಲೋನ್ ಮಸ್ಕ್ ಭೇಟಿಯಾಗಿದ್ದರು ಮತ್ತು ಆಗ  ಟೆಸ್ಲಾ ಮುಖ್ಯಸ್ಥರಾಗಿದ್ದ ಎಲೋನ್ ಮಾಸ್ಕ್ ಟ್ವಿಟರ್‌ನ ಮಾಲೀಕರಾಗಿರಲಿಲ್ಲ. ಟೆಸ್ಲಾ ಭಾರತದಲ್ಲಿ ಕಾರ್ಖಾನೆಯನ್ನು ಸ್ಥಾಪಿಸಲು ಸ್ಥಳವನ್ನು ಹುಡುಕುತ್ತಿರುವ ಸಮಯದಲ್ಲಿ ಮೋದಿ ಮತ್ತು ಮಸ್ಕ್ ಅವರ ಈ ಸಭೆ ನಡೆಯುತ್ತಿರುವುದು ಭಾರಿ ಮಹತ್ವ ಪಡೆದುಕೊಂಡಿದೆ.


COMMERCIAL BREAK
SCROLL TO CONTINUE READING

ಪ್ರಧಾನಿ ಮೋದಿ ಅವರು ತಮ್ಮ ಅಮೆರಿಕ ಪ್ರವಾಸದ ವೇಳೆ 24 ವಿಶೇಷ ವ್ಯಕ್ತಿಗಳನ್ನು ಭೇಟಿ ಮಾಡಲಿದ್ದು, ವಿಶ್ವದ ಹಲವು ದೊಡ್ಡ ವ್ಯಕ್ತಿಗಳ ಹೆಸರು ಈ ಪಟ್ಟಿಯಲ್ಲಿ ಸೇರಿಕೊಂಡಿವೆ.


ಅಮೆರಿಕಾ ಪ್ರವಾಸದಲ್ಲಿ ಪ್ರಧಾನಿ ಮೋದಿ-ಯಾವಾಗ ಯಾರನ್ನ ಭೇಟಿ ಮಾಡ್ತಾರೆ ಗೊತ್ತಾ?
ಈ ಹಿಂದೆ ವಾಲ್ ಸ್ಟ್ರೀಟ್ ಜನರಲ್‌ಗೆ ನೀಡಿದ ಸಂದರ್ಶನದಲ್ಲಿ, ವಾಹನ ತಯಾರಕರು ಭಾರತೀಯ ಮಾರುಕಟ್ಟೆಯಲ್ಲಿ ಆಸಕ್ತಿ ಹೊಂದಿದ್ದಾರೆಯೇ ಎಂದು ಮಸ್ಕ್ ಅವರನ್ನು ಪ್ರಶ್ನಿಸಿದ್ದರು, ಅದಕ್ಕೆ ಮಸ್ಕ್ ಸಕಾರಾತ್ಮಕವಾಗಿ ಉತ್ತರಿಸಿದ್ದಾರೆ ಎಂಬುದು ಇಲ್ಲಿ ಗಮನಾರ್ಹ. ವರ್ಷದ ಅಂತ್ಯದ ವೇಳೆಗೆ ಟೆಸ್ಲಾ ಪ್ಲಾಂಟ್ ಸ್ಥಾಪಿಸಲು ತಮಗೆ ಭಾರತದಲ್ಲಿ ಭೂಮಿ ಸಿಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಎಲೋನ್ ಮಸ್ಕ್ ಹೊರತುಪಡಿಸಿ, ಪ್ರಧಾನಿ ಮೋದಿ ಅವರು ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞರು, ಕಲಾವಿದರು, ವಿಜ್ಞಾನಿಗಳು, ವಿದ್ವಾಂಸರು, ಉದ್ಯಮಿಗಳು, ಶಿಕ್ಷಣ ತಜ್ಞರು ಮತ್ತು ಆರೋಗ್ಯ ಕ್ಷೇತ್ರದ ತಜ್ಞರನ್ನು ಭೇಟಿಯಾಗಲಿದ್ದಾರೆ.


ಇದನ್ನೂ ಓದಿ-PM Modi Visit To US: ಅಮೆರಿಕಾದಲ್ಲಿ ಹೊಸ ಇತಿಹಾಸ ಬರೆಯಲಿರುವ ಪ್ರಧಾನಿ ಮೋದಿ, ಭೇಟಿಯ ಮಹತ್ವವೇನು?


ಎಲೋನ್ ಮಸ್ಕ್ ಅವರಲ್ಲದೆ, ಪ್ರಧಾನಿ ಮೋದಿ ಅವರು ಗಗನಯಾತ್ರಿ ಮತ್ತು ಲೇಖಕ ನೀಲ್ ಡಿಗ್ರಾಸ್ ಟೈಸನ್, ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಪಾಲ್ ರೋಮರ್, ಲೇಖಕ ನಿಕೋಲಸ್ ನಾಸಿಮ್ ತಾಲಿಬ್ ಮತ್ತು ಹೂಡಿಕೆದಾರ ರೇ ಡಾಲಿಯೊ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಅಧಿಕಾರಿಗಳ ಪ್ರಕಾರ, ಫಾಲು ಶಾ, ಜೆಫ್ ಸ್ಮಿತ್, ಮೈಕೆಲ್ ಫ್ರೊಮನ್, ಡೇನಿಯಲ್ ರಸೆಲ್, ಎಲ್ಬ್ರಿಡ್ಜ್ ಕಾಲ್ಬಿ, ಪೀಟರ್ ಆಗ್ರೆ, ಸ್ಟೀಫನ್ ಕ್ಲಾಸ್ಕೊ ಮತ್ತು ಚಂದ್ರಿಕಾ ಟಂಡನ್ ಸೇರಿದಂತೆ ಇತರ ಪ್ರಮುಖ ವ್ಯಕ್ತಿಗಳು ಪ್ರಧಾನಿಯನ್ನು ಭೇಟಿಯಾಗುವ ಸಾಧ್ಯತೆಯಿದೆ.


ಇದನ್ನೂ ಓದಿ-PM Modi US Visit: ಪ್ರಧಾನಿ ಮೋದಿ ಅಮೆರಿಕಾ ಪ್ರವಾಸಕ್ಕೆ ಅಡ್ಡಿಪಡಿಸಲು ಐಎಸ್ಐ ನೀಚ ಸಂಚು ಬಹಿರಂಗ


ಈ ಸಭೆಗಳಲ್ಲಿ ಉತ್ತಮ ಸಮನ್ವಯತೆ, ಅಮೇರಿಕಾದಲ್ಲಿನ ಬೆಳವಣಿಗೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಭಾರತದೊಂದಿಗೆ ಸಹಕರಿಸಲು ಜನರನ್ನು ಆಹ್ವಾನಿಸುವುದು ಸೇರಿದಂತೆ ಕಾರ್ಯಸೂಚಿಯಲ್ಲಿ ಒಳಗೊಂಡಿರುವ ಇತರ ವಿಷಯಗಳ ಬಗ್ಗೆ ಮಾತುಕತೆ ನಡೆಸಬಹುದು ಎಂದು ಅವರು ಹೇಳಿದ್ದಾರೆ. ಜನರಿಂದ ಜನರ ಸಂಪರ್ಕವನ್ನು ಹೆಚ್ಚಿಸಲು ಮೋದಿ ಅವರು ಭೇಟಿ ನೀಡುವ ದೇಶಗಳ ಗಣ್ಯರು ಮತ್ತು ವ್ಯಕ್ತಿಗಳನ್ನು ಆಗಾಗ್ಗೆ ಭೇಟಿ ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