ನೇತಾಜಿ ಆಜಾದ್ ಹಿಂದ್ ಘೋಷಣೆಗೆ 75 ರ ಸಂಭ್ರಮ, ಕೆಂಪುಕೋಟೆಯಲ್ಲಿ ಮತ್ತೆ ಹಾರಿದ ತ್ರಿವರ್ಣ ಧ್ವಜ
ಪ್ರಧಾನಿ ನರೇಂದ್ರ ಮೋದಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ `ಆಜಾದ್ ಹಿಂದ್ ಸರ್ಕಾರ್` ಘೋಷಣೆಯ 75 ನೇ ವಾರ್ಷಿಕೋತ್ಸವದ ನೆನಪಿಗಾಗಿ ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ಭಾನುವಾರದಂದು ತ್ರಿವರ್ಣ ಧ್ವಜವನ್ನು ಹಾರಿಸಿದರು.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 'ಆಜಾದ್ ಹಿಂದ್ ಸರ್ಕಾರ್' ಘೋಷಣೆಯ 75 ನೇ ವಾರ್ಷಿಕೋತ್ಸವದ ನೆನಪಿಗಾಗಿ ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ಭಾನುವಾರದಂದು ತ್ರಿವರ್ಣ ಧ್ವಜವನ್ನು ಹಾರಿಸಿದರು.
ಈ ಸಂದರ್ಭ ಮಾತನಾಡಿದ ಪ್ರಧಾನಿ ಮೋದಿ ದೇಶದ ಸ್ವಾತಂತ್ರ್ಯಹೋರಾಟಕ್ಕೆ ನೇತಾಜಿಯವರು ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಸ್ಮರಿಸಿದರು.
''ಪ್ರತಿಯೊಬ್ಬರೂ ಸಮಾನ ಹಕ್ಕುಗಳು ಮತ್ತು ಸಮಾನ ಅವಕಾಶಗಳನ್ನು ಹೊಂದಿವ ಭರವಸೆಯನ್ನು ನೇತಾಜಿ ಭಾರತಕ್ಕೆ ನೀಡಿದ್ದರು. ತನ್ನ ಸಂಪ್ರದಾಯಗಳ ಬಗ್ಗೆ ಹೆಮ್ಮೆ ಪಡುವುದರ ಜೊತೆಗೆ ಸಮೃದ್ಧ ರಾಷ್ಟ್ರದ ದೃಷ್ಟಿಕೋನವನ್ನು ಹೊಂದಿದ್ದರು,ಎಲ್ಲಾ ವಿಭಾಗಗಳಲ್ಲಿರುವ ಒಡೆದಾಳುವ ನೀತಿಯನ್ನು ನಿರ್ಮೂಲನೆ ಮಾಡ ಮಾಡಬೇಕೆಂದು ಅವರು ಹೇಳಿದ್ದರು ಆದರೆ ಇವೆಲ್ಲ ಕನಸುಗಳು ಇಂದಿಗೂ ಈಡೇರದೆ ಹಾಗೆ ಉಳಿದಿವೆ" ಎಂದು ಪ್ರಧಾನಿ ತಿಳಿಸಿದರು.
1943 ರ ಅಕ್ಟೋಬರ್ 21 ರಂದು ಸಿಂಗಾಪುರದಲ್ಲಿ ಪ್ರಾಂತೀಯ ಆಜಾದ್ ಹಿಂದ್ ಸರಕಾರವನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ಥಾಪಿಸಿದರು.1944 ರ ಆಗಸ್ಟ್ 14 ರಂದು ಕರ್ನಲ್ ಸೌಕಾತ್ ಅಲಿ ಮಲಿಕ್ ನೇತೃತ್ವದಲ್ಲಿ ಐಎನ್ಎದ ಬಹದ್ದೂರ್ ಬ್ರಿಗೇಡ್ ಮಣಿಪುರದಲ್ಲಿ ಇಂಡಿಯಾ- ಮ್ಯಾನ್ಮಾರ್ ಗಡಿಯಲ್ಲಿರುವ ಮೊಇರಂಗ್ ನ್ನು ಆಕ್ರಮಿಸಿಕೊಂಡಿತ್ತು.