ಪ್ರಧಾನಿ ಮೋದಿಯವರ `ಪರೀಕ್ಷಾ ಪೇ ಚರ್ಚಾ` ಕಾರ್ಯಕ್ರಮದಲ್ಲಿ ಬದಲಾವಣೆ
ವಿದ್ಯಾರ್ಥಿಗಳೊಂದಿಗೆ ಪ್ರಧಾನ ಮಂತ್ರಿಯ ಈ ಚರ್ಚೆಯ ಉದ್ದೇಶವು ವಿದ್ಯಾರ್ಥಿಗಳ ಆತ್ಮಸ್ಥೈರ್ಯವನ್ನು ಹೆಚ್ಚಿಸುವುದು ಮತ್ತು ಪರೀಕ್ಷೆಯ ಒತ್ತಡವನ್ನು ಕಡಿಮೆ ಮಾಡುವುದು.
ನವದೆಹಲಿ: ಪರೀಕ್ಷಾ ಒತ್ತಡವನ್ನು ನಿವಾರಿಸಲು ಭಾರತ ಮತ್ತು ವಿದೇಶಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi)ಯವರ ಸಂವಹನ ಕಾರ್ಯಕ್ರಮ "ಪರೀಕ್ಷಾ ಪೇ ಚರ್ಚಾ(Pariksha Pe Charcha) 2020" ಅನ್ನು 2020 ರ ಜನವರಿ 20 ಕ್ಕೆ ಬೆಳಿಗ್ಗೆ 11 ಗಂಟೆಗೆ ಮರು ನಿಗದಿಪಡಿಸಲಾಗಿದೆ. ಪೊಂಗಲ್, ಮಕರ ಸಂಕ್ರಾಂತಿ, ಲೋಹ್ರಿ, ಓಣಂ ಮತ್ತು ದೇಶಾದ್ಯಂತದ ಇತರ ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆ ಮಾಡಲಾಗಿದೆ ಎಂದು ಸರ್ಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಕಾರ್ಯಕ್ರಮವನ್ನು ಈ ಮೊದಲು 2020 ರ ಜನವರಿ 16 ರಂದು ನಡೆಸಲು ನಿರ್ಧರಿಸಲಾಗಿತ್ತು.
ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಅನನ್ಯ ಕಾರ್ಯಕ್ರಮದಲ್ಲಿ ಹೆಚ್ಚಿನ ಉತ್ಸಾಹದಿಂದ ಭಾಗವಹಿಸುತ್ತಾರೆ. ಏಕೆಂದರೆ ಬೋರ್ಡ್ ಪರೀಕ್ಷೆಗಳು ಮತ್ತು ವಾರ್ಷಿಕ ಪರೀಕ್ಷೆಗಳ ಮೊದಲು ಪಿಎಂ ಮೋದಿ ವಿದ್ಯಾರ್ಥಿಗಳೊಂದಿಗೆ ಪರೀಕ್ಷೆ ಬಗ್ಗೆ ಚರ್ಚಿಸುತ್ತಾರೆ. ವಿದ್ಯಾರ್ಥಿಗಳೊಂದಿಗೆ ಪ್ರಧಾನ ಮಂತ್ರಿಯ ಈ ಚರ್ಚೆಯ ಉದ್ದೇಶವು ವಿದ್ಯಾರ್ಥಿಗಳ ಆತ್ಮಸ್ಥೈರ್ಯವನ್ನು ಹೆಚ್ಚಿಸುವುದು ಮತ್ತು ಪರೀಕ್ಷೆಯ ಒತ್ತಡವನ್ನು ಕಡಿಮೆ ಮಾಡುವುದು.
