ನವದೆಹಲಿ: ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. ಅದಕ್ಕೂ ಮೊದಲು ಪ್ರಧಾನಮಂತ್ರಿ ನರೇಂದ್ರ ಮೋದಿ "ಯೋಗವನ್ನು ಜೀವನದ ಅವಿಭಾಜ್ಯ ಅಂಗವಾಗಿ ಅಳವಡಿಸಿಕೊಳ್ಳುವಂತೆ ಮತ್ತು ಇತರರನ್ನು ಅದೇ ರೀತಿ ಮಾಡಲು ಪ್ರೇರೇಪಿಸುವಂತೆ" ದೇಶದ ಜನತೆಗೆ ಕರೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಪ್ರಧಾನಮಂತ್ರಿ ನರೇಂದ್ರ ಮೋದಿ ಅನಿಮೇಟೆಡ್ ವೀಡಿಯೊ ಒಂದನ್ನು ತಮ್ಮ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಹಂಚಿಕೊಂಡಿದ್ದಾರೆ, ಅದರಲ್ಲಿ ತ್ರಿಕೋನಾಸನ(ಒಂದು ಯೋಗ ಭಂಗಿ)ಯನ್ನು ತೋರಿಸಲಾಗಿದೆ.



ಯೋಗ ಪ್ರಯೋಜನಕಾರಿ ಎಂದಿರುವ ಅವರು, "ಜೂನ್ 21ರಂದು ನಾವು ಯೋಗ ದಿನವನ್ನು ಆಚರಿಸುತ್ತೇವೆ. ಯೋಗವನ್ನು ನಿಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಮಾಡಲು ಮತ್ತು ಇತರರನ್ನು ಅದೇ ರೀತಿ ಪ್ರೇರೇಪಿಸುವಂತೆ ನಾನು ನಿಮ್ಮೆಲ್ಲರಲ್ಲೂ ಕೇಳಿಕೊಳ್ಳುತ್ತೇನೆ" ಎಂದಿದ್ದಾರೆ.


2015 ರಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯಿಂದ ಜೂನ್ 21 ನ್ನು ಯೋಗ ದಿನ ಎಂದು ಘೋಷಿಸಿದ ಬಳಿಕ ಸರ್ಕಾರವು ವಿವಿಧ ಯೋಗ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.