ನವದೆಹಲಿ: ಸ್ವಲ್ಪ ದಿನದ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಯೋಗ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು, ಇದು ಬಹಳಷ್ಟು ಜನರಿಗೆ ಪ್ರೇರಣೆಯನ್ನೂ ನೀಡಿತ್ತು. ಈಗ ಹೊಸ ವಿಡಿಯೋ ನಮಗೆ ಸಂಚಾರ ನಿಯಮಗಳನ್ನು ಪಾಲಿಸುವುದರ ಬಗ್ಗೆ ಕಲಿಸುತ್ತದೆ. ಪ್ರೆಸ್ ಇನ್ಫರ್ಮೇಷನ್ ಬ್ಯೂರೊ(PIB) ಪ್ರಧಾನಮಂತ್ರಿಯ ಈ ಸ್ಪೂರ್ತಿದಾಯಕ ವೀಡಿಯೊವನ್ನು ಬಿಡುಗಡೆ ಮಾಡಿದೆ, ಇದರಲ್ಲಿ ರಸ್ತೆ ಸುರಕ್ಷತೆಯನ್ನು ಪ್ರಮೋಟ್ ಮಾಡಲಾಗಿದೆ. 


COMMERCIAL BREAK
SCROLL TO CONTINUE READING

ಪ್ರಧಾನ ಮಂತ್ರಿ ತನ್ನ ಕಾರಿನಲ್ಲಿ ಕುಳಿತುಕೊಂಡ ತಕ್ಷಣವೇ ಅವರು ತಮ್ಮ ಸೀಟ್ ಬೆಲ್ಟ್ ಹಾಕಿಕೊಳ್ಳುವ ದೃಶ್ಯ ಈ ವಿಡಿಯೋದಲ್ಲಿ ಸೆರೆಯಾಗಿದೆ. "ಕಾರು ಹತ್ತಿದೊಡನೆ ಪ್ರಧಾನಿಯವರೇ ಸೀಟ್ ಬೆಲ್ಟ್ ಹಾಕಿಕೊಳ್ಳುತ್ತಾರೆ... ನಿಮಗೆ ಹಾಗೆ ಮಾಡಲು ಏನು ತೊಂದರೆ??" ಎಂದು ವಿಡಿಯೋವನ್ನು ಹಂಚಿಕೊಳ್ಳುವ ಸಮಯದಲ್ಲಿ ಪಿಐಬಿ ಕೇಳಿದೆ.



ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನದ ಹಿನ್ನೆಲೆಯಲ್ಲಿ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ವಿಡಿಯೋ ಬಿಡುಗಡೆ ಮಾಡಲಾಗಿದೆ. ಪ್ರಚಾರದ ಹೆಸರು 'ರಸ್ತೆ ಸುರಕ್ಷತೆ ಸರ್ವೈವಲ್'(ಸಡಕ್ ಸುರಕ್ಷಾ, ಜೀವನ್ ರಕ್ಷಾ) ಆಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾರಿನೊಳಗೆ ಕುಳಿತೊಡನೆಯೇ ಸೀಟ್ ಬೆಲ್ಟ್ ಹಾಕಿಕೊಳ್ಳುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. PIB ಈ ವೀಡಿಯೊದ ಶೀರ್ಷಿಕೆಯಲ್ಲಿ 'ವೇರ್ ಯುವರ್ ಸೀಟ್ ಬೆಲ್ಟ್' ಎಂದು ಬರೆದಿದೆ. ಎಲ್ಲರೂ ಸಂಚಾರ ನಿಯಮವನ್ನು ಪಾಲಿಸುವಂತೆ ಮಾಡುವುದು ಇದರ ಉದ್ದೇಶವಾಗಿದೆ.