ಮೈಗೊವ್ ಸಹಭಾಗಿತ್ವದಲ್ಲಿ ಮಾನವ ಸಂಪನ್ಮೂಲ ಸಚಿವಾಲಯವು 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಧಾನಮಂತ್ರಿಗಳ ಸಂವಹನ ಕಾರ್ಯಕ್ರಮದ ಮೂರನೇ ಆವೃತ್ತಿಯ ಶಾಲಾ ವಿದ್ಯಾರ್ಥಿಗಳೊಂದಿಗೆ "ಪರೀಕ್ಷಾ ಪೇ ಚರ್ಚಾ 2020" ಗಾಗಿ "ಕಿರು ಪ್ರಬಂಧ" ಸ್ಪರ್ಧೆಯನ್ನು ಪ್ರಾರಂಭಿಸಿದೆ. ಸ್ಪರ್ಧೆಯ ನಮೂದುಗಳನ್ನು ಆನ್‌ಲೈನ್‌ನಲ್ಲಿ 2019 ರ ಡಿಸೆಂಬರ್ 2 ರಿಂದ 2019 ರ ಡಿಸೆಂಬರ್ 23 ರವರೆಗೆ www.mygov.in ಮೂಲಕ ಆಹ್ವಾನಿಸಲಾಗಿದೆ. ಹಿಂದಿನ ವರ್ಷಗಳಂತೆ, ಈವೆಂಟ್‌ಗಾಗಿ ತಮ್ಮ ಪ್ರಶ್ನೆಗಳನ್ನು ಆನ್‌ಲೈನ್‌ನಲ್ಲಿ ಕಳುಹಿಸಲು ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗಿದೆ.
ಆನ್‌ಲೈನ್ ಪ್ರತಿಕ್ರಿಯೆಗಳ ಆಧಾರದ ಮೇಲೆ ಅವರ ನಮೂದುಗಳನ್ನು ಅತ್ಯುತ್ತಮ ಎಂದು ನಿರ್ಣಯಿಸಲಾಗುತ್ತದೆ. ದೆಹಲಿಯಲ್ಲಿ ಟಾಕಟೋರಾ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರನ್ನು ಆಹ್ವಾನಿಸಲಾಗುತ್ತದೆ.
ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳೊಂದಿಗೆ ಪ್ರಧಾನಮಂತ್ರಿಗಳ ಸಂವಹನ ಕಾರ್ಯಕ್ರಮದ ಮೊದಲ ಆವೃತ್ತಿ "ಪರೀಕ್ಷಾ ಪೇ ಚರ್ಚಾ 1.0" ಫೆಬ್ರವರಿ 16, 2018 ರಂದು ನವದೆಹಲಿಯ ಟಾಕಟೋರಾ ಕ್ರೀಡಾಂಗಣದಲ್ಲಿ ನಡೆಯಿತು. ಈ ಸಂವಾದ ಕಾರ್ಯಕ್ರಮದ ಎರಡನೇ ಆವೃತ್ತಿಯಾದ "ಪರೀಕ್ಷಾ ಪೇ ಚರ್ಚಾ 2.0" ಸಹ ದೆಹಲಿ 29 ಜನವರಿ 2019 ರಂದು ನ್ಯೂ ಟಾಕಟೋರಾ ಕ್ರೀಡಾಂಗಣದಲ್ಲಿ ನಡೆಯಿತು.
ಶಾಲಾ ವಿದ್ಯಾರ್ಥಿಗಳೊಂದಿಗೆ "ಪರೀಕ್ಷಾ ಪೇ ಚರ್ಚಾ 2020" ಕಾರ್ಯಕ್ರಮದ ಮೂರನೇ ಆವೃತ್ತಿಯನ್ನು 2020 ರ ಜನವರಿ 16 ರಂದು ನವದೆಹಲಿಯ ಟಾಕಟೋರಾ ಕ್ರೀಡಾಂಗಣದಲ್ಲಿ ನಡೆಸಲು ನಿಗದಿಯಾಗಿತ್ತು. ಆದಾಗ್ಯೂ, ಪೊಂಗಲ್ / ಮಕರ ಸಕ್ರಾಂತಿ ಕಾರಣ ದಕ್ಷಿಣ ರಾಜ್ಯಗಳಲ್ಲಿನ ಶಾಲಾ ರಜಾದಿನಗಳನ್ನು ಗಮನದಲ್ಲಿಟ್ಟುಕೊಂಡು, ಇದನ್ನು ಜನವರಿ 20, 2020 ರಂದು ದೆಹಲಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ.