ವಾರಣಾಸಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಎಪ್ರಿಲ್ 26 ರಂದು ನಾಮಪತ್ರ ಸಲ್ಲಿಸಲಿದ್ದು, ಅದಕ್ಕೂ ಮೊದಲು ವಾರಣಾಸಿಯಲ್ಲಿ ಗುರುವಾರ ಮೆಗಾ ರೋಡ್ ಶೋ ಮತ್ತು ಗಂಗಾ ಆರತಿ ನಡೆಸಲಿದ್ದಾರೆ.


COMMERCIAL BREAK
SCROLL TO CONTINUE READING

ಈ ರೋಡ್ ಶೋನಲ್ಲಿ ಪ್ರಧಾನಿ ಮೋದಿಯವರಿಗೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿಯಾಗಲಿದ್ದು ಎನ್​ಡಿಎ ಮೈತ್ರಿಕೂಟದ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಲಿದೆ. 


ಭಾರತೀಯ ಜನತಾ ಪಕ್ಷ(ಬಿಜೆಪಿ)ದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವರಾದ  ನಿತಿನ್ ಗಡ್ಕರಿ, ಸುಷ್ಮಾ ಸ್ವರಾಜ್, ಪಿಯೂಷ್ ಗೋಯಲ್ ಮತ್ತು ಇತರ ಪಕ್ಷದ ನಾಯಕರು ಲಕ್ಷ್ಮಣ್ ಆಚಾರ್ಯ, ಸುನಿಲ್ ಒಜಾ ಮತ್ತು ಅಶುತೋಷ್ ಟಂಡನ್ ಅವರು ಪ್ರಧಾನಮಂತ್ರಿಯವರಿಗೆ ರೋಡ್ ಶೋ ವೇಳೆ ಸಾಥ್ ನೀಡಲಿದ್ದಾರೆ.


ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಪ್ರಕಾಶ್ ಸಿಂಗ್ ಬಾದಲ್, ಲೋಕ ಜನ ಶಕ್ತಿ ಪಕ್ಷದ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್ ಮತ್ತು ಉತ್ತರ ಪೂರ್ವದ ಡೆಮಾಕ್ರಟಿಕ್ ಅಲೈಯನ್ಸ್ (ಎನ್ಇಡಿಎ) ಯ ಹಲವು ಪ್ರಮುಖ ನಾಯಕರು ಸೇರಿದಂತೆ ಎನ್ಡಿಎ ನಾಯಕರು ಸಂದರ್ಭದಲ್ಲಿ ಹಾಜರಿರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.


ವಾರಣಾಸಿಯ ಬಾಬತ್ಪುರ್ ವಿಮಾನ ನಿಲ್ದಾಣಕ್ಕೆ ಗುರುವಾರ ಮಧ್ಯಾಹ್ನ 2 ಗಂಟೆಗೆ ಬಂದಿಳಿಯಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಲ್ಲಿಂದ ನೇರವಾಗಿ ಕಾಲ ಭೈರವ ದೇವಾಲಯಕ್ಕೆ ತೆರಳಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ  ಬೆನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಲಂಕಾ ಗೇಟ್ ಬಳಿ ಪಂಡಿತ್ ಮದನ್ ಮೋಹನ್ ಮಾಲ್ವಿಯ ಪ್ರತಿಮೆಗೆ ಪ್ರಧಾನಿ ಮೋದಿಯವರಿಂದ ಮಾಲಾರ್ಪಣೆ ಮಾಡುವ ಮೂಲಕ  ರೋಡ್ ಶೋ ಆರಂಭವಾಗಲಿದೆ.


ರೋಡ್ ಶೋ ವೇಳೆ  ಸುಮಾರು 150 ಸ್ಥಳಗಳಲ್ಲಿ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ವ್ಯವಸ್ಥೆ ಮಾಡಲಾಗಿದ್ದು, ಮದನ್ಪುರಾ ಮತ್ತು ಸೋನಾರ್ಪುರದ ಪ್ರಮುಖ ಮುಸ್ಲಿಂ ಪ್ರದೇಶಗಳ ಮೂಲಕ ರೋಡ್ ಶೋ ಹಾದು ಹೋಗುಹೋಗಲಿದೆ. 


ಮೋದಿ ರೋಡ್ ಶೋ ಸಾಗುವ ಮಾರ್ಗ:
ಬಿಎಚ್ಯು (ಲಂಕಾ ಗೇಟ್) - ರವಿದಾಸ್ ಗೇಟ್ - ಅಸ್ಸಿ ಚೌರಾಹ - ಭಾಡಿನಿ - ಶಿವಾಲಯ - ಸೋನಾರ್ಪುರಾ - ಪಾಂಡೆ ಹವೇಲಿ - ಮದನ್ಪುರ - ಜಂಗಂಬಾಡಿ - ಗೋಡೋಲಿಯಾ - ಕಾಶಿ ವಿಶ್ವನಾಥ್ - ದಶಾಶ್ವಮೇಧ ಘಾಟ್. ದಶಾಶ್ವಮೇಧ ಘಾಟಿನಲ್ಲಿ ಸಂಜೆ 6 ಗಂಟೆಗೆ "ಗಂಗಾ ಆರತಿ" ಯ ಮೂಲಕ ರೋಡ್ ಶೋ ಕೊನೆಗೊಳ್ಳುತ್ತದೆ.


ನಂತರ ಸಂಜೆ ಈ ಸಭೆಯು ನಗರದ ಹೋಟೆಲ್ ಡಿ ಪ್ಯಾರಿಸ್ನಲ್ಲಿ ಪ್ರಧಾನಿ ಮೋದಿಯವರು ತಮ್ಮ ಕ್ಷೇತ್ರದ 3000 ಬುದ್ಧಿಜೀವಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ತನ್ನ 'ಮಿಷನ್ ಆಲ್' ಕಾರ್ಯಕ್ರಮದ ಭಾಗವಾಗಿ ಅವರು ಸಮಾಜದ ಎಲ್ಲ ವಿಭಾಗಗಳ ಜನರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. 


ವಾರಣಾಸಿಗೆ ಭೇಟಿ ನೀಡುವ ಮೊದಲು  ಬೆಳಿಗ್ಗೆ 10 ಗಂಟೆ ಬಿಹಾರದ ದರ್ಭಾಂಗದಲ್ಲಿ ಮತ್ತು ಮಧ್ಯಾಹ್ನ 1 ಗಂಟೆಗೆ ಉತ್ತರ ಪ್ರದೇಶದ ಬಂಡಾದಲ್ಲಿ ಪ್ರಧಾನಿ ಮೋದಿ ರ‍್ಯಾಲಿ ನಡೆಯಲಿದೆ.