ನವದೆಹಲಿ: ಲೋಕಸಭಾ ಚುನಾವಣೆಯ ಪ್ರಚಾರವು ಕಾವೇರಿದ್ದು, ಈಗ ಪ್ರಧಾನಿ ನರೇಂದ್ರ ಮೋದಿ ಬರುವ ಎಪ್ರಿಲ್ 26ಕ್ಕೆ ವಾರಣಾಸಿಯಲ್ಲಿ ಚುನಾವಣಾ ನಾಮಪತ್ರವನ್ನು ಸಲ್ಲಿಸಲಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ. 


COMMERCIAL BREAK
SCROLL TO CONTINUE READING

ಪ್ರಧಾನಿ ಮೋದಿ ಏಪ್ರಿಲ್ 25,26,27 ರಂದು ಮೂರು ದಿನಗಳ ಕಾಲ ವಾರಣಾಸಿಯಲ್ಲಿ ತಂಗಿ, ಎಪ್ರಿಲ್ 26 ರಂದು ರೋಡ್ ಷೋ ಮೂಲಕ ಚುನಾವಣಾ ನಾಮಪತ್ರ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಮೋದಿ 2014ರಲ್ಲಿ ಮೊದಲ ಬಾರಿಗೆ ವಾರಣಾಸಿಯಲ್ಲಿ ಸ್ಪರ್ಧಿಸುವ ಮೂಲಕ ಲೋಕಸಭೆಗೆ ಪಾದಾರ್ಪನೆ ಮಾಡಿದ್ದರು. ಅಲ್ಲದೆ ಮೊದಲ ಬಾರಿಗೆ ಇವರ ನೇತೃತ್ವದಲ್ಲಿ ಕಾಂಗ್ರೆಸೇತರ ಪಕ್ಷವೊಂದು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು.


ಈ ಕಳೆದ ಸಾರಿಯಂತೆ ಈ ಬಾರಿ ಬಹುಮತ ಪಡೆಯುವುದು ಕಷ್ಟವಿದ್ದರೂ ಸಹಿತ ಮೈತ್ರಿ ಪಕ್ಷಗಳ ಸಹಾಯದೊಂದಿಗೆ ಅಧಿಕಾರಕ್ಕೆ ಬರುವತ್ತ ಬಿಜೆಪಿ ದೃಷ್ಟಿ ನೆಟ್ಟಿದೆ ಎನ್ನಲಾಗಿದೆ.ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಆಡಳಿತ ರಾಜ್ಯಗಳಾದ ರಾಜಸ್ತಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಡ್ ನಲ್ಲಿ ಅದು ಅಧಿಕಾರವನ್ನು ಕಳೆದುಕೊಂಡಿತ್ತು.ಆದರೆ ಇದಾದ ನಂತರ ಮೇಲ್ಜಾತಿ ಬಡವರಿಗೆ ನೀಡಲಾಗಿರುವ ಶೇ 10ರಷ್ಟು ಮೀಸಲಾತಿ ಹಾಗೂ ಪಾಕ್ ನ ಬಾಲಾಕೋಟ ದಾಳಿಯ ಕಾರಣದಿಂದಾಗಿ ಮತ್ತೆ ಬಿಜೆಪಿ ಪರ ಅಲೆಯನ್ನು ಗಳಿಸಿಕೊಳ್ಳುವಲ್ಲಿ ಪ್ರಧಾನಿ ಮೋದಿ ಯಶಸ್ವಿಯಾಗಿದ್ದರು.